ನವ ಮುಂಬಯಿಯಲ್ಲಿ ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ ಸಮಾಲೋಚನಾ ಸಭೆ

Upayuktha
0



ಮುಂಬಯಿ: ನವಮುಂಬೈಯ ನೂತನ ಶಾಖೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಪೂಜ್ಯ ಶ್ರೀಪಾದರ 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾಸ್ಯ ಸಮಾಲೋಚನಾ ಸಭೆ ಶನಿವಾರ (ಜು.18) ನಡೆಯಿತು.


ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾಗಿ ಶಿವರಾಮ ಶೆಟ್ಟಿ ಅಜೆಕಾರ್, ಎಲ್ಲರ ಅಪೇಕ್ಷೆಯ ಮೇರೆಗೆ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ವಿದ್ವಾನ್ ಪ್ರಹಲ್ಲಾದ ಆಚಾರ್ಯ ನಾಗರಹಳ್ಳಿ, ಕರ್ನಾಟಕದ ನಿವೃತ್ತ ನ್ಯಾಯಾಧೀಶರಾದ ದಿನೇಶ್ ಕುಮಾರ್, ಮುಂಬೈಯ ಪ್ರಸಿದ್ಧ ಗೋಕುಲದ ಅಧ್ಯಕ್ಷರಾದ ಡಾ ಸುರೇಶ ರಾವ್, ಹಾಗೂ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಆದ ಎನ್ ಆರ್ ರಾವ್ ಇವರುಗಳನ್ನು ನೇಮಿಸಲಾಯಿತು. ಪೂಜ್ಯ ಶ್ರೀಪಾದರ ಆಪ್ತರಾದ ಬಿ ಆರ್ ಶೆಟ್ಟಿ, ಅಣ್ಣಿ ಶೆಟ್ಟಿ ಘಂನ್ಸೋಲಿ, ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿ, ಸುರೇಶ ಕಾಂಚನ್, ಹಾಗೂ ಹರೀಶ್ ಅಮೀನ್, ಸೂರ್ಯಕಾಂತ್ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಯಿತು. 


ಕಾರ್ಯಧ್ಯಕ್ಷರಾಗಿ ಕಳತ್ತೂರು ಗೋಪಾಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಪತ್ರಕರ್ತರಾದ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾಗಿ ವಿದ್ವಾನ್ ರಾಘವೇಂದ್ರ ಜಮದಗ್ನಿ, ಹಾಗೂ ವಿದ್ವಾನ್ ಗುರುಪ್ರಸಾದ್ ಘಂನ್ಸೋಲಿ ಅವರನ್ನು ಆಯ್ಕೆ ಮಾಡಲಾಯಿತು. 

ಖಜಾಂಜಿಗಳಾಗಿ ಸಂತೋಷ್ ಸಿ ಶೆಟ್ಟಿ, ಸಹ ಖಜಾಂಜಿಗಳಾಗಿ ಗುರುಪ್ರಸಾದ್ ಚೆಂಬೂರು, ಹಾಗೂ ಪ್ರಧಾನ ಸಂಚಾಲಕರಾಗಿ ಸುಧೀರ್ ಆರ್ ಎಲ್ ಶೆಟ್ಟಿ ನೇಮಕಗೊಂಡರು. ಬೆಂಗಳೂರು ಗೋವರ್ಧನ ಕ್ಷೇತ್ರದ ಮೇಲ್ವಿಚಾರಕರಾದ ಎ.ಬಿ ಕುಂಜಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.


ಆಗಸ್ಟ್ 10ರಂದು ಪೂಜ್ಯ ಶ್ರೀಪಾದರ ಚಾತುರ್ಮಾಸ್ಯ ಪ್ರಯುಕ್ತ ನವಮುಂಬೈ ಪುರಪ್ರವೇಶ ನಡೆಯಲಿದ್ದು 12ರಿಂದ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ. ಆಗಸ್ಟ್ 15ರಂದು ನವ ಮುಂಬೈಯಲ್ಲಿ ಇರುವ ಪುತ್ತಿಗೆ ಮಠದ ನೂತನ ಶಾಖೆ ಲೋಕಾರ್ಪಣೆಗೊಳ್ಳಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top