ಜೀವನದಲ್ಲಿ ಕೆಲವು ವ್ಯಕ್ತಿಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಮ್ಮ ಬದುಕಿನ ಕಷ್ಟದ ದಿನಗಳಲ್ಲಿ ಕೈಹಿಡಿದು ನಡೆಸಿದವರು. ನನ್ನ ಜೀವನದಲ್ಲೂ ಅಂತಹ ಒಬ್ಬ ಒಳ್ಳೆಯ ವ್ಯಕ್ತಿ ಇದ್ದಾರೆ. ಅವರು ಒಂದೋಳ್ಳೆಯ ಡಾಕ್ಟರ್ ಹಾಗೆಯೇ ನನಗೆ ಒಬ್ಬ ಒಳ್ಳೆಯ ಅಣ್ಣ ಕೂಡ ಹೌದು.
ಅವರೇ ಡಾ. ನಚಿಕೇತ್ ಬಿ.ಎಸ್. ಅವರಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಯಾಕೆಂದರೆ, ನಾನು ಪ್ರಥಮ ಪಿಯುಸಿ ಓದುತ್ತಿದ್ದ ಸಮಯ....ಇದ್ದಕ್ಕಿದ್ದಂತೆ ನನ್ನ ಆರೋಗ್ಯ ತುಂಬಾ ಹದಗೆಟ್ಟಿತು. ದಿನದಿಂದ ದಿನಕ್ಕೆ ನಾನು ನಿಶ್ಯಕ್ತಳಾಗುತ್ತಿದ್ದೆ. ನಡೆಯುವುದಕ್ಕೂ ಶಕ್ತಿ ಇರಲಿಲ್ಲ. ತುಂಬಾ ಸುಸ್ತಾಗುತ್ತಿತ್ತು.. ಮನೆಯವರಿಗೆ ಆತಂಕ ಹೆಚ್ಚಾಗಿತ್ತು. ಹಲವಾರು ವೈದ್ಯರು ಒಂದೊಂದು ರೀತಿಯ ಕಾರಣ ಹೇಳುತ್ತಿದ್ದರು. ಅನೇಕ ವೈದ್ಯರು ನನ್ನನ್ನು ಪರೀಕ್ಷಿಸಿ ಇವಳಿಗೆ ಏನೂ ಸಮಸ್ಯೆಯೇ ಇಲ್ಲ ಮನೆಗೆ ಕರೆದುಕೊಂಡುಹೋಗಿ ಅನ್ನುತ್ತಿದ್ದರು..ಆದರೆ ನನ್ನ ಸಮಸ್ಯೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ನನ್ನನ್ನು ನೋಡಿದ ಅನೇಕರು ನಾನು ಮೊದಲಿನಂತೆ ಆಗುತ್ತೇನೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದರು.
ಅಂತಹ ಸಮಯದಲ್ಲಿ ನನ್ನ ಸ್ನೇಹಿತರಾದ ಸಿಂಧೂರ ಅವರು ಡಾ. ನಚಿಕೇತ್ ಬಿ.ಎಸ್. ಅವರನ್ನು ಪರಿಚಯಿಸಿದರು. ಅವರು ನನ್ನನ್ನು ಪರೀಕ್ಷಿಸಿದ ತಕ್ಷಣ, "ಈ ಹುಡುಗಿಗೆ ಬೇರೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಹಿಮೋಗ್ಲೋಬಿನ್ ಪ್ರಮಾಣ ತುಂಬಾ ಕಡಿಮೆಯಾಗಿದೆ. ಅದರಿಂದಲೇ ಇಷ್ಟು ನಿಶ್ಯಕ್ತತೆ ಎಂದು ಹೇಳಿದರು.
ಮೊದಲಿಗೆ ನಮಗೂ ನಂಬಿಕೆ ಬರಲಿಲ್ಲ. ಏಕೆಂದರೆ ಹಿಮೋಗ್ಲೋಬಿನ್ ಕಡಿಮೆ ಆದರೆ ಇಷ್ಟು ಸಮಸ್ಯೆ ಆಗುತ್ತದೆಯಾ? ಎಂಬ ಅನುಮಾನವಿತ್ತು. ಆದರೆ ನಚಿಕೇತ ಡಾಕ್ಟರ್ ನ ಮಾತಿನ ವಿಶ್ವಾಸ ನಮ್ಮಲ್ಲಿ ಹೊಸ ಭರವಸೆಯನ್ನು ಮೂಡಿಸಿತು. "ಹೆದರಬೇಡ, ನೀನು ಖಂಡಿತ ಗುಣವಾಗುತ್ತೀಯ" ಎಂಬ ಅವರ ಮಾತುಗಳು ನನ್ನ ಮನಸ್ಸಿಗೆ ಹೊಸ ಶಕ್ತಿ ನೀಡಿದವು.
ಅವರು ನನಗೆ ಹೆಚ್ಚಿನ ಔಷಧಿಗಳನ್ನು ನೀಡಲಿಲ್ಲ. ಬದಲಾಗಿ ದೇಹದಲ್ಲಿ ರಕ್ತ ಹೆಚ್ಚಾಗಲು ಬೇಕಾದ ಹಣ್ಣುಗಳು, ತರಕಾರಿಗಳು ಮತ್ತು ಪೌಷ್ಟಿಕ ಆಹಾರದ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟರು. ಅದರ ಜೊತೆಗೆ ಶಕ್ತಿ ಬರಲು ಒಂದು ಸಿರಪ್ ಹಾಗೂ ಒಂದೋ ಎರಡೋ ಮಾತ್ರೆಗಳನ್ನು ಮಾತ್ರ ನೀಡಿದರು. ಅವರು ಹೇಳಿದಂತೆ ಆಹಾರವನ್ನು ಸೇವಿಸಿದೆ.
ಕೇವಲ ಒಂದು ತಿಂಗಳಲ್ಲೇ ನನ್ನ ಆರೋಗ್ಯದಲ್ಲಿ ಅದ್ಭುತ ಬದಲಾವಣೆ ಕಂಡುಬಂತು. ನಾನು ಸಂಪೂರ್ಣವಾಗಿ ಚೇತರಿಸಿಕೊಂಡೆ. ಮೊದಲಿಗಿಂತಲೂ ಹೆಚ್ಚು ಆರೋಗ್ಯವಂತಳಾದೆ. ನನ್ನ ಅಪ್ಪ-ಅಮ್ಮನ ಮುಖದಲ್ಲಿ ಮತ್ತೆ ಸಂತೋಷದ ನಗು ಮೂಡಿತು. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ.
ಆ ದಿನದಿಂದ ಇಂದಿನವರೆಗೂ ನನ್ನ ಕಣ್ಣಿಗೆ ಡಾ. ನಚಿಕೇತ್ ಅವರು ವೈದ್ಯರಷ್ಟೇ ಅಲ್ಲ, ಮನುಷ್ಯನ ರೂಪದಲ್ಲಿ ಇರುವ ದೇವರು. ಅವರು ಕೊಟ್ಟ ಔಷಧಿಗಳು ನನ್ನ ದೇಹಕ್ಕೆ ಶಕ್ತಿ ನೀಡಿದ್ದರೆ, ಅವರ ಮಾತುಗಳು ನನ್ನ ಮನಸ್ಸಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿವೆ.
ಇಂದಿಗೂ ಆರೋಗ್ಯದಲ್ಲಿ ಯಾವುದೇ ಸಣ್ಣ ಸಮಸ್ಯೆ ಆದರೂ ಅಣ್ಣಾ ಹೀಗಾಗಿದೆ ಎಂದರೆ ಸಾಕು ಮೊದಲು ಧೈರ್ಯ ತುಂಬುತ್ತಾರೆ, ನಂತರ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಅದಕ್ಕಾಗಿಯೇ ಅವರು ನನಗೆ ಕೇವಲ ವೈದ್ಯರಲ್ಲ, ದೇವರು ಅನಿಸುವುದು...ಅವರ ಮೇಲಿರುವ ಗೌರವ ಸಾಗರದಷ್ಟು, ಅಭಿಮಾನ ಬೆಟ್ಟದಷ್ಟು.
ಹಾಗಾಗಿ ಮೊದಲೇ ಹೇಳಿರುವ ಹಾಗೆಯೇ ಅವರು ನನಗೆ ಉತ್ತಮ ವೈದ್ಯರೂ ಹೌದು, ಉತ್ತಮ ಅಣ್ಣನೂ ಹೌದು...ಮತ್ತೇನೆಂದರೆ ಮುಖ್ಯವಾಗಿ ಅವರು ಜನರ ಸಮಸ್ಯೆಗೆ ಸ್ಪಂಧಿಸುವ , ವಿಶ್ವಾಸ ನೀಡುವ ಉತ್ತಮ ಮನುಷ್ಯ ಎನ್ನಬಹುದು.
ಈ ಬರಹವನ್ನು ನಾನು ಅವರ ಪ್ರಚಾರಕ್ಕಾಗಿ ಬರೆಯುತ್ತಿಲ್ಲ. ನನ್ನ ಜೀವನದಲ್ಲಿ ನಡೆದ ನೈಜ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ಬದುಕಿಗೆ ಹೊಸ ಭರವಸೆ ನೀಡಿದ, ಮರುಜೀವ ನೀಡಿದ ಆ ಮಹಾನ್ ವೈದ್ಯರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ಹಾಗೆಯೇ, ಅಂತಹ ಒಳ್ಳೆಯ ವೈದ್ಯರನ್ನು ನನಗೆ ಪರಿಚಯಿಸಿದ ನನ್ನ ಸ್ನೇಹಿತ ಸಿಂಧೂರ ಅವರಿಗೂ ನನ್ನ ಅನಂತ ಧನ್ಯವಾದಗಳು.
ಆ ದೇವರು ಡಾ. ನಚಿಕೇತ್ ಬಿ.ಎಸ್. ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನೂ ಅನೇಕ ಜನರ ಬದುಕಿನಲ್ಲಿ ಬೆಳಕಾಗುವ ಶಕ್ತಿಯನ್ನು ಕರುಣಿಸಲಿ. 🙏
ಹೊನ್ನಾವರದಲ್ಲಿ ಅವರ ಕ್ಲಿನಿಕ್ ಇದೆ. ಸಂಜೀವಿನಿ ಕ್ಲಿನಿಕ್ ಎಂದು ಹೆಸರು
📞 96114 43251 ಇದು ಅವರ ಫೋನ್ ನಂಬರ್
ಸಂಜೀವಿನಿ ಕ್ಲಿನಿಕ್
ಹೊನ್ನಾವರ
🖊️ : ಸವಿತಾ ಹೆಗಡೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

