'ಕೃಷಿ ಸಂಭ್ರಮದ ಜೊತೆಯಲ್ಲಿ ರೈತರ ಬೆಳೆಗಳ ಮೌಲ್ಯವರ್ಧನೆ ಹೆಚ್ಚಾಗಬೇಕು'

Upayuktha
0

 



ಮಂಗಳೂರು: ಇತ್ತೀಚಿನ ದಿನಗಳಲ್ಲಿ ಹಲಸು ಮೇಳಗಳು ನಡೆಯುತ್ತವೆ. ಅಲ್ಲಿ ಖಾದಿ ವಸ್ತ್ರ ಮಾರಾಟ, ಬಾಣಂತಿಯ  ಮದ್ದುಗಳು, ಸಾಂಪ್ರದಾಯಿಕ ಸಾಂತ್‌ಮಾರಿಗಳ ತಾಂಬ್ಡೆಗುಳೆ, ವಿವಿಧ ತಳಿಯ ಸಸ್ಯಗಳು ಹಲಸು ಜೊತೆಗೆ ಮಾರಾಟ ಆಗುವುದು ಒಳ್ಳೆಯ ಬೆಳವಣಿಗೆ. ಈ ಉಪಕ್ರಮದ ಕಾರಣ ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಮಾರಾಟದ ಜಾಗಗಳು ಒದಗಿಸಲು ಅವಕಾಶ ಆಗುತ್ತದೆ ಎಂದು ಮೇಳದ ಉದ್ಘಾಟನೆ ಮಾಡಿದ ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.

ಅವರು ಇತ್ತೀಚೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಸ್ಕೈಲೈನ್ ಸಂಸ್ಥೆಯ ಆಲನ್ ಮತ್ತು ಸ್ಟೇನಿ ಅವರು ಆಯೋಜಿಸಿದ ಪ್ರಥಮ ಹಲಸು ಮೇಳವನ್ನು ಹಲಸು ಕತ್ತರಿಸಿ ಅದರ ತೊಳೆಗಳನ್ನು ವೇದಿಕೆಯ ಗೌರವ ಅಥಿತಿಗಳಿಗೆ ನೀಡಿ ಮಾತನಾಡಿದರು.


ಮುಖ್ಯ ಅಥಿತಿ ನಿರೂಪಕ, ಚಲನಚಿತ್ರ ನಟ ವಿಜೆ ಡಿಕ್ಸನ್ ಮಾತನಾಡಿ, ಯುವಕರು ಈ ತರಹ ಮೇಳಗಳ ಭಾಗವಾಗಿ ಇರಬೇಕು. ಸಾಧನೆ ಹುಡುಕಿಕೊಂಡು ಬರುವುದಿಲ್ಲ ನಾವು ಶ್ರಮವಹಿಸಿ ಸಾಧಿಸಬೇಕು ಎಂದರು.

ಈ ವೇಳೆ ರಂಗಭೂಮಿ ನಟರಿಗೆ, ದಾನಿಗಳಿಗೆ ಗೌರವ ಅರ್ಪಿಸಲಾಯಿತು. ಏಲನ್ ಸ್ವಾಗತಿಸಿ ಸ್ಟೇನಿ ವಂದಿಸಿದರು. ಬಬಿತಾ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top