ಹವ್ಯಕ ಮಂಡಲ: ಗುಂಪೆ ವಲಯದ ಜುಲೈ ತಿಂಗಳ ಸಭೆ

Upayuktha
0

 



ಮುಳ್ಳೇರಿಯ: ಗುಂಪೆ ವಲಯದ ಹವ್ಯಕ ಮಂಡಲ ಜುಲೈ ತಿಂಗಳ ಸಭೆಯು ಜು.4 ರಂದು ಸಂಜೆ 4.30 ಗಂಟೆಗೆ ಧರ್ಮತ್ತಡ್ಕದ ಗುಂಪೆ ವಲಯದ ಕಛೇರಿಯಲ್ಲಿ ನಡೆಯಿತು.


ಧ್ವಜಾರೋಹಣ, ಗುರುವಂದನೆ, ಗೋಸ್ತುತಿ, ಅರ್ಧನಾರೀಶ್ವರ ಸ್ತೋತ್ರ ಪಠಣದೊಂದಿಗೆ ಸಭೆ ಆರಂಭವಾಯಿತು. ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕಾನ ಗತಸಭೆಯ ವರದಿಯನ್ನು ನೀಡಿದರು. 


ಲೇಖ ವಿಭಾಗದ ಮುಖ್ಯಸ್ಥ ಹಳ್ಳಕೋಡ್ಲು ಗೋವಿಂದ ಭಟ್ ಅವರು ಲೆಕ್ಕ ಪತ್ರ ಮಂಡಿಸಿದರು. ಮಂಡಲದಿಂದ ಬಂದ ವಿವಿಧ ಸೂಚನೆಗಳನ್ನು ಕಾರ್ಯದರ್ಶಿ ವಾಚಿಸಿದರು. ಜುಲೈ ತಿಂಗಳ 29 ರಿಂದ ಸೆಪ್ಟಂಬರ 26 ರ ವರೆಗೆ ಗೋಕರ್ಣದ ಅಶೋಕೆಯಲ್ಲಿ ನಡೆಯಲಿರುವ ಅನ್ನಬ್ರಹ್ಮ ಚಾತುರ್ಮಾಸ್ಯ ದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ಎಲ್ಲ ಶಿಷ್ಯರಿಗೂ ಆಮಂತ್ರಣ ತಲುಪಿಸುವ ಬಗ್ಗೆ ದೃಢಪಡಿಸಲಾಯಿತು.


ಚಾತುರ್ಮಾಸ್ಯ ದೇಣಿಗೆ ಮತ್ತಿತರ ಸೇವಾಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಶಿಷ್ಯರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಹೇಳಲಾಯಿತು. ಪ್ರತಿ ಮನೆಯಲ್ಲಿ ಕನಿಷ್ಠ 5 ರಾಮಬಳ್ಳಿ (ಕರಿಮೆಣಸಿನ ಬಳ್ಳಿ)ಯನ್ನಾದರೂ ನೆಟ್ಟು ಬೆಳೆಸುವ ಮೂಲಕ ಗುರುಸೇವೆಯಲ್ಲಿ ಭಾಗಿಯಾಗುವಂತೆ ತಿಳಿಸಲಾಯಿತು.


ಅರ್ಧನಾರೀಶ್ವರ ಸ್ತೋತ್ರ ಪಠಣದ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯ ಪಠಣ ಮಾಡಲು ಸೂಚಿಸಲಾಯಿತು. ಸ್ವರ್ಣ ಪಾದುಕೆಯ ಮೂರನೇ ಆವೃತ್ತಿಯ ಗುಂಪೆ ವಲಯದ ಸವಾರಿಯ ವಿವರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಲಯದ ಹೆಚ್ಚಿನ ಶಿಷ್ಯಬಂಧುಗಳು ಭಾಗವಹಿಸಿ ಯಥಾನುಶಕ್ತಿ ಸೇವೆ ಸಲ್ಲಿಸಿ ಯಶಸ್ವಿಗೊಳಿಸಲು ಕೇಳಿಕೊಳ್ಳಲಾಯಿತು.


2025-26ನೇ ಸಾಲಿನಲ್ಲಿ ಮುಳ್ಳೇರಿಯ ಮಂಡಲ ಗುಂಪೆ ವಲಯ ಘಟಕದ ವ್ಯಾಪ್ತಿಗೆ ಒಳಪಟ್ಟ  ಈ ಕೆಳಗಿನ 4 ಮಂದಿ ವಿದ್ಯಾರ್ಥಿಗಳ 'ಪ್ರತಿಭಾ ಪುರಸ್ಕಾರ' ನಡೆಸಿ ಗೌರವಿಸಲಾಯಿತು. ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top