ಹವ್ಯಕ ಸಭಾ ಉಡುಪಿಯ ನೂತನ ಅಧ್ಯಕ್ಷರಾಗಿ ಸಿಎಚ್ ಸುಬ್ರಹ್ಮಣ್ಯ ಭಟ್

Upayuktha
0

 


ಉಡುಪಿ: 1997ರಲ್ಲಿ  ಸ್ಥಾಪನೆಗೊಂಡ ಹವ್ಯಕ ಸಭಾ (ರಿ) ಉಡುಪಿಯ 30ನೆಯ  ವಾರ್ಷಿಕ  ಮಹಾಸಭೆಯು ಇತ್ತೀಚೆಗೆ ಹವ್ಯಕ ಸಭಾದ  ಅಧ್ಯಕ್ಷ ಪ್ರೊ. ಶಂಕರ್ ಅಧ್ಯಕ್ಷತೆಯಲ್ಲಿ ಪೆರಂಪಳ್ಳಿಯ  ಹವ್ಯಕಧಾಮದಲ್ಲಿ ನೆರವೇರಿತು. ಕಾರ್ಯದರ್ಶಿ ಪ್ರಸನ್ನ ಅಡಿಗ ಗತವರ್ಷದಲ್ಲಿ ಕೈಗೊಂಡ  ಕಾರ್ಯಚಟುವಟಿಕೆಗಳ ವರದಿಯನ್ನು  ವಾಚಿಸಿದರು.  ಕೋಶಾಧಿಕಾರಿ ಗಿರೀಶ್  ಕೆಎನ್ ಪರಿಶೋಧಿತ  ಲೆಕ್ಕಪತ್ರಗಳನ್ನು  ಮಂಡಿಸಿ,  ಸಭೆಯ  ಅನುಮೋದನೆಯನ್ನು  ಪಡೆದರು.  


ಒಟ್ಟು  23 ಸದಸ್ಯರನ್ನೊಳಗೊಂಡ  ನೂತನ ಕಾರ್ಯಕಾರಿ  ಸಮಿತಿಗೆ 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಣತಜ್ಞ  ಸಿಎಚ್  ಸುಬ್ರಹ್ಮಣ್ಯ  ಭಟ್  ಅವರನ್ನು  ಸರ್ವಾನುಮತದಿಂದ  ಆಯ್ಕೆ  ಮಾಡಲಾಯಿತು. ಉಪಾಧ್ಯಕ್ಷರಾಗಿ  ಡಾ.  ಮಹಾದೇವ  ಭಟ್  ಹಾಗೂ  ಶ್ವೇತಾ  ಹೆಗಡೆ, ಕಾರ್ಯದರ್ಶಿಯಾಗಿ ನಟೇಶ್  ವೈಆರ್,  ಜತೆ-ಕಾರ್ಯದರ್ಶಿಗಳಾಗಿ  ಡಾ| ಜಯಶಂಕರ  ಕಂಗಣ್ಣಾರು  ಮತ್ತು ಲಕ್ಷ್ಮಿ  ಹೆಗ್ಡೆ, ಕೋಶಾಧಿಕಾರಿಯಾಗಿ  ಅರವಿಂದ ಕುಮಾರ್  ಹಾಗೂ  ಆಂತರಿಕ  ಲೆಕ್ಕ ಪರಿಶೊಧಕರಾಗಿ  ಪ್ರೊ.  ಕೆ. ಸದಾಶಿವ  ರಾವ್  ಆಯ್ಕೆಯಾದರು. 


ಉಡುಪಿ ಜಿಲ್ಲೆಯ ಆರ್ಥಿಕವಾಗಿ  ಹಿಂದುಳಿದ  ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿವೇತನ ನೀಡಲಾಯಿತು. ಅಧ್ಯಕ್ಷತೆ ವಹಿಸಿದ  ಪ್ರೊ.  ಶಂಕರ್ ಎಲ್ಲರ  ಸಹಕಾರವನ್ನು  ಸ್ಮರಿಸಿಕೊಂಡರಲ್ಲದೆ  ಧರ್ಮಸ್ಥಳದ  ವ್ಯಸನವರ್ಜನಾ  ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ತನ್ನ  ಅನುಭವಗಳನ್ನು  ಹಂಚಿಕೊಂಡರು. 


ಧಾರ್ಮಿಕ ಕಾರ್ಯಕ್ರಮಗಳ  ಅಂಗವಾಗಿ ರುದ್ರಪಠಣ, ಮಹಿಳೆಯರಿಂದ  ಕುಂಕುಮಾರ್ಚನೆ  ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು.


ಎಚ್  ಎನ್  ವೆಂಕಟೇಶ್  ಸ್ವಾಗತಿಸಿ, ಕಾರ್ಯದರ್ಶಿ ಪ್ರಸನ್ನ ಅಡಿಗ  ವಂದಿಸಿರದು. ಮಂಜುನಾಥ  ಭಟ್  ಬೈಲಾರ ಮತ್ತು  ಬಳಗದವರಿಂದ  ವೇದಘೋಷ  ಹಾಗೂ ಆದ್ಯ, ಆರಾಧ್ಯ ಪ್ರಾರ್ಥಿಸಿ, ಡಾ| ಜಯಶಂಕರ  ಕಂಗಣ್ಣಾರು ನಿರ್ವಹಿಸಿದವರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top