ಕಾಳಾವರ: ನೂತನ ದೇಗುಲ ಲೋಕಾರ್ಪಣೆ; ಸಾಂಸ್ಕೃತಿಕ ವೈವಿಧ್ಯ

Upayuktha
0


ಕಾಸರಗೋಡು: ಶ್ರೀ ಬ್ರಹ್ಮ ಸ್ವರ್ಣ ಯಕ್ಷಿ ಚಿತ್ರಕೂಟ ಶ್ರೀ ನಾಗ ಸಪರಿವಾರ ದೇವರ ನೂತನ ದೇಗುಲವು ಕುಂದಾಪುರ ತಾಲ್ಲೂಕಿನ ಕಾಳಾವರದಲ್ಲಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಗಳವರ ಶುಭಾಶೀರ್ವಾದಗಳೊಂದಿಗೆ ಗಜೇಂದ್ರ ಆಚಾರ್ ಅವರ ಮುತುವರ್ಜಿಯಿಂದ ಸಕಲ ವೈದಿಕ ವಿಧಿ ವಿಧಾನಗಳಿಂದ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ದೇವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.


ಈ ಶುಭ ಮಹೋತ್ಸವದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮವು ಅತ್ಯಂತ ವೈವಿದ್ಯಮಯವಾಗಿ ಪ್ರಸ್ತುತಗೊಂಡು ಕಲಾಭಿಮಾನಿಗಳನ್ನು ರಂಜಿಸಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರಾದ ಅಕ್ಷತಾ ಪಿ ಅಡಿಗ, ವನಿತಾ ಉಪಾಧ್ಯ, ಶುಭಾ ಅಡಿಗ, ಸುನೇತ್ರ ಉಡುಪ, ಪಾರ್ವತಿ ಮಯ್ಯ, ಭೂಮಿಕಾ ಉಡುಪ, ರಮ್ಯಾ, ನಿವೇದಿತಾ, ಗಾಯತ್ರಿ ಭಟ್, ಪ್ರೇರಣಾ, ಕೆ. ಕವನಾ ಪುರಾಣಿಕ್, ಸಾನ್ವಿ, ನಾಗಶ್ರೀ, ಮಾನ್ವಿ, ಮೇಘ, ಮಹಾಲಸ, ಸಿರಿ ಭಟ್, ಶ್ರೀರಕ್ಷಾ, ಕೃತಿಕಾ ಉಡುಪ, ಶ್ರೀಕೃಪಾ ಅಡಿಗ, ಪ್ರಿಯಾoಷ್ ಪಿ ಶೆಟ್ಟಿ, ಸೃಷ್ಟಿ ಆರ್, ಆರಾಧ್ಯ ಆರ್, ಸಾನಿಧ್ಯ, ಅನುಶ್ರೀ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.


ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಗಜೇಂದ್ರ ಆಚಾರ್ಸಂ ಕಾಳಾವರ ಅವರ ಉಪಸ್ಥಿತಿಯಲ್ಲಿ ಸಂಸ್ಥೆಯ ಪ್ರೋತ್ಸಾಹಕರಾದ ಗುರುಕುಲ ವಿದ್ಯಾ ಸಂಸ್ಥೆಯ ಅಧ್ಯಾಪಕರು ಶ್ರೀಮತಿ ನಾಗರತ್ನ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಸಂಸ್ಥೆಯ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಕೃತಜ್ಞತೆ ತಿಳಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top