ಹೊಸಬೆಟ್ಟು ಕುಳಾಯಿ: 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

Upayuktha
0



ಸುರತ್ಕಲ್: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸಬೆಟ್ಟು ಕುಳಾಯಿ ಇದರ ಹದಿನಾಲ್ಕನೇ ವರ್ಷದ ಹೊಸಬೆಟ್ಟು ಶ್ರೀ ಗಣೇಶೋತ್ಸವವು ದಿನಾಂಕ 14.09.2026ನೇ ಸೋಮವಾರ ಶ್ರೀ ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟು (ಶ್ರೀ ಪುತ್ತಿಗೆ ಮಠ ಶಾಖೆ) ಇಲ್ಲಿ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು (ಜು.5) ಬೆಳಿಗ್ಗೆ ಗಂಟೆ 10 ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಸಮ್ಮುಖದಲ್ಲಿ ನೆರವೇರಿತು.


ಗೌರವ ಅಧ್ಯಕ್ಷ ವಿಶ್ವೇಶ್ವರ ಬದವಿದೆ ಅವರು ಲೋಕಮಾನ್ಯ ಶ್ರೀ ಬಾಲ ಗಂಗಾಧರ ತಿಲಕ್ ರವರು ಹಿಂದೂ ಸಮಾಜದ ಸಮಗ್ರ ಸಂಘಟನೆಗಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯನ್ನು ಪ್ರಾರಂಭಿಸಿದ್ದು ಪ್ರಸ್ತುತ ಪ್ರಬಲ ಸಂಘಟನೆಯನ್ನು ಬಲಯುತಗೊಳಿಸಲು ನಾವೆಲ್ಲರೂ ಶ್ರಮವಹಿಸಬೇಕು ಎಂದು ಕರೆ ನೀಡಿದರು.


ನಂತರ ಸಮಿತಿಯ ಅಧ್ಯಕ್ಷ ಕೇಶವ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಜರಗಿದ್ದ ಸಮಿತಿ ಸಭೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಮತ್ತು ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸರ್ವರೂ ಸಹಕರಿಸಬೇಕಾಗಿ ವಿನಮ್ರವಾಗಿ ವಿಜ್ಞಾಪಿಸಲಾಯಿತು.


ಕಾರ್ಯಾಧ್ಯಕ್ಷ  ಹರಿಕೃಷ್ಣ ಎಂ ಸಾಲ್ಯಾನ್, ಕೋಶಾಧಿಕಾರಿ ವಸಂತ ರಾಜ್ ಎಚ್, ಮಹಿಳಾ ಘಟಕದ ಸಂಚಾಲಕಿ ಶ್ರೀಮತಿ ಕಲಾವತಿ ಕೆ, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಎಚ್ ಉಪಸ್ಥಿತರಿದ್ದರು. ರಾಘವೇಂದ್ರ ಎಚ್ ವಿ ರವರು ಸ್ವಾಗತಿಸಿ, ಶ್ರೀನಿವಾಸ ಕುಳಾಯಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top