ನೀಟ್ ಯುಜಿ 2026 ಉಡುಪಿ ಆಕಾಶ್ ಸಂಸ್ಥೆಯ 9 ವಿದ್ಯಾರ್ಥಿಗಳಿಗೆ ಉನ್ನತ ರ‍್ಯಾಂಕ್‌

Upayuktha
0



ಉಡುಪಿ, ಜುಲೈ 20: ಪರೀಕ್ಷಾ ಸಿದ್ಧತೆಯ ಪ್ರಮುಖ ಸಂಸ್ಥೆಯಾದ ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ ಉಡುಪಿ ಶಾಖೆಯ 9 ವಿದ್ಯಾರ್ಥಿಗಳು ನೀಟ್ ಯುಜಿ  2026 ರ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್‌ಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.


ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ. ಉಡುಪಿ ಶಾಖೆಯಲ್ಲಿ ಸಮನ್ವಿ ಮಯ್ಯ (AIR 3525) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ಪಂಚಮಿ ಎಂ.ಎಸ್. (AIR 17331), ಮಹಮ್ಮದ್ ತಾಲ್ಹಾ (AIR 26479), ನರೇಂದ್ರ ಎಸ್. ಪ್ರಭು (AIR 50906), ದೇವ್ ಶರ್ಮಾ (AIR 57000), ಗ್ರಾಜಿಯಾ ಮಾರಿಯಾ ಬೆನ್ಸನ್ (AIR 60815), ದಿವ್ಯಂ ಹಿತೇಶ್ ಶಾಹ (AIR 72158), ಅನ್ವೇಷಾ ಜಿ. ಪಾಟೀಲ್ (AIR 88326) ಮತ್ತು ಆಯಿಷಾ ಫತೇಅಲಿ ಉಪ್ಪಿನ್ (AIR 89069) ಉನ್ನತ ಸ್ಥಾನ ಗಳಿಸಿದ್ದಾರೆ. 


ರಾಷ್ಟ್ರಮಟ್ಟದಲ್ಲಿ ಆಕಾಶ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.


ತಮ್ಮ ಯಶಸ್ಸಿಗೆ ಆಕಾಶ್ ಸಂಸ್ಥೆಯ ನಿಯಮಿತ ಮಾಕ್ ಟೆಸ್ಟ್‌ಗಳು, ಸಂದೇಹ ಪರಿಹಾರ ಸೆಶನ್‌ಗಳು ಮತ್ತು ಪೋಷಕರು-ಉಪನ್ಯಾಸಕರ ನಿರಂತರ ಬೆಂಬಲವೇ ಕಾರಣ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಶಿಸ್ತು ಮತ್ತು ಸ್ಥಿರತೆಯನ್ನು AESL ನ ಅಕಾಡೆಮಿಕ್ಸ್ ಹಾಗೂ ಬ್ಯುಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ ಶ್ಲಾಘಿಸಿದ್ದಾರೆ.


ಈ ಸಾಧನೆಯನ್ನು ಸಂಭ್ರಮಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ಯಾಮ್ ಪ್ರಸಾದ್, ಶಾಖಾ ಮುಖ್ಯಸ್ಥರಾದ ಪರಮೇಶ್ವರ್, ವೈದ್ಯಕೀಯ ವಿಭಾಗದ ಶೈಕ್ಷಣಿಕ ಮುಖ್ಯಸ್ಥರಾದ ಪ್ರದೀಪ ವಿ. ಸಮಗ ಹಾಗೂ ಉಡುಪಿ ಶಾಖೆಯ ಟಾಪರ್ ಆದ ವಿದ್ಯಾರ್ಥಿನಿ ಸಮನ್ವಿ ಮಯ್ಯ ಅವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top