ಧರ್ಮಸ್ಥಳದಲ್ಲಿ “ಜ್ಞಾನ ಚಂದನ” ಮತ್ತ”ಜ್ಞಾನ ನಂದನ” ಕೃತಿಗಳ ಬಿಡುಗಡೆ ಸಮಾರಂಭ

Upayuktha
0

 


ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಸಕ್ತ ಶೈಕ್ಷಣಿಕವರ್ಷಕ್ಕಾಗಿ ಪ್ರಕಟಿಸಲಾದ “ಜ್ಞಾನ ಚಂದನ” ಮತ್ತು “ಜ್ಞಾನ ನಂದನ” ಕೃತಿಗಳನ್ನು ಆ. 1ರಂದು ಶನಿವಾರ ಪೂರ್ವಾಹ್ನ ಹನ್ನೊಂದು ಗಂಟೆಗೆ ಧರ್ಮಸ್ಥಳದಲ್ಲಿ ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರರಾದ ದೀಪಾ ಹಿರೇಗುತ್ತಿ ಬಿಡುಗಡೆಗೊಳಿಸುವರು ಎಂದು ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಜಗನ್ನಾಥ್ ಹಾಗೂ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಚಲನಚಿತ್ರ ನಟ ಅಭಿಜಿತ್ ಶುಭಾಶಂಸನೆ ಮಾಡುವರು.

ದಕ್ಷಿಣಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ್ ಭಾಗವಹಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.

ಉಜಿರೆಯ ಎಸ್.ಡಿ.ಎಂ. ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಕುಂಚಕಲಾವಿದ ಪೆರ್ಮುದೆ ಮೋಹನಕುಮಾರ್ ಅವರಿಂದ ಚಿತ್ರಕಲಾ ಪ್ರದರ್ಶನವಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top