ಹೋಲಿಸಿ ಮಾತನಾಡುವುದು ಸರಿಯೇ?

Upayuktha
0

 



ಬ್ಬ ವ್ಯಕ್ತಿ ಹುಟ್ಟಿದಾಗಲೇ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ತಂದೆ-ತಾಯಿಯರು ಚಿಕ್ಕಂದಿನಿಂದಲೇ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸುತ್ತಾರೆ. ಉತ್ತಮ ಶಿಕ್ಷಣ ಸಿಗಲಿ, ಉತ್ತಮ ವ್ಯಕ್ತಿತ್ವ ಬೆಳೆಯಲಿ ಎಂಬ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತಾರೆ.

ಆದರೆ ಒಂದು ಮಗು ಬೆಳೆಯುತ್ತಾ ಹೋದಂತೆ ಅದರ ಮೇಲೆ ಒತ್ತಡ ಹೇರುವುದು ಎಷ್ಟರ ಮಟ್ಟಿಗೆ ಸರಿ? ಶಾಲೆ ಆರಂಭವಾದ ದಿನದಿಂದಲೇ ಎಲ್ಲರಿಗಿಂತ ಹೆಚ್ಚು ಅಂಕ ಗಳಿಸಬೇಕು, ಸ್ನೇಹಿತರಿಗಿಂತ ಹೆಚ್ಚು ಚುರುಕಾಗಿರಬೇಕು ಎಂದು ಮಕ್ಕಳ ಮನಸ್ಸಿನ ಮೇಲೆ ಭಾರ ಹಾಕುತ್ತಾ ಹೋದರೆ, ಅವರ ಮನಸ್ಸು ಕುಗ್ಗತೊಡಗುತ್ತದೆ. ತಂದೆ-ತಾಯಿಯರು ತಮ್ಮ ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅದನ್ನು ಬಿಟ್ಟು, "ನೀನು ಯಾಕೆ ಹಾಗಿಲ್ಲ? ಅವರನ್ನು ನೋಡಿ ಕಲಿ" ಎಂದು ಮತ್ತೊಬ್ಬ ಮಗುವಿಗೆ ಹೋಲಿಸುವುದು ಸರಿಯೇ? ಹೀಗೆ ನಿರಂತರವಾಗಿ ಹೋಲಿಸುತ್ತಾ ಹೋದರೆ, ಆ ಮಗು ಒಳಗೊಳಗೆ ಕುಗ್ಗುತ್ತಾ ಹೋಗುತ್ತದೆ. "ನನ್ನಿಂದ ಏನೂ ಆಗುವುದಿಲ್ಲ" ಎಂಬ ಭಾವನೆ ಅದರ ಮನಸ್ಸಿನಲ್ಲಿ ಬೇರು ಬಿಡುತ್ತದೆ.

ಅದೇ ಮಗು ಮುಂದೆ ಕಾಲೇಜಿಗೆ ಬಂದಾಗ, ಶಿಕ್ಷಕರೂ ಸಹ ವಿದ್ಯಾರ್ಥಿಗಳ ಆಸಕ್ತಿಗೆ ಗೌರವ ನೀಡಬೇಕು. ಅವರನ್ನು ಹಂಗಿಸಬಾರದು. ಹದಿಹರೆಯದ ಮಕ್ಕಳ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ನಿಲ್ಲಿಸಿ, ಇನ್ನೊಬ್ಬರಿಗೆ ಹೋಲಿಸಿ "ನೀನು ಅವನನ್ನು ಅಥವಾ ಅವಳನ್ನು ನೋಡಿ ಕಲಿ" ಎಂದು ಹೇಳುವುದು ಅವರ ಮನಸ್ಸಿಗೆ ನೋವುಂಟು ಮಾಡುತ್ತದೆ. ಎಲ್ಲರ ಮುಂದೆ ಶಿಕ್ಷಕರು ಹೀಗೆ ಮಾತನಾಡಿದಾಗ, ವಿದ್ಯಾರ್ಥಿಗಳು ಮುಜುಗರ ಮತ್ತು ಅವಮಾನವನ್ನು ಅನುಭವಿಸುತ್ತಾರೆ. ಕೆಲವರಿಗೆ ಅದು ದೊಡ್ಡ ವಿಷಯವಾಗಿ ಕಾಣದಿರಬಹುದು. ಆದರೆ ಇನ್ನೂ ಕೆಲವರು ಅದನ್ನು ಮನಸ್ಸಿನ ಆಳಕ್ಕೆ ತೆಗೆದುಕೊಂಡು ತೀವ್ರವಾಗಿ ನೋವು ಅನುಭವಿಸುತ್ತಾರೆ. ಕೆಲವರ ಮೇಲೆ ಅದರ ಪರಿಣಾಮ ತುಂಬಾ ಗಂಭೀರವಾಗಿರಬಹುದು. ಆದ್ದರಿಂದ ಇಂತಹ ಮಾತುಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.

ಹೀಗಾಗಿ, ತಂದೆ-ತಾಯಿಯರಾಗಲಿ, ಕಲಿಸುವ ಗುರುಗಳಾಗಲಿ ಮಕ್ಕಳ ಆಸಕ್ತಿಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಬೇಕು. ಇನ್ನೊಬ್ಬರಿಗೆ ಹೋಲಿಸಿ ಮಾತನಾಡುವುದಕ್ಕಿಂತ, ಅವರ ಸಾಮರ್ಥ್ಯವನ್ನು ನಂಬುವಂತೆ ಮಾಡುವುದು ಮುಖ್ಯ. ಏಕೆಂದರೆ ಪ್ರತಿಯೊಂದು ಮಗುವೂ ವಿಭಿನ್ನ, ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ಎಲ್ಲರ  ಜವಾಬ್ದಾರಿಯಾಗಿದೆ.

ರಮ್ಯಾ ನಾಯ್ಕ್ , 
ಎಸ್. ಡಿ. ಎಂ. ಉಜಿರೆ 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top