ಕಾಸರಗೋಡಿನಲ್ಲಿ ನಿರಂತರ ಕಾರ್ಯಕ್ರಮಗಳಿಂದ ಮಾತ್ರ ಕನ್ನಡ ಉಳಿವು ಸಾಧ್ಯ: ಎಡನೀರು ಶ್ರೀಗಳು

Upayuktha
0

 


ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದಾಗ ಮಾತ್ರ ಗಡಿನಾಡಿನಲ್ಲಿ ಕನ್ನಡವನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಬಿ. ನಾಗೇಶ್ ಅವರು ಇಲ್ಲಿಗೆ ಬಂದು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.


ಎಡನೀರು ಮಠದ ಶಾಲಾ ಸಭಾಂಗಣದಲ್ಲಿ ಜಾಗೃತಿ ಟ್ರಸ್ಟ್ ಬೆಂಗಳೂರು, ಶ್ರೀಮದ್ ಎಡನೀರು ಮಠ ಹಾಗೂ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಹಯೋಗದಲ್ಲಿ ನಡೆದ 'ಕರ್ನಾಟಕ ಕೇರಳ ಸಾಂಸ್ಕೃತಿಕ ವೈಭವ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಬೆಂಗಳೂರು ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿ. ಎಲ್. ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತ್ತೋಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ಶ್ರೀಮದ್ ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲುರಾಯ, ಶಿಕ್ಷಕಿ ಡಾ. ಶಾಂತಾ ಪುತ್ತೂರು, ಡಾ. ಪ್ರಭಾಕರ್ ಎಸ್. ಹಾಗೂ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ. ನಾಗೇಶ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳನ್ನು ಜಾಗೃತಿ ಟ್ರಷ್ಟ್ ಬೆಂಗಳೂರು ವತಿಯಿಂದ ಗೌರವಿಸಿ ಆಶೀರ್ವಾದ ಪಡೆಯಲಾಯಿತು. ಧಾರ್ಮಿಕ ಧುರೀಣ ಹಾಗೂ ಸಮಾಜ ಸೇವಕ ಡಾ. ಕೆ. ಎನ್. ವೆಂಕಟರಮಣ ಹೊಳ್ಳ ಅವರಿಗೆ 'ಗಡಿನಾಡ ಶ್ರೇಷ್ಠ ಸಮಾಜ ಸೇವಾ ರತ್ನ' ಬಿರುದು ನೀಡಿ ಸನ್ಮಾನಿಸಲಾಯಿತು. ಜಾಗೃತಿ ಟ್ರಷ್ಟ್ ಅಧ್ಯಕ್ಷ ಬಿ. ನಾಗೇಶ್ ಅವರನ್ನು ಶ್ರೀ ಮಠದ ವತಿಯಿಂದ ಗೌರವಿಸಲಾಯಿತು.


ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಮಾಜ ಬಂಧು ಮಹೇಶ್ ವಳಕುಂಜ, ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಭಟ್, ವ್ಯಂಗ್ಯಚಿತ್ರ ಕಲಾವಿದ ವೆಂಕಟ ಭಟ್, ಉದ್ಯಮಿ ಸತೀಶ್ ರಾವ್, ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಮತ್ತು ಉದಯೋನ್ಮುಖ ಕಲಾವಿದರಾದ ಪಾವನಾ ಐತಾಳ್, ವರ್ಷಾ ಶೆಟ್ಟಿ, ಹನ್ಶಿತ್ ಆಳ್ವ, ದೀಕ್ಷಾ ಕುಲಾಲ್ ಅವರನ್ನು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಪುರಸ್ಕರಿಸಲಾಯಿತು.


ಸಭಾ ಕಾರ್ಯಕ್ರಮದ ನಂತರ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರಾದ ಪಾವನಾ ಐತಾಳ್, ವರ್ಷಾ ಶೆಟ್ಟಿ, ಅಶ್ವಿನಿ ಐತಾಳ್, ಭಾನ್ವಿ ಕುಲಾಲ್, ದೀಕ್ಷಾ ಕುಲಾಲ್, ಹನ್ಶಿತ್ ಆಳ್ವ, ಸುತನಿಧಿ, ಭವಿಷ್ಯ ಪೂಜಾರಿ, ತ್ರಿಷಾ ಅಡಕಲಕಟ್ಟೆ, ಅನ್ಮೀತ ಶೆಟ್ಟಿ ಕೋಡಿಜಲ್, ಅರ್ಚನಾ ಹೇರೂರ್, ಸಾಯಿ ಪ್ರಣಮ್ಯ, ಆರಾಧ್ಯ ಪೂಜಾರಿ, ತ್ರಿಶಿಕಾ ಸಾನ್ವಿಕಾ, ತನುಷಾ, ತೇಜುಷ, ಅನ್ವಿತ್ ಪೂಜಾರಿ, ಪ್ರತೀಕ್ ಪೂಜಾರಿ ಮುಂತಾದವರಿಂದ ನಯನಮನೋಹರ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಜಾಗೃತಿ ಟ್ರಸ್ಟ್ ವತಿಯಿಂದ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ನಂದಾದೀಪ ಯೋಗಗುರು ಕಾರ್ಯಕ್ರಮ ನಿರೂಪಿಸಿ, ಬಿ. ನಾಗೇಶ್ ಧನ್ಯವಾದ ಸಮರ್ಪಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top