ರಂಗಸಂಘಟಕ ಜಿಪಿಓ ಚಂದ್ರು ದಂಪತಿಗೆ ಅದ್ಧೂರಿ ಅಭಿನಂದನೆ: ನಯನ ಸಭಾಂಗಣದಲ್ಲಿ ರಂಗ ಸಂಭ್ರಮ

Upayuktha
0




ಬೆಂಗಳೂರು: ‘ರಂಗ ಗೆಳೆಯರು’ ಸಂಘಟನೆಯ ವತಿಯಿಂದ ಬೆಂಗಳೂರು ನಗರದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ‘ಅಂಚಿ ಅಣ್ಣ’ ರಂಗಸಂಘಟಕ ಜಿಪಿಓ ಚಂದ್ರು ಅವರ ಅಭಿನಂದನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಜಿಪಿಓ ಚಂದ್ರು ಹಾಗೂ ಅವರ ಧರ್ಮಪತ್ನಿಯನ್ನು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.


ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಜಿ. ಸಿದ್ದರಾಮಯ್ಯ, ಪ್ರಸಿದ್ಧ ಜಾನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜು, ಪ್ರೊ. ಜಯಪ್ರಕಾಶ್ ಗೌಡ, ಅಂಚೆ ಸೇವೆಗಳ ನಿರ್ದೇಶಕರಾದ ಸಂದೇಶ ಮಾದೇವಪ್ಪ ಹಾಗೂ ರಾಧಾಕೃಷ್ಣ ಹೆಗಡೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಚಂದ್ರು ಅವರ ತಂದೆ-ತಾಯಿಗಳಾದ ಚಿಕ್ಕತಾಯಮ್ಮ ಮತ್ತು ಸಣ್ಣೇಗೌಡ ಹಾಗೂ ಮಕ್ಕಳಾದ ರೋಹಿತ್ ಮತ್ತು ಅರ್ಚನಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ, ಖ್ಯಾತ ನಾಟಕಕಾರ ಡಾ. ಕೆ.ವೈ. ನಾರಾಯಣಸ್ವಾಮಿ, ಡಾ. ಬೇಲೂರು ರಘುನಂದನ್, ಶ್ರೀಮತಿ ಜಯಲಕ್ಷ್ಮಿ ಸಿಜಿಕೆ, ಹಿರಿಯ ಕವಿಯತ್ರಿ ಎಚ್.ಎಲ್. ಪುಷ್ಪ, ಎಂ. ಪ್ರಕಾಶ್ ಮೂರ್ತಿ ಹಾಗೂ ಮಾಗಡಿ ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜಿಪಿಓ ಚಂದ್ರು ಅವರ ರಂಗಸೇವೆಯನ್ನು ಶ್ಲಾಘಿಸಿದರು.


ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು:

ಅಭಿನಂದನಾ ಸಮಾರಂಭಕ್ಕೂ ಮುನ್ನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಡಾ. ಜೋಗಿಲ ಸಿದ್ದರಾಜು, ಸವಿಗಾನ ಮಂಜು ಮತ್ತು ಪದ ದೇವರಾಜ್ ಅವರಿಂದ ರಂಗಗೀತೆಗಳ ಗಾಯನ ಸುಧೆ ಹರಿಯಿತು. ಸ್ವರಾಮೃತ ಸಂಗೀತ ಶಾಲೆಯ ಮಕ್ಕಳಿಂದ ಜಾನಪದ ಗೀತೆಗಳ ಗಾಯನ ಜರುಗಿತು.


‘ರಂಗ ಚಂದಿರ’ ತಂಡದ ಕಲಾವಿದರು ರಾಷ್ಟ್ರಕವಿ ಕುವೆಂಪು ವಿರಚಿತ ಪ್ರಸಿದ್ಧ "ಜಲಗಾರ" ನಾಟಕದ ಆಯ್ದ ರಂಗ ದೃಶ್ಯಾವಳಿಗಳನ್ನು ಅದ್ಭುತವಾಗಿ ವೇದಿಕೆಯ ಮೇಲೆ ಪ್ರಸ್ತುತಪಡಿಸಿದರು.


ರಂಗಾಸಕ್ತರು, ಕಲಾಭಿಮಾನಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top