ಸುಹಾಸ್ ಎಸ್.ಆರ್ ಕಾಲೇಜಿಗೆ ಪ್ರಥಮ 720ರಲ್ಲಿ 554 ಅಂಕ
ಮಂಗಳೂರು: ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪಪೂ ಕಾಲೇಜಿನಲ್ಲಿ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 23 ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಅರ್ಹತೆಯನ್ನು ಹೊಂದಿರುತ್ತಾರೆ. ಶಕ್ತಿ ಪಪೂ ಕಾಲೇಜಿನ ಸುಹಾಸ್ ಎಸ್ ಆರ್ 720ರಲ್ಲಿ 554 ಅಂಕ ಪಡೆದು ಕಾಲೇಜಿಗೆ ಪ್ರಥಮ, ನಂತರದ ಸ್ಥಾನದಲ್ಲಿ ಪವನ್ ಮಲಗಿ 548 ನೇ ಸ್ಥಾನ, ಅಭಿಷೇಕ್ ಬಸವರಾಜ್ ಜರ‍್ಕಲ್ 541 ನೇ ಸ್ಥಾನ, ಪ್ರಸೂನ್ ಪಾಟೇಲ್ 539, ಚಿಂತನ ಪಿ ಆರ್ 521 ಪಡೆದಿರುತ್ತಾರೆ.
500 ಅಂಕದ ಒಳಗಡೆ 5 ವಿದ್ಯಾರ್ಥಿಗಳು 400 ಅಂಕದ ಒಳಗಡೆ 7 ವಿದ್ಯಾರ್ಥಿಗಳು 300 ಅಂಕದ ಒಳಗಡೆ 5 ವಿದ್ಯಾರ್ಥಿಗಳು ಅಂಕವನ್ನು ಪಡೆದಿರುತ್ತಾರೆ ಒಟ್ಟು ಸಂಸ್ಥೆಯಲ್ಲಿ 92% ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿರುತ್ತಾರೆ.
ಇವರನ್ನು ಸಂಸ್ಥೆಯ ಸಂಸ್ಥಾಪಕರಾಗಿರುವ ಡಾ. ಕೆ.ಸಿ ನಾಯ್ಕ್, ಕಾರ್ಯದರ್ಶಿ ಸಂಜಿತ್ ನಾಯ್ಕ್, ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಮಂಜುನಾಥ ಚಾವಡಿ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಅಭಿನಂದಿಸಿದ್ದಾರೆ.


