ಶ್ರೀನಿವಾಸ್ ಮೋತ್ಕರ್ ಹುಟ್ಟುಹಬ್ಬ ಆಚರಣೆ-ಶುಭ ಕೋರಿದ ಮಾಜಿ ಶಾಸಕ ಸೋಮಶೇಖರರೆಡ್ಡಿ

Upayuktha
0





ಬಳ್ಳಾರಿ,ಜು.10: ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರು ಹಾಗೂ ಪಾಲಿಕೆಯ 24ನೇ ವಾರ್ಡಿನ ಸದಸ್ಯರೂ ಆದ ಶ್ರೀನಿವಾಸ್ ಮೋತ್ಕರ್ ರವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು.


ಬಳ್ಳಾರಿ ನಗರದ ಮಾಜಿ ಶಾಸಕರು ಹಾಗೂ ಕೆಎಂಎಫ್‌ನ ಮಾಜಿ ರಾಜ್ಯಾಧ್ಯಕ್ಷರು ಮತ್ತು ಬಿಜೆಪಿಯ ಹಿರಿಯ ಧುರೀಣರಾದ ಗಾಲಿ ಸೋಮಶೇಖರರೆಡ್ಡಿ ರವರು ಶ್ರೀನಿವಾಸ್ ಮೋತ್ಕರ್‌ರವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಸತ್ಕರಿಸಿದರು.


ಶ್ರೀನಿವಾಸ್ ಮೋತ್ಕರ್ ತಮ್ಮ ಜನ್ಮದಿನಾಚರಣೆಯ ಅಂಗವಾಗಿ ಪಾಲಿಕೆಯ 24ನೇ ವಾರ್ಡ್‌ನ ಶ್ರೀನಗರ ಬಡಾವಣೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ  ಬೆಳಿಗ್ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಾದಿಗಳಿಗೆ, ಬಿಜೆಪಿ ಕಾರ್ಯಕರ್ತರಿಗೆ ಪ್ರಸಾದ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರು, ಬಿಜೆಪಿಯ ಯುವ ಮುಖಂಡರಾದ ಎಸ್‌.ಮಲ್ಲನಗೌಡ, ಜನತಾಬಜಾರ್‌ನ ಮಾಜಿ ಅಧ್ಯಕ್ಷ ಕೆ.ಎ.ವೇಮಣ್ಣ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಯುವಕರು, ಕಾರ್ಯಕರ್ತರು ಭಾಗವಹಿಸಿ, ಶ್ರೀನಿವಾಸ್‌ ಮೋತ್ಕರ್‌ರಿಗೆ ಅಭಿನಂದಿಸಿದರು.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top