ಕೆನರಾ ಶಾಲೆಯಲ್ಲಿ 2025-26ರ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ ಹಾಗೂ ‘ವಾಲ್ ಆಫ್ ಫೇಮ್’ ಸಾಧಕರ ಯಶಸ್ಸಿನ ಭಿತ್ತಿ ಫಲಕ ಅನಾವರಣ

Upayuktha
0



ಮಂಗಳೂರು, ಜುಲೈ 12: ಕೊಡಿಯಾಲಬೈಲ್‌ನ ಕೆನರಾ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳಿಗೆ 12.07.2026 ರಂದು ಸಂಜೆ 4.30ಕ್ಕೆ ಭವ್ಯ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಎಸ್.ಎಲ್.ಸಿ. ಸಾಧಕರ ಹೆಸರನ್ನು ಒಳಗೊಂಡ ‘Wall of Fame’ ನಾಮಫಲಕವನ್ನು ಕೆನರಾ ವಿಕಾಸ್ ವಿದ್ಯಾಸಂಸ್ಥೆಗಳ ಸಮೂಹದ ಸಂಯೋಜಕರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಸದಸ್ಯರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ,  ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಉಪಾಧ್ಯಕ್ಷರು ಹಾಗೂ ಕೆನರಾ ಶಾಲೆಯ ಸಂಚಾಲಕರಾದ ಶ್ರೀ ಕೆ ಸುರೇಶ್ ಕಾಮತ್, ಕೆನರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕವಿತಾ ಮೌರ್ಯ ಹಾಗೂ ಎಸ್.ಎಸ್.ಎಲ್.ಸಿ. ಟಾಪರ್  ಪವನ್ ಅವರಿಂದ ಅನಾವರಣಗೊಳಿಸಲಾಯಿತು.


 ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ ಅವರು 2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳನ್ನು ಹೂ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಪರಿಶ್ರಮ, ಶಿಸ್ತು ಮತ್ತು ದೃಢಸಂಕಲ್ಪದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಪ್ರೇರೇಪಿಸಿದರು. ಶ್ರೀ ಕೆ ಸುರೇಶ್ ಕಾಮತ್ ಅವರು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲ ಸಾಧಕರಿಗೆ ಶುಭ ಹಾರೈಸಿದರು. 


ಶ್ರೀಮತಿ ರಕ್ಷಾ ನಿರೂಪಿಸಿದರು ಶ್ರೀಮತಿ ನಮಿತಾ ಮಲ್ಯ ಸ್ವಾಗತಿಸಿದರು.. ಸಹಶಿಕ್ಷಕಿ  ಕುಮಾರಿ ನವ್ಯಶ್ರೀ ವಂದನಾರ್ಪಣೆಗೈದರು.


ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕವಿತಾ ಮೌರ್ಯ, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ PRO ಶ್ರೀಮತಿ ಉಜ್ವಲ್ ಮಲ್ಯ, ಕೆನರಾ ಇಂಟರ್ ನ್ಯಾಷನಲ್  ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೃಪ್ತಿ , ಕೆನರಾ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಸನ್ಮಾನಿತ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದು, ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಸಮಾರಂಭವು ಸಂಭ್ರಮ ಮತ್ತು ಗೌರವದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top