ಅಡ್ಯನಡ್ಕ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ದ್ವಿತೀಯ ಪಿಯುಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಜನತಾ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ತಂದುಕೊಟ್ಟ ಬೋಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ವಿದ್ಯಾಸಂಸ್ಥೆಗೆ ಕೊಡುಗೆಯಾಗಿ ನೀಡಲಾದ ನೂತನ ಶಾಲಾ ವಾಹನಕ್ಕೆ ಜುಲೈ 11ರಂದು ಚಾಲನೆ ನೀಡಲಾಯಿತು.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಬಿಜಿಎಸ್ ಇಂಟರ್‌ನ್ಯಾಷನಲ್ ಅಕಾಡೆಮಿ ಸ್ಕೂಲ್‌ನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಮಧುಸೂದನ್ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಾಲಿನಲ್ಲಿ ಜನತಾ ವಿದ್ಯಾಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿರುವ ನೂತನ ಶಾಲಾ ವಾಹನಕ್ಕೆ ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ರಾಜ ಬಿ.ಎಸ್. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸಾಧಕರಿಗೆ ಸನ್ಮಾನ:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸಾಧಕ ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ವಾಣಿಜ್ಯ ವಿಭಾಗ: ಕಾರ್ತಿಕ್ (593 ಅಂಕ ಗಳಿಸಿ ರಾಜ್ಯಕ್ಕೆ 8ನೇ ಸ್ಥಾನ), ಆಶಿತ (562 ಅಂಕ), ಶ್ರಾವ್ಯಶ್ರೀ (549 ಅಂಕ), ಪ್ರಜ್ವಲ್ ಬಿ. (540 ಅಂಕ), ಫಾತಿಮಾ ಫಮೀಝ (535 ಅಂಕ), ಅರ್ಚನಾ (516 ಅಂಕ) ಹಾಗೂ ಹರ್ಷಿತ್ ಎಸ್. (513 ಅಂಕ).
ವಿಜ್ಞಾನ ವಿಭಾಗ: ಆಶುರ (581 ಅಂಕ), ಲಿಖಿತ (571 ಅಂಕ), ಸುಶ್ಮಿತಾ (567 ಅಂಕ), ಪ್ರತೀಕ್ಷ (565 ಅಂಕ), ಶಿಲ್ಪ (550 ಅಂಕ), ಲಿಖಿತ್ (544 ಅಂಕ) ಹಾಗೂ ಜ್ಞಾನ (528 ಅಂಕ).
ಕಲಾ ವಿಭಾಗ: ಪೂರ್ಣಶ್ರೀ (551 ಅಂಕ) ಮತ್ತು ರಫಿಯತುಲ್ ಅಝ್ಮೀನ (515 ಅಂಕ).
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಸಹಶಿಕ್ಷಕರುಗಳಾದ ರಾಜಗೋಪಾಲ ಜೋಶಿ ಎಸ್., ಕುಸುಮಾವತಿ, ಗೀತಕುಮಾರಿ ಡಿ. ಮತ್ತು ಶಿವಕುಮಾರ್ ಸಾಯ ಅವರನ್ನು ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು, ಸದಸ್ಯರುಗಳಾದ ಗೋವಿಂದರಾಯ ಶೆಣೈ ಅಡ್ಯನಡ್ಕ, ಬಳಂತಿಮೊಗರು ಈಶ್ವರ ಭಟ್, ಸಚ್ಚಿದಾನಂದ ಶಾಸ್ತ್ರಿ ನೆಕ್ಕರೆ, ಅಬ್ದುಲ್ ಕರೀಮ್ ಕುದ್ದುಪದವು, ಜಯಾನಂದ ಉಳಯ, ಹರಿಕೃಷ್ಣ ವಿ. ಎಂ., ಉಪೇಂದ್ರ ಪೈ, ಜನತಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಮುಳಿಯಾಲ, ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಪ್ರಬಂಧಕ ಸುಭಾಷ್, ಬ್ಯಾಂಕ್ ಸಿಬ್ಬಂದಿ ಸತ್ಯಪ್ರಕಾಶ್, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ಮತ್ತು ಜನತಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಆರ್. ಎಸ್. ಎಲ್ಲರಿಗೂ ಶುಭ ಹಾರೈಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹೂವು ನೀಡಿ ಪ್ರೀತಿಯಿಂದ ಸ್ವಾಗತಿಸಿದರು.
ಲೆಕ್ಕಶಾಸ್ತ್ರ ಉಪನ್ಯಾಸಕಿ ಅನಿತಾ ಬಿ. ಸನ್ಮಾನಿತರ ವಿವರ ವಾಚಿಸಿದರು. ಇತಿಹಾಸ ಉಪನ್ಯಾಸಕ ಐತ್ತಪ್ಪ ಹಾಗೂ ಸಹಶಿಕ್ಷಕ ಶಿವಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿನಿಯರ ಸ್ಫೂರ್ತಿಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ನಮ್ರತಾ ಸ್ವಾಗತ ಕೋರಿದರು, ಸುನಿಧಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಹರ್ಷಿತಾ ವಂದನಾರ್ಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
