ಪೂರ್ಣಿಮಾ ಪೇಜಾವರ ಅವರಿಗೆ ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟಿನಿಂದ ಸನ್ಮಾನ

Upayuktha
0



ಮಂಗಳೂರು: ಹಿರಿಯ ತಾಳಮದ್ದಳೆ ಅರ್ಥಧಾರಿ, ಸಂಘಟಕಿ, ಯಕ್ಷಮಂಜುಳಾ, ಕದ್ರಿ, ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಅವರಿಗೆ ವನಜಾಕ್ಷಿಯಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ 2026 ನೇ ಸಾಲಿನ ಸನ್ಮಾನ ನೀಡಿ ಗೌರವಿಸಲಾಯಿತು.


ಮೂಡಬಿದ್ರೆ ಪ್ರೀತಮ್ ಗಾರ್ಡನ್ ಸಭಾಭವನದಲ್ಲಿ ನಡೆದ ಯಕ್ಷ ದೇವ ಮಿತ್ರ ಕಲಾ ಮಂಡಳಿಯ 29ನೇ ಯಕ್ಷ ಸಂಭ್ರಮದ ವೇದಿಕೆಯಲ್ಲಿ ಟ್ರಸ್ಟ್ನ ಅಧ್ಯಕ್ಷ ಶ್ರೀ ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡೆನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಇವರ ಘನಉಪಸ್ಥಿತಿಯಲ್ಲಿ ಪೂರ್ಣಿಮಾ ಪೇಜಾವರ ಅವರನ್ನು ಸನ್ಮಾನಿಸಲಾಯಿತು.


ಟ್ರಸ್ಟಿ ಶ್ರೀಮತಿ ದೀಪ್ತಿ ಬಾಲಕೃಷ್ಣ ಸನ್ಮಾನಪತ್ರ ವಾಚಿಸಿದರು. ಟ್ರಸ್ಟಿಗಳಾದ ಬಲರಾಮ ಕೆ.ಎಸ್., ಬಾಲಕೃಷ್ಣ ಭಟ್, ಅಲಕಾ ಬಲರಾಮ, ಡಾ. ಮೋಹನ್ ಆಳ್ವಾ, ಕಟೀಲು ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ನಾಗರಾಜ ಉಪಾಧ್ಯಾಯ, ಮಾಜಿ ಜಿ.ಎಂ. ಚಂದ್ರಶೇಖರ ರಾವ್, ಮಾಜಿ ಸಚಿವ ಅಭಯಚಂದ್ರ ಜೈನ್, ಸುದರ್ಶನ ಎಂ, ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತಶೆಟ್ಟಿ, ಬೊಕ್ಕಸ ಚಂದ್ರಶೇಖರ ರಾವ್, ರವಿಪ್ರಸಾದ್ ಕೆ.ಶೆಟ್ಟಿ, ನೆಲ್ಲಿಮಾರ್ ಸದಾಶಿವ ರಾವ್ ಉಪಸ್ಥಿತರಿದ್ದರು. ಯಕ್ಷದೇವ ಮಿತ್ರ ಕಲಾಮಂಡಳಿ ಅಧ್ಯಕ್ಷರಾದ ಶ್ರೀ ಎಂ.ದೇವಾನಂದ ಭಟ್ ಪ್ರಸ್ತಾವನೆಗೈದು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top