ಸಮರ್ಥವಾಗಿ ಕಲಿಯಲು ಆಸಕ್ತಿ ಮುಖ್ಯ - ಅಶೋಕ್ ಕುಮಾರ್

Upayuktha
0

ಶಿವಮೊಗ್ಗ: ಯಾರದ್ದೋ ಬಲವಂತಕ್ಕೆ ಪದವಿ ವಿಷಯಗಳನ್ನು ಆಯ್ಕೆಮಾಡಿ ಅದನ್ನು ಅಭ್ಯಾಸ ಮಾಡಲು ತೊಡಗಿದಾಗ ಅನೇಕ ಗೊಂದಲಗಳು ಎದುರಾಗುತ್ತವೆ. ಹೇಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇರುವ ವ್ಯಕ್ತಿಗೆ ಉಳಿದ  ಕ್ರೀಡೆಗಳ ಬಗ್ಗೆ ನಿರಾಸಕ್ತಿಯೋ ಹಾಗೆ ಮೊದಲು ನಾವು ಮಾಡುತ್ತಿರುವ ಪದವಿಗಳ ಬಗ್ಗೆ ನಮಗೆ ಆಸಕ್ತಿ ಇರಬೇಕು ಆಗ ಅದರಿಂದ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಅಶೋಕ್ ಕುಮಾರ್ ನುಡಿದರು.


ಇವರು ಇಂದು ಮಾನಸ ಟ್ರಸ್ಟ್(ರಿ) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ 2026-27ನೇ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿ ವಿದಾರ್ಥಿಗಳಿಗೆ  ಸ್ನಾತಕ ಪದವಿಯ ಪರಿಚಯಾತ್ಮಕ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.


ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕಲಿಯಲು ಆಸಕ್ತಿ ಬಹಳ ಮುಖ್ಯ ಎಂಬುದನ್ನು ಪ್ರಸ್ತಾಪಿಸಿ ವಿದ್ಯಾರ್ಥಿಗಳ ಜೀವನಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ಕೌಶಲ್ಯ ಬಹಳ ಮುಖ್ಯ, ಕಲಿಕೆಯು ಕೌಶಲ್ಯಭರಿತವಾಗಿದ್ದರೆ ಉದ್ಯೋಗ ಅವಕಾಶಗಳು ವಿಫುಲವಾಗಿ ದೊರೆಯುತ್ತವೆ. ಇದರಿಂದ ನಮ್ಮ ಭವಿಷ್ಯದ ಬದುಕು ಸುಂದರವಾಗುತ್ತದೆ ಎಂದರು. ಇದು ಕೃತಕ ಬುದ್ಧಿಮತೆಯ ಯುಗ ದೇಶ-ವಿದೇಶಗಳಲ್ಲಿ ದುಡಿಯುವ ಕಾಲ. ಆದುದರಿಂದ ಪ್ರತಿಯೊಬ್ಬ  ವಿದ್ಯಾರ್ಥಿ ತನ್ನ ಪದವಿಯೊಂದಿಗೆ ಎಐ ಅಥವಾ ಕೃತಕ ಬುದ್ಧಿಮತ್ತೆ ಮತ್ತು ವಿವಿಧ ವಿದೇಶ ಭಾಷೆಗಳನ್ನು ಕಲಿಯಬೇಕು ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಸಮನ್ವಯ ಕಾಶಿ, "ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೌಶಲ್ಯಾಧಾರಿತ ಕಲಿಕೆಯ ಅಗತ್ಯತೆ" ಕುರಿತು ವಿಷಯ ಮಂಡನೆಮಾಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಮಂಜುನಾಥ ಸ್ವಾಮಿ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸುಕೀರ್ತಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top