ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಪರಿಚಯ, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ

Upayuktha
0

  



ಹಾಸನ : ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಲೇಖಕರು ಕವಿಗಳ ಪುಸ್ತಕ ಪರಿಚಯವು ಒಂದು ವಿಶಿಷ್ಠ ಅವಕಾಶ ಉಪಯುಕ್ತವಾಗಿದೆ. ಸಾಹಿತಿಗಳು, ಲೇಖಕರು, ಕವಿಗಳ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಮುಂದಿನ ಭವಿಷ್ಯಕ್ಕೆ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರಲು ಸಹಾಯಕವಾಗುತ್ತದೆ ಎಂದು ಸಾಹಿತಿ,  ಮನೆಗೊಂದು ಗ್ರಂಥಾಲಯ ಹಾಸನ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಗೊರೂರು ಅನಂತರಾಜು  ತಿಳಿಸಿದರು.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ  ನಗರದ ಕವಯಿತ್ರಿ  ಧನಲಕ್ಷ್ಮೀ ಪ್ರಕಾಶ್ ಮನೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಧನಲಕ್ಷ್ಮೀ ಅವರ ಭಾವ ಸಂಗಮ ಕವನ ಸಂಕಲನ ಕೃತಿ ಪರಿಚಯಿಸಿ ಮಾತನಾಡಿ ಪುಸ್ತಕಗಳು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವಾಹಿನಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಧನಲಕ್ಷ್ಮೀ ಅವರ ಕವನ ಸಂಕಲನದ ಕಂಟಕ  ಕವಿತೆ   ಬಡತನದ ಬದುಕನ್ನು ಅರ್ಥಗರ್ಭಿತವಾಗಿ  ಚಿತ್ರಿಸಿದೆ. ಭಾವ ಸಂಗಮ ಇವರ ಚೊಚ್ಚಲ ಕವನ ಸoಕಲನವಾಗಿ ಪುಸ್ತಕ ಪ್ರಾಧಿಕಾರದ ಧನ ಸಹಾಯವು ದೊರಕಿದೆ. ಇವರು ಬರವಣಿಗೆಯನ್ನು ಇಷ್ಟಕ್ಕೆ ನಿಲ್ಲಿಸದೆ ಕಥೆ ಕವಿತೆ ಬರೆಯವ ಪ್ರವೃತ್ತಿ ಮುಂದುವರಿಸಿ  ಉತ್ತಮ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ  ನೀಡಲೆಂದು  ಆಶಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ  ಧನಲಕ್ಷ್ಮೀ ಪ್ರಕಾಶ್ ದಂಪತಿಗಳನ್ನು ಸನ್ಮಾನಿಸಿ  ಮಾತನಾಡಿ  ಮಾನವನು ಮಸ್ತಕದಲ್ಲಿರುವುದನ್ನು ಪುಸ್ತಕ ರೂಪಕ್ಕೆ ಇಳಿಸುತ್ತಾನೆ. ನಂತರ ಪುಸ್ತಕದಲ್ಲಿರುವ ಜ್ಞಾನವನ್ನು ಮಸ್ತಕಕ್ಕೆ ತುಂಬಿಕೊಳ್ಳುತ್ತಾನೆ. ಹಾಗಾಗಿ ಪುಸ್ತಕ ಮತ್ತು ಮಸ್ತಕಗಳು ಪರಸ್ಪರ ಒಂದಕ್ಕೊಂದು ಪೂರಕ ಮತ್ತು ಪ್ರೇರಕವಾಗಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಗ್ರಂಥಾಲಯ ಹೊಂದಿರುವ  ಮನೆಗಳಿಗೆ ಬಂದು ಅಭಿನಂದಿಸುವ,  ಪುಸ್ತಕ  ಓದುವ ಅಭಿರುಚಿ ಬೆಳೆಸುವ   ಈ ಕಾರ್ಯಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಕುಶಾಲ್ ಬರಗೂರು ಮನೆಗಳಲ್ಲಿ ಬೀರು, ಶೆಲ್ಫ್ ಗಳಲ್ಲಿ ಪುಸ್ತಕ ಹೇಗೆ ಜೋಡಿಸಿಡಬೇಕು ಎಂಬ ಬಗ್ಗೆ ತಿಳುವಳಿಕೆ ನೀಡಿ ಜ್ಞಾನಾರ್ಜನೆಗಾಗಿ ಪುಸ್ತಕ ಓದು ಹೇಗೆ ಮಹತ್ವಪೂರ್ಣ ಎಂಬ ಕುರಿತು ಮಾಹಿತಿ ನೀಡಿ ಪುಸ್ತಕಗಳು ಜೀವಂತ ಚೇತನಗಳು ಎಂದರು.

 ಮಂಡ್ಯ ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕರು ಕಾರಸವಾಡಿ ಮಹದೇವ್  ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸುಜನಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಕತ್ತರಘಟ್ಟ ವಾಸು, ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷರು ಪೂರ್ಣಚಂದ್ರ ತೇಜಸ್ವಿ, ನಿವೃತ್ತ ಪತ್ರಾಂಕಿತ ವ್ಯವಸ್ತಾಪಕ ಬಳ್ಳೇಕೆರೆ ಮಂಜುನಾಥ್, ಯುವ ಲೇಖಕ  ಮೊಹಮ್ಮದ್ ಅಜರುದ್ದೀನ್,   ಲೇಖಕ ಕೆ.ಎನ್. ಚಿದಾನಂದ ಹಾಸನ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಕಾಳೇಗೌಡರು, ಉಪನ್ಯಾಸಕ ರೇವಣ್ಣ ಆರ್. ಉಮ ಶಂಕರಸ್ವಾಮಿ, ಕುಮಾರ್, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top