ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹು ಮಟ್ಟಿಗೆ ನಮ್ಮ ಬದುಕನ್ನು ನಿಯಂತ್ರಿಸುತ್ತದೆ. ಈ ದೈಹಿಕ ಮತ್ತು ಮಾನಸಿಕ ಆರೋಗ್ಯದ ನೆನಪಾಗುವುದಕ್ಕೆ ಮುಖ್ಯ ಕಾರಣ ನಮ್ಮ ವೈದ್ಯರು. ಪ್ರತಿ ವರ್ಷ ಜುಲೈ 1ನೇ ತಾರೀಖು ನಾವು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ಜೀವನದ ಆಶಾಕಿರಣ ಎಂದರೆ ವೈದ್ಯರು ಮಾತ್ರ. ಪ್ರಸಿದ್ಧ ವೈದ್ಯರಾದ ಡಾ ಬಿ.ಸಿ.ರಾಯ್ ರವರ ಜನ್ಮ ದಿನವಾದ ಜುಲೈ 1ನೇ ತಾರೀಖು ವೈದ್ಯರ ದಿನವನ್ನಾಗಿ ಘೋಷಿಸಲಾಗಿದೆ. ವೈದ್ಯರು ಕೇವಲ ಒಂದು ವೃತ್ತಿ ಮಾತ್ರವಲ್ಲ, ಅವರು ಸಮಾಜದ. ಅವಿಭಾಜ್ಯ ಅಂಗ ಕೂಡ ಹೌದು.
ಸಂಸ್ಕ್ರತದಲ್ಲಿ ವೈದ್ಯೋ ನಾರಾಯಣ ಹರಿ ಎಂದು ಕರೆಯಲಾಗುತ್ತಿದೆ. ಅಂದರೆ ನಮ್ಮ ಜೀವವನ್ನು ಉಳಿಸುವ ವೈದ್ಯರನ್ನು ಭಗವಂತ ಎಂದೇ ತಿಳಿಯಲಾಗುತ್ತಿದೆ.
ಆಯುರ್ವೇದದಲ್ಲಿ ಧನ್ವಂತರಿ ಯನ್ನು ಆಯುವೇದದ ದೇವತೆ ಎಂದು ಪೂಜಿಸಲಾಗುತ್ತಿದೆ. ವೈದ್ಯರು ಕೇವಲ ಒಂದು ವೃತ್ತಿಗೆ ಮಾತ್ರ ಸೀಮಿತವಲ್ಲ. ಎಷ್ಟೋ ವೈದ್ಯರು ಶಾಸಕರು, ಮಂತ್ರಿಗಳು ಕೂಡ ಆಗಿದ್ದಾರೆ. ನಾನು ವಿಮಾನದಲ್ಲಿ ಪಯಣಿಸುವಾಗ, ಒಬ್ಬ ಹಿರಿಯ ಮಹಿಳೆಗೆ ಆರೋಗ್ಯದಲ್ಲಿ ಏರುಪೇರು ಆದಾಗ ಅಲ್ಲಿದ್ದ ವೈದ್ಯರು ಬಂದು ಪ್ರಥಮ ಚಿಕಿತ್ಸೆ ಮಾಡಿ ಅವರ ಜೀವ ಉಳಿಸಿದ್ದು ವೈದ್ಯರ ಮಾನವೀಯತೆಯ ಪ್ರತೀಕವಾಗಿ ಕಂಡರು. ನಮ್ಮ ಫ್ಯಾಮಿಲಿ ಡಾಕ್ಟರ್ ರಿಗೆ ನಮ್ಮ ವಂಶದ ಬಗ್ಗೆ ಗೊತ್ತಿದ್ದು ನಮಗೆ ಎಷ್ಟೋ ಸಲ ಗೊತ್ತಿರುವುದಿಲ್ಲ.
ಹಳ್ಳಿಗಳಲ್ಲಿ ಎಷ್ಟೋ ವೈದ್ಯರು ಕೇವಲ ಐದು, ಹತ್ತು ರುಪಾಯಿಗೆ ಟ್ರೀಟ್ಮೆಂಟ್ ಕೊಟ್ಟು ಚೀಟಿ ವೈದ್ಯರು ಎಂದೇ ಪ್ರಸಿದ್ಧಿ ಪಡೆದಿರುತ್ತಾರೆ. ಎಷ್ಟೋ ವೈದ್ಯರು ನಮ್ಮ ನಾಡಿ ಮಿಡಿತವನ್ನು ನೋಡಿಯೇ ನಮ್ಮ ರೋಗ ಲಕ್ಷಣವನ್ನು ಗುರುತು ಹಿಡಿಯುತ್ತಾರೆ. ನಾನು ಚಿಕ್ಕವಳಿದ್ದಾಗ ಕೇವಲ ಹತ್ತು ರುಪಾಯಿಗೆ ಇಂಜೆಕ್ಷನ್ ಕೊಟ್ಟ ಡಾಕ್ಟರರು ಈಗ ಎಲ್ಲಿದ್ದಾರೋ ಗೊತ್ತಿಲ್ಲ.
ಸಮಾಜದಲ್ಲಿ ವೈದ್ಯರ ಮಕ್ಕಳು ಬೇಗ ಹೊಂದಿ ಕೊಳ್ಳುವ ಸ್ವಭಾವ ಬೆಳೆಸಿ ಕೊಂಡಿರುತ್ತಾರೆ ಎಂದು ಹೇಳಲಾಗುತ್ತಿದೆ. ಬನ್ನಿ, ನಮ್ಮ ಜೀವನದ ಆರೋಗ್ಯಕ್ಕೆ ಔಷಧ ಕೊಟ್ಟು ನಮ್ಮ ನೆಮ್ಮದಿಯನ್ನು ಉಳಿಸುವ ವೈದ್ಯರಿಗೆ ಒಂದು ಸೆಲ್ಯೂಟ್. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


