ಕೇಶವ ಶಿಶು ಮಂದಿರಕ್ಕೆ ಇನ್ವರ್ಟರ್ ಹಾಗೂ ಬ್ಯಾಟರಿ ಸಮರ್ಪಣೆ

Upayuktha
0



ಕುಳಾಯಿ: ಇಲ್ಲಿನ ವಿದ್ಯಾನಗರದ ಕೇಶವ ಶಿಶು ಮಂದಿರಕ್ಕೆ ಶ್ರೀ ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ಕುಳಾಯಿ ಹಾಗೂ ಶ್ರೀಮತಿ ಎಂ. ಸುಮತಿ ಫೌಂಡೇಶನ್ ಕುಳಾಯಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇನ್ವರ್ಟರ್ ಮತ್ತು ಬ್ಯಾಟರಿ ಸಮರ್ಪಣಾ ಸಮಾರಂಭವು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಎಂ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಆರ್.ಪಿ.ಎಲ್. (MRPL) ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀ ಸುರೇಶ ಕೆ. ಆರ್. ಮಾತನಾಡಿ, "ಬಾಲ್ಯದಲ್ಲಿಯೇ ಮಕ್ಕಳಿಗೆ ಸನಾತನ ಧರ್ಮ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳುವಳಿಕೆಯನ್ನು ನೀಡುತ್ತಿರುವ ಕೇಶವ ಶಿಶು ಮಂದಿರದ ಕಾರ್ಯ ನಿಜಕ್ಕೂ ಸ್ತುತ್ಯರ್ಹವಾಗಿದೆ" ಎಂದು ಶ್ಲಾಘಿಸಿದರು.


ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಎಂ. ರಮೇಶ್ ಅವರು, ಟ್ರಸ್ಟಿನ ಸಮಾಜಮುಖಿ ಕೆಲಸಗಳಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಶ್ರೀ ಪವನ್ ಮೈರ್ಪಾಡಿ ಅವರು ಟ್ರಸ್ಟಿನ ಧ್ಯೇಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. 


ಕುಳಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿಠಲ್ ಸಾಲ್ಯಾನ್ ಅವರು ದಿವಂಗತ ಶ್ರೀ ಎಂ. ಶಂಕರನಾರಾಯಣಯ್ಯ ಮತ್ತು ದಿವಂಗತ ಶ್ರೀಮತಿ ಸುಮತಿಯಮ್ಮ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತೆ ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಕೇಶವ ಶಿಶು ಮಂದಿರದ ಟ್ರಸ್ಟಿ ಹಾಗೂ ಗೌರವಾಧ್ಯಕ್ಷರಾದ ಶ್ರೀ ಚಂದ್ರಶೇಖರ ಕೆ. ಪಿ. ಅವರು ಶಿಶು ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ವಿಶೇಷ ಧನಸಹಾಯ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಪುಟಾಣಿಗಳಿಂದ ಹುಟ್ಟುಹಬ್ಬದ ಸಂಭ್ರಮ:

ಕಾರ್ಯಕ್ರಮದ ವಿಶೇಷ ಅಂಗವಾಗಿ ಶ್ರೀಮತಿ ಅಮೃತ ಮತ್ತು ಶ್ರೀ ಪ್ರವೀಣ ಮೈರ್ಪಾಡಿ ದಂಪತಿಯ ಮಕ್ಕಳಾದ ಕುಮಾರಿ ಸಿಯಾ ಹಾಗೂ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಹಿಂದೂ ಸಂಸ್ಕೃತಿಯಂತೆ ಆಚರಿಸಲಾಯಿತು. ಕೇಶವ ಶಿಶು ಮಂದಿರದ ಪುಟಾಣಿ ಮಕ್ಕಳು ಇಬ್ಬರಿಗೂ ಆರತಿ ಬೆಳಗಿ ಶುಭ ಹಾರೈಸಿದರು.


ಗಣ್ಯರ ಉಪಸ್ಥಿತಿ:

ವೇದಿಕೆಯಲ್ಲಿ ಶಿಶು ಮಂದಿರದ ಅಧ್ಯಕ್ಷರಾದ ಶ್ರೀ ಉಮೇಶ್ಚಂದ್ರ ಕೋಟ್ಯಾನ್, ಗೌರವಾಧ್ಯಕ್ಷರಾದ ಶ್ರೀ ಶೇಖರ ದೇವಾಡಿಗ, ಕಾರ್ಯದರ್ಶಿ ಶ್ರೀ ದಿನೇಶ ದೇವಾಡಿಗ, ಟ್ರಸ್ಟಿನ ಪ್ರಮುಖರಾದ ಶ್ರೀ ಬಾಲಕೃಷ್ಣ, ಶ್ರೀ ದಿವಾಕರ್ ಎಂ., ಶ್ರೀ ಶ್ರೀಪತಿ ಭಟ್, ಶ್ರೀ ಶುಭಕರ, ಕೇಶವ ಶಿಶು ಮಂದಿರದ ಮಾತಾಜಿ ಶ್ರೀಮತಿ ವಿನಯ, ಕೋಟೆದಬಬ್ಬು ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ರತನ್ ಕುಮಾರ್, ಸಮಾಜ ಸೇವಕರಾದ ಶ್ರೀ ರಮೇಶ್ ಅಳಪೆ, ಶ್ರೀ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


ಕೇಶವ ಶಿಶು ಮಂದಿರದ ಕೋಶಾಧಿಕಾರಿ ಶ್ರೀ ವಿ. ಜೆ. ಸುರೇಶ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಕುಳಾಯಿ ವಂದನಾರ್ಪಣೆ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top