ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಅರಿವು ಕಾರ್ಯಕ್ರಮ

Upayuktha
0

 


ಹಾಸನ :  ಪ್ರಜಾಪ್ರಭುತ್ವದ ಯಶಸ್ಸು ನಮ್ಮ ದೇಶದ ಯಶಸ್ಸು ಆಗಿರುವುದರಿಂದ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ಬಿ.ಎಲ್. ಓ ರವರು ಮನೆ ಬಾಗಿಲಿಗೆ ಬಂದಾಗ ಅರ್ಜಿ ನಮೂನೆಯಲ್ಲಿ ಮತದಾರರ ಹೆಸರು ಇದೆಯೇ ಎಂದು ಪರಿಶೀಲಿಸಿ, ಸೂಕ್ತ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಪೋಷಕರಿಗೆ ಹಾಗೂ ನೆರೆಹೊರೆ ಮನೆಯ ನಾಗರೀಕರಿಗೆ ತಿಳಿಸಬೇಕೆಂದು ಹಿರಿಯ ಶಿಕ್ಷಕರಾದ ಹೆಚ್. ಪಿ. ಮಂಜುಳ ತಿಳಿಸಿದರು.


ಇವರು ನಗರದ ಆರ್. ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಎಸ್ ಐ ಆರ್ ಮಾಹಿತಿಯನ್ನು ನೀಡುತ್ತಾ ದೇಶದ ಪ್ರತೀ ಪ್ರಜೆಯೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಜವಾಬ್ದಾರಿ. ಅದನ್ನು ಕರ್ತವ್ಯವೆಂದು ತಿಳಿದು ನಿರ್ವಹಿಸುವ ಮೂಲಕ ದೇಶದ ಸುಭದ್ರ ಆಡಳಿತಕ್ಕೆ ಕಾರಣವಾಗಬೇಕು. ಮತದಾನವು ನಮಗೆ ಬದುಕಿನ ಹಕ್ಕು ಆಗಿದ್ದು ಒಂದು ಉತ್ತಮ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಮತ್ತು ದುರ್ಬಳಕೆ ಮಾಡಿಕೊಳ್ಳಬಾರದು. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.


ಶಾಲಾ ಚುನಾವಣಾ ಸಾಕ್ಷರತಾ ಸಂಘದ ಶಿಕ್ಷಕ ಕೆ.ಎನ್. ಚಿದಾನಂದ ಮಾತನಾಡುತ್ತ ಎಸ್ ಐ ಆರ್ ಪ್ರಕ್ರಿಯೆ ಒಂದು ವಿನೂತನ ಕಾರ್ಯಕ್ರಮವಾಗಿದ್ದು ಆ ಮೂಲಕ ಪ್ರತಿಯೋರ್ವ ಅರ್ಹ ನಾಗರೀಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ, ಹೆಸರು ಸೇರ್ಪಡೆ, ತಿದ್ದುಪಡಿ ಇತ್ಯಾದಿ ಮಾಹಿತಿಗಳನ್ನು ಮನೆಗೆ ಆಗಮಿಸುವ ಬಿ.ಎಲ್ ಓ ರವರಿಗೆ  ನೀಡುವಂತೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ತಂದೆ ತಾಯಿಗಳಿಗೆ ತಿಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಜಾಗೃತಿ ಜಾಥಾ, ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು. ಈ ಪ್ರಕ್ರಿಯೆ ಇದೇ ಜುಲೈ 29 ರ ವರೆಗೆ ನಡೆಯುತ್ತಿದ್ದು, ಆದಷ್ಟು ಬೇಗನೆ ಮಾಹಿತಿ ನೀಡುವಲ್ಲಿ ಎಲ್ಲರೂ ಸಹಕರಿಸುವುದು ಪ್ರತೀ ನಾಗರಿಕರ ಅದ್ಯ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು. 


ತಪ್ಪಿಲ್ಲದ ಮತದಾರರ ಪಟ್ಟಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಶಕ್ತಿಯಾಗಿದೆ. ಸರಿಯಾದ ಮತಪಟ್ಟಿ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸೋಣ. ಮನೆ ಬಾಗಿಲಿಗೆ ಬರುವ ಬಿ. ಎಲ್. ಓ ಅಧಿಕಾರಿಗೆ ಮಾಹಿತಿ ನೀಡಿ : ನಿಮ್ಮ ಮತವನ್ನು ಖಚಿತ ಪಡಿಸಿ, ನನ್ನ ಮತ ನನ್ನ ಹಕ್ಕು ಎಂದು ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಅರಿವು ಮೂಡಿಸಬೇಕಿದೆ ಎಂದರು. 


ಎ ವಿ ಗೀತಾರಾಣಿ, ರುದ್ರೇಶ್, ಎಂ.ಆರ್ ರಂಗಾಮಣಿ, ಮಧು .ಪಿ., ಸತ್ಯನಾರಾಯಣ ಮುರಳಿ, ತೈಬಾಕೌಸರ್, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top