ಆಧುನಿಕ ಚಿಂತಕ, ಅದ್ಭುತ ಲೇಖಕ, ಕನ್ನಡ ಸಾಹಿತಿ ಪೂರ್ಣಚಂದ್ರ ತೇಜಸ್ವಿ

Upayuktha
0



ರಾಷ್ಟ್ರ ಕವಿ ಕುವೆಂಪುರವರ ಪುತ್ರನಾಗಿ,ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಪೂರ್ಣಚಂದ್ರ ತೇಜಸ್ವಿ ಅವರು ನಾಡಿನ ಹೆಸರಾಂತ ಲೇಖಕರು. ಕಾದಂಬರಿ, ಕಥೆ, ನಾಟಕ, ವಿಮರ್ಶೆ, ಪ್ರವಾಸ ಕಥನ, ವೈಜ್ಞಾನಿಕ ಬರಹಗಳನ್ನು ಬರೆದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಮಹನೀಯರು ಅಬಚೂರಿನ ಪೋಸ್ಟಾಫೀಸ್ ಕೃತಿ ಬರೆದು ಬಂಡಾಯ ಸಾಹಿತ್ಯಕ್ಕೆ ನಾಂದಿ ಹಾಡಿದ ಲೇಖಕರು. ಕರ್ವಾಲೋ, ಚಿದಂಬರ ರಹಸ್ಯ ಇವರು ಬರೆದ ಬಹು ಪ್ರಖ್ಯಾತ ಕೃತಿಗಳು. 


ಕೇವಲ ಲೇಖಕರಲ್ಲದೆ,ನೈಸರ್ಗಿಕ, ಪರಿಸರವಾದಿಗಳು, ಛಾಯಾಗ್ರಾಹಕರು ಪ್ರಕಾಶಕರಾಗಿ ಪ್ರಸಿದ್ಧರಾದ ಸಾಹಿತಿ. ಇವರು ತಮ್ಮದೇ ಆದ ವಿಶಿಷ್ಟ ಶೈಲಿಯ ಲೇಖಕರಾಗಿ,ಕನ್ನಡ ಸಾಹಿತ್ಯಕ್ಕೆ ಹೊಸ ದಿಶೆಯನ್ನು  ತೋರಿದ ಕವಿಗಳು, ಕಥೆಗಾರರು. 


ಕುವೆಂಪುರವರ  ಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ 8-9-1938 ರಂದು ಜನಿಸಿದರು. ತಾಯಿ ಹೇಮಾವತಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ ವಿಶ್ವವಿದ್ಯಾಲಯದ ಕನ್ನಡ ಭಾಷೆಯಲ್ಲಿ ಎಂ ಎ ಪದವಿ ಪಡೆದರು. 


ಇವರಿಗೆ ಕಥೆ, ಕಾದಂಬರಿ, ವೈಚಾರಿಕ ಲೇಖನ, ವಿಮರ್ಶೆ, ನಾಟಕ,ಕವನ ಅಂಕಣದ ಬರಹಗಳನ್ನು ಬರೆಯುವುದರಲ್ಲಿ ಆಸಕ್ತಿಯಿತ್ತು. ತದನಂತರ ನವ್ಯ ಸಾಹಿತ್ಯ ಕುರಿತು ಅನೇಕ ಬರಹಗಳನ್ನು ಬರೆದರು. ಸಾಮಾಜಿಕ ನ್ಯಾಯ, ಗ್ರಾಮೀಣ ಬದುಕಿನ ಜನಜೀವನದ ಬಗ್ಗೆ ಲೇಖನಗಳನ್ನು ಕಥೆಗಳನ್ನು ಬರೆದು ಬೆಳಕು ಚೆಲ್ಲಿದರು. ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಕರ್ವಾಲೋ ಕಾದಂಬರಿಗಳು ಪ್ರಮುಖ ಕೃತಿಗಳು. ಅಬಚೂರಿನ ಪೋಸ್ಟ್ ಆಫೀಸ್, ತಬರನ ಕಥೆ, ಕುಬಿ ಮತ್ತು ಇಯಾಲ ಎಂಬ ಕಥಾ ಸಂಕಲನಗಳು ಪ್ರಕಟಗೊಂಡವು. ಯಮಳ ಪ್ರಶ್ನೆ ನಾಟಕ ಬರೆದು ನಾಡಿಗೆ ನೀಡಿದ ಮಹಾನುಭಾವರು. ವ್ಯಕ್ತಿ ವಿಶಿಷ್ಟ ಸಿದ್ಧಾಂತ ವೈಚಾರಿಕ ಕೃತಿಯಾಗಿ ಪ್ರಕಟಗೊಂಡ ಬರಹ. ಇವರಿಗೆ  ಪರಿಸರ ಪ್ರೀತಿ, ಛಾಯಾಗ್ರಹಣ, ನಿಸರ್ಗ ಅಧ್ಯಯನ ಸಹಜ ಕೃಷಿ, ಬೇಟೆ, ವಿಜ್ಞಾನ ಬರಹಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು.


ಕರ್ನಾಟಕ ರಾಜ್ಯದ ಅನೇಕ ಪ್ರಶಸ್ತಿಗಳಿಗೆ ಭಾಜನರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಬರನ ಕಥೆ ಚಲನಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮುಂತಾದ ಗೌರವಗಳಿಗೆ ಭಾಜನರು. ವಿಶಿಷ್ಟ ಬರಹಗಳಿಂದ,ಆಧುನಿಕ ಚಿಂತನೆಗಳಿಂದ, ಪ್ರಕೃತಿ ಪ್ರೇಮದಿಂದಲೂ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾದ ಲೇಖಕರು. ಮೂಡಿಗೆರೆ ನಗರದಲ್ಲಿ 5-4-2007 ರಂದು ನಿಧನರಾದರು.


- ಶ್ರೀಧರ ರಾಯಸಂ 
ಗಿರಿನಗರ
ಬೆಂಗಳೂರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top