ಮುಡಿಪು "ಸ್ವಸ್ತಿ ಶ್ರೀ" ನಿವಾಸದಲ್ಲಿ ಮನಸ್ವಿನಿ ಮಹಿಳಾ ವೇದಿಕೆಯ ಮನೆ ಮನೆ ಸಾಹಿತ್ಯ ಅಭಿಯಾನ

Upayuktha
0





ಮುಡಿಪು: ಇಲ್ಲಿನ ‘ಸ್ವಸ್ತಿಶ್ರೀ’ ನಿವಾಸದಲ್ಲಿ ಇತ್ತೀಚೆಗೆ ಮನಸ್ವಿನಿ ಮಹಿಳಾ ವೇದಿಕೆಯ ‘ಮನೆ ಮನೆ ಸಾಹಿತ್ಯ’ ಅಭಿಯಾನದ ದ್ವಿತೀಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.


ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು, ಒತ್ತಡ ಮತ್ತು ಸಮಸ್ಯೆಗಳು ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಕಂಡು ಹಿಂಜರಿಯಬಾರದು. ಸಮಸ್ಯೆಗಳೇ ಬರಬಾರದು ಎಂದು ಬಯಸುವ ಬದಲು, ಸವಾಲುಗಳನ್ನು ಬದುಕಿನ ಸಂಗಾತಿಯಂತೆ ಪ್ರೀತಿಸಿ ಎದುರಿಸಬೇಕೆಂದು ಮೌಲಿಕ ಸಂದೇಶ ನೀಡಿದರು.


ಮತ್ತೊಬ್ಬ ಅತಿಥಿ, ವಿಶ್ರಾಂತ ಅಧ್ಯಾಪಿಕೆ ಜಯಲಕ್ಷ್ಮಿ ಕಾರಂತ ಅವರು "ತಿಳಿ ನೀಲ ಗಗನದಲ್ಲಿ ಒಂದು ಸುತ್ತು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಭೂಮಿ ಮತ್ತು ಗಗನದ ಮಧ್ಯೆ ಇರುವ ಗುರುತ್ವಾಕರ್ಷಣ ರಹಿತ ವಲಯ ಹಾಗೂ ಅಲ್ಲಿ ತೇಲಾಡುವ ಉಪಗ್ರಹಗಳ ಕುರಿತಾದ ರೋಚಕ ಮತ್ತು ಕುತೂಹಲಕಾರಿ ಸಂಗತಿಗಳನ್ನು ನಿಖರ ಅಂಕಿ-ಅಂಶಗಳೊಂದಿಗೆ ಸಭೆಯ ಮುಂದಿಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡಿನ ವಿಶ್ರಾಂತ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಅವರು ಶುಭಾಶಯ ಗೀತೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ತಾವೂ ಬೆಳೆದು ಮತ್ತೊಬ್ಬರನ್ನೂ ಬೆಳೆಸುವ ಮನಸ್ವಿನಿ ಮಹಿಳಾ ವೇದಿಕೆಯ ಸಾಹಿತ್ಯಿಕ ಕೈಂಕರ್ಯವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಲಲಿತಾಲಕ್ಷ್ಮೀ ಕುಳಮರ್ವ, ಡಾ. ಮೀನಾಕ್ಷಿ ರಾಮಚಂದ್ರ, ಜಯಲಕ್ಷ್ಮಿ ಕಾರಂತ ಹಾಗೂ ರತ್ನಾವತಿ ಬೈಕಾಡಿ ಅವರನ್ನು ಅಭಿಮಾನಪೂರ್ವಕವಾಗಿ ಗೌರವಿಸಿ, ಸನ್ಮಾನಿಸಲಾಯಿತು.


ಹಿರಿಯ ಸಾಹಿತಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಸ್ವಾಗತಿಸಿದರು. ಶಿಕ್ಷಕಿ ಸುಶೀಲಾ ಪದ್ಯಾಣ ಪ್ರಸ್ತಾವನೆಗೈದರೆ, ಕು. ಧನ್ಯಶ್ರೀ ಮೂಳೂರು ಪ್ರಾರ್ಥಿಸಿದರು. ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ಧನ್ಯವಾದ ಸಮರ್ಪಿಸಿ, ಸಾಹಿತಿ ಜ್ಯೋತ್ಸ್ನಾ ಕಡಂದೇಲು ಕಾರ್ಯಕ್ರಮ ನಿರ್ವಹಿಸಿದರು.


ಅರ್ಥಪೂರ್ಣವಾಗಿ ಮೂಡಿಬಂದ ಕವಿಗೋಷ್ಠಿ:

ಸಭಾ ಕಾರ್ಯಕ್ರಮದ ನಂತರ ಹಿರಿಯ ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಯಕ್ಷಗಾನ ಕಲಾವಿದೆ ರತ್ನಾ ಕೆ. ಭಟ್ ತಲಂಜೇರಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಗೋಷ್ಠಿಯಲ್ಲಿ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸೀತಾಲಕ್ಷ್ಮಿ ವರ್ಮ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ನಿರ್ಮಲ ಶೇಷಪ್ಪ ಖಂಡಿಗೆ, ಪ್ರಭಾವತಿ ಕೆದಿಲಾಯ, ಕು. ಧನ್ಯಶ್ರೀ ಮೂಳೂರು, ಪಂಕಜಾ ರಾಮ್ ಭಟ್ ಹಾಗೂ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಅವರುಗಳು ಭಾಗವಹಿಸಿ ತಮ್ಮ ಸ್ವ-ರಚಿತ ಕವನಗಳನ್ನು ವಾಚಿಸಿದರು. ಹಿರಿಯ ಸಾಹಿತಿ ರತ್ನಾವತಿ ಬೈಕಾಡಿ ಭಾವಗಾನ ಪ್ರಸ್ತುತಪಡಿಸಿದರು.


ವಾಚಿಸಲಾದ ಕವನಗಳ ಒಳತಿರುಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿದ ಕವಿಗೋಷ್ಠಿಯ ಅಧ್ಯಕ್ಷರಾದ ರತ್ನಾ ಕೆ. ಭಟ್ ಅವರು, ಮಹಿಳೆಯರು ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹೇಗೆ ಪ್ರಮುಖ ಕೊಡುಗೆ ನೀಡಬಹುದು ಎಂಬ ಕುರಿತು ಅರ್ಥಪೂರ್ಣ ಆಶಯ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top