ಪತ್ತೆದಾರಿ ಕಾದಂಬರಿಯತ್ತ ಒಲವು

Upayuktha
0

  



ಪುಸ್ತಕ ಓದುವುದಂದ್ರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಪುಸ್ತಕ ಅಂದ್ರೇ ಮುಖ್ಯವಾಗಿ  ಅದರಲ್ಲಿ ಚಿತ್ರಿಸಲಾಗುವ ಕಥೆಗಳಂದ್ರೆ ತುಂಬಾನೇ ಅಚ್ಚು ಮೆಚ್ಚು. ಅದರಲ್ಲೂ ಈ ಕಥೆ, ಕಾದಂಬರಿ ಅಂದ್ರೇ ಒಂಚೂರು ಜಾಸ್ತಿಯೇ ಇಷ್ಟ ಪಡ್ತೀವಿ. ಯಾಕಂದ್ರೆ ಅದರಲ್ಲಿ ಬರುವ ಪ್ರತಿಯೊಂದು ಪಾತ್ರವು ಅತ್ಯಂತ ವಿಭಿನ್ನವಾದದ್ದು ಮತ್ತು ವಿಶೇಷವಾದದ್ದು. ಒಂದು ಬಾರಿ ಪುಸ್ತಕವನ್ನು ಕೈಗೆತ್ತಿಕೊಂಡರೆ  ಮತ್ತೇ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡಲು ಮನಸು ಏಕೋ ಅಷ್ಟು ಸುಲಭವಾಗಿ ಒಪ್ಪುದಿಲ್ಲ. ಅದಕ್ಕೆ ಮುಖ್ಯ ಕಾರಣ ಆ ಪುಸ್ತಕದ ಬರಹಗಾರ. ಪ್ರತಿಯೊಬ್ಬ ಬರಹಗಾರನ ಕಲ್ಪನೆಯೇ  ಆತನ ಕಾದಂಬರಿಗೆ ಇನ್ನಷ್ಟು ಮೆರಗು ತರಲು  ಸಾಧ್ಯ.  ಅಷ್ಟೇ ಅಲ್ಲದೇ ಓದುಗನ ಮನಸಿಗೆ  ಕೂಡ ಇನ್ನಷ್ಟು  ಕುತೂಹಲವನ್ನು ಮೂಡಿಸಲು  ಸಾಧ್ಯವಾಗುದು.

ಮುಖ್ಯವಾಗಿ ಕಾದಂಬರಿಗಳು  ' ಅವು ಕೇವಲ ಕಾದಂಬರಿ ಅಲ್ಲಾ. ಬದಲಾಗಿ ಅದೊಂದು ನೂರಾರು ವಿಚಾರಗಳನ್ನು, ವಿಶೇಷಗಳನ್ನು ಒಳಗೊಂಡಿರುವ ವಿಸ್ಮಯಕಾರಿ ಕುತೂಹಲ ಮೂಡಿಸುವ ಪುಸ್ತಕ. ಕೆಲವೊಂದು  ಕಾದಂಬರಿಗಳು  ಮತ್ತೇ ಬದುಕಿಗೆ ಭರವಸೆಗಳನ್ನು ನೀಡಿದರೆ ಇನ್ನು ಕೆಲವೊಂದು ಬದುಕಿಗೆ ಹೊಸ ದಾರಿಯನ್ನೇ ಕಲ್ಪಿಸಿ  ಕೊಡುತ್ತದೆ. ಕಥೆಯನ್ನು ಅಥವಾ ಕಾದಂಬರಿಯನ್ನು ಓದಿದಾಗ,  ನಮ್ಮ ಮನಸಿನಲ್ಲಿಯೇ  ಆ ಪಾತ್ರಗಳಿಗೆ ಸಂಬಂದಿಸಿದ ಭಾವ ಚಿತ್ರಗಳು ನಮ್ಮ ಮನದಲ್ಲಿ ಮೂಡುತ್ತದೆ. ಆಗ ಮಾತ್ರ ನಾವು ನಿಜವಾಗಿಯೂ ಆ ಕಾದಂಬರಿಯ ಕಡೆಗೆ ಮನಸೋತಿದ್ದೇವೆ ಎಂದು ಅರ್ಥ. ಪ್ರತಿಯೊಂದು ಪುಸ್ತಕದ ಮೊದಲ ಪುಟದಿಂದ ಹಿಡಿದು ಅದರ ಅಂತ್ಯದವರೆಗೂ ನಮ್ಮಲ್ಲಿ ಎಲ್ಲೂ ಇಲ್ಲದ ಆಸಕ್ತಿ  ಅಥವಾ ಆ ಸೆಳೆತ  ಬಂದು ಬಿಡುತ್ತದೆ ಅಲ್ಲವೇ? ಅದು ಹೇಗೆ ಸಾದ್ಯ, ಅಂದ್ರೇ ಆ ಕಾದಂಬರಿಯ ಕಡೆಗೆ ನಾವು ತೋರಿಸುವ ಒಲವು. ಕಷ್ಟವದಾದನ್ನು ಇಷ್ಟ ಪಟ್ಟು ಓದಿದರೆ ಮಾತ್ರ ಅದು ನಮ್ಮನ್ನು ಮತ್ತಷ್ಟು ಕಾದಂಬರಿಗಳತ್ತ ಒಲವು ತರಲು  ಪ್ರೇರೇಪಿಸುತ್ತದೆ.

     ಇತ್ತೀಚಿಗೆ ನಾನೊಂದು  ಕಾದಂಬರಿಯನ್ನು  ಓದಿದ್ದೆ. ರವಿ ಬೆಳಗೆರೆರವರ  ಅದ್ಭುತವಾದ ಮತ್ತು ಅತ್ಯಂತ ನನಗೆ  ಪ್ರಿಯವಾದ  ಮಾಂಡೋವಿ ಅನ್ನೋ  ಕಾದಂಬರಿ. ನನ್ನ ಪ್ರಕಾರ  ಆ ಕಾದಂಬರಿಯೇ ನನಗೆ  ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ್ದು ಎಂದರೆ ತಪ್ಪಾಗಲಾರದು. ಒಂದು ರೀತಿಯ ವಿಭಿನ್ನವಾದ ಕಾದಂಬರಿ ಆದರೂ, ಮನಸ್ಸನ್ನು ಪ್ರತೀ ಭಾರಿ ಅದರತ್ತ ಸೆಳೆಯುತ್ತದೆ. ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಈ ಕಾದಂಬರಿ. "ಅತ್ತ ಕಡೆಯು ನಿನ್ನದೇ ಸೆಳೆತ, ಇತ್ತ ಕಡೆಯು ನಿನ್ನದೇ ಸೆಳೆತ" ಅನ್ನುವಂತದ್ದು ಈ ಕಾದಂಬರಿ. ಅಷ್ಟೇ ಅಲ್ಲದೆ ಅತ್ಯಂತ ಕುತೂಹಲಕಾರಿಯದದ್ದು. ಒಂದು ಕಡೆ  ಈ ಪ್ರೀತಿ, ಪ್ರೇಮದ ಬಗ್ಗೆ ಅಸಹ್ಯ ಮೂಡಿದರು, ಇನ್ನೊಂದು ಕಡೆ  ನಿಜವಾದ ಪ್ರೀತಿ ಅಂದ್ರೇ ಯಾವ ರೀತಿಯದು ಎಂಬುದದನ್ನು ತಿಳಿಸಲ್ಪಡುತ್ತದೆ. ಕೊನೆಯ ಭಾಗ, ಅಂದ್ರೇ ಅದರ ಅಂತ್ಯ,  ಮನಸಿನ ಆಳಕ್ಕೆ ತಲುಪಿ ಕಣ್ಣಂಚಲ್ಲಿ  ನೀರು ತರುವುದರ ಜೊತೆಗೆ  ಆ ಎರಡು ಪಾತ್ರಗಳ ನಡುವೆ ಕೊನೆಯೊಂದುವ ಈ ಕಾದಂಬರಿಗೆ ಇನ್ನು ಅಕ್ಷರಗಳು ಬೇಕಿತ್ತು ಎಂದು ಪ್ರತೀ ಕ್ಷಣ ಅನಿಸುತ್ತದೆ. ಓದುಗನ ಮನಸಿಗೆ ನಿಜಕ್ಕೂ ಇಷ್ಟವಾಗುವಂತಹ ಕಾದಂಬರಿ ಇದು.

           ' ಓದು' ಇದಕ್ಕೆ ಅಂತ್ಯ ಎಂಬುದೇ ಇಲ್ಲಾ. ಅದು ನಿರಂತರವಾದದ್ದು. ಕಲಿಯುವಂತಹ ನೂರಾರು ವಿಚಾರಗಳನ್ನು ಕಲಿಸಿಕೊಡುತ್ತದೆ ಮತ್ತು ಮತ್ತೇ ಓದಲು ಪ್ರೇರೇಪಿಸುತ್ತದೆ. ಒಂದು ಪುಸ್ತಕ ಎಣಿಸಲಾಗದಷ್ಟು ದೊರೆಯುವ ಜ್ಞಾನಕ್ಕೆ ಸಮ. ಆ ಜ್ಞಾನವೇ ನಮ್ಮ ಜೊತೆ  ಇದ್ದರೆ, ಪುಸ್ತಕ ಓದುವುದು ಮಾತ್ರವಲ್ಲದೆ, ಒಂದೊಳ್ಳೆ ಪುಸ್ತಕವನ್ನು ನಾವೇ ಖುದ್ದಾಗಿ ರಚಿಸಬಹುದು. ಅಂತಹ ಜ್ಞಾನದ ಅಭಿವೃದ್ಧಿಗೆ ಪೂರಕವಾದದ್ದು ಈ  ಕಾದಂಬರಿಗಳು.ಆದ್ದರಿಂದ ಕಾದಂಬರಿಯತ್ತ ಕಳೆದು ಈ ಮನಕ್ಕೆ ಈಗ  ಒಂದೇ ಯೋಚನೆ ಮುಂದೆ ಯಾವ ರೀತಿಯ ಕಾದಂಬರಿಯ ಕಡೆಗೆ ಈ ಮನ  ಸೋಲುವುದು ಎಂದು.

- ಶಿಲ್ಪಾ, 
ದಿಡುಪೆ 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top