ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿವ್ಯಾಂಗ ಚೇತನ, ಸ್ತ್ರೀಶಕ್ತಿ ಹೋರಾಟಗಾರ್ತಿ ಹೆಲೆನ್ ಕೆಲರ್ ಸ್ಮರಣೆ

Upayuktha
0



ಮಂಗಳೂರು: "ಈ ಜಗತ್ತಿನ ಅತ್ಯಂತ ಸುಂದರವಾದ ಮತ್ತು ಅತ್ಯುತ್ಕೃಷ್ಟವಾದ ಸಂಗತಿಗಳನ್ನು ಕಣ್ಣಿನಿಂದ ನೋಡಲಾಗದಿದ್ದರೂ, ಹೃದಯದ ಭಾಷೆಯ ಮೂಲಕ ಸ್ಪರ್ಶಾನುಭವದ ಆನಂದವನ್ನು ಪಡೆಯಬಹುದು" ಎಂದು ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಇತಿಹಾಸ ನಿರ್ಮಿಸಿದ ಜಗತ್ಪ್ರಸಿದ್ಧ ಕವಯತ್ರಿ, ಸ್ತ್ರೀಶಕ್ತಿ ಹೋರಾಟಗಾರ್ತಿ ಹಾಗೂ ದಿಟ್ಟ ದಿವ್ಯಾಂಗ ಮಹಿಳೆ ಹೆಲೆನ್ ಕೆಲರ್ ಅವರ ನುಡಿಗಳನ್ನು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರು ಸ್ಮರಿಸಿದರು.


ಇಲ್ಲಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಕಾಲೇಜಿನ 'ಸಹೋದಯ' ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಹೆಲೆನ್ ಕೆಲರ್ ನೆನವರಿಕೆ" ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.


ಸಮಾಜಕ್ಕೆ ಕಳಕಳಿಯ ಕರೆ :

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರವಿ ಅಲೆವೂರಾಯರು, ದಿವ್ಯಾಂಗರ ಬಗೆಗಿನ ಸಾಮಾಜಿಕ ದೃಷ್ಟಿಕೋನ ಬದಲಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. "ದಿವ್ಯಾಂಗರು ಸಮಾಜದಿಂದ ಕೇವಲ ಅನುಕಂಪ, ಕರುಣೆ ಅಥವಾ ಅಸಹಜವಾದ ನೋಟವನ್ನು ಬಯಸುವುದಿಲ್ಲ. ಇಂತಹ ಧೋರಣೆಗಳು ಅವರಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತವೆ. ಬದಲಾಗಿ, ಅವರನ್ನು ನಮ್ಮಂತೆಯೇ ಸಮಾನವಾಗಿ ಕಂಡು, ಪ್ರೀತಿ ಮತ್ತು ಪ್ರೋತ್ಸಾಹದ ನಾಲ್ಕು ಮಾತುಗಳನ್ನಾಡಿದರೆ ಅವರು ಇತರರಂತೆಯೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಲ್ಲರು. ಕೇವಲ ಎರಡು ವರ್ಷದ ಎಳವೆಯಲ್ಲೇ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಕಳೆದುಕೊಂಡರೂ ಹೆದರದೆ ಸಮಾಜ ಕಟ್ಟುವ ಕೆಲಸ ಮಾಡಿದ ಹೆಲೆನ್ ಕೆಲರ್ ಸದಾ ಸ್ಮರಣೀಯರು. ನಮ್ಮ ಸುತ್ತಮುತ್ತಲಿರುವ ದೃಷ್ಟಿ, ಶ್ರವಣ ದೋಷ ಹಾಗೂ ದೈಹಿಕ-ಬೌದ್ಧಿಕ ಸವಾಲುಗಳನ್ನು ಎದುರಿಸುತ್ತಿರುವವರೊಂದಿಗೆ ನಾವು ಸ್ವಲ್ಪ ಸಮಯ ಕಳೆದರೂ ನಮಗೆ ದಿವ್ಯಾನುಭೂತಿ ಹಾಗೂ ಭಗವದ್ ಸಾನಿಧ್ಯದ ಅನುಭವವಾಗುತ್ತದೆ" ಎಮದರು.


ಸಂವಾದ ಮತ್ತು ಅನುಭವ ಹಂಚಿಕೆ :

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಜರಗಿತು. ಇದೇ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸ್ತುತ ಉಪನ್ಯಾಸಕರೂ ಹಾಗೂ ಸ್ವತಃ ದಿವ್ಯಾಂಗರೂ ಆದ ಅನ್ವಿತ್ ಕುಮಾರ್ ಅವರು ತಮ್ಮ ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಕಲಿಕೆಯ ಮೌಲ್ಯಯುತ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.


ವೇದಿಕೆಯಲ್ಲಿ ರೆ| ಫಾದರ್ ರೋಶನ್ – ಅಧ್ಯಕ್ಷರು, ಸಹೋದಯ ಸಂಸ್ಥೆ, ಭೂಮಿಕಾ ಎ., ಅಕ್ಷಿತಾ ರಾಮಚಂದ್ರ ಅಮೀನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ಉಪನ್ಯಾಸಕ ವಿನಯ್ ಡಿ.ಆರ್., ಉಪನ್ಯಾಸಕ ರೋಶನ್ ಹಾಗೂ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿದ್ದರು.


ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರೆ, ಕಾರ್ಯದರ್ಶಿ ವಿಶಾಲ್ ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top