ಲೇಖನ: ಗುರು- ಶಿಷ್ಯರ ಬಾಂಧವ್ಯ

Upayuktha
0

ಗುರು-ಶಿಷ್ಯ ಪರಂಪರೆಯು ಜ್ಞಾನವನ್ನು ಗುರುವಿನಿಂದ ಶಿಷ್ಯನಿಗೆ ಮೌಖಿಕವಾಗಿ ಹಾಗೂ ಪ್ರಾಯೋಗಿಕವಾಗಿ ಹಸ್ತಾಂತರಿಸುವ ಪ್ರಾಚೀನ ಭಾರತೀಯ ಸಂಪ್ರದಾಯವಾಗಿದೆ. ಯಾವುದೇ ಒಂದು ಕಲೆ ಅಥವಾ ವಿದ್ಯೆಯನ್ನು ಕಲಿಯಬೇಕಾದರೂ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಗುರು ಎಂದರೆ ಶಿಷ್ಯರ ಗುರಿ ಎಂದು ಹೇಳಬಹುದು. ಏನನ್ನೂ ಅರಿಯದ ವಿದ್ಯಾರ್ಥಿಯನ್ನು ಕೂಡ ಒಬ್ಬ ಉತ್ತಮ ವಿದ್ಯಾವಂತನಾಗಿ ಬೆಳೆಸುವಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ.


"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ" ಎಂಬ ಮಾತಿನ ಅರ್ಥ, ಒಬ್ಬ ವ್ಯಕ್ತಿಯು ತನ್ನ ಗುರುವಿನ ಮಾರ್ಗದರ್ಶನಕ್ಕೆ  ಸಂಪೂರ್ಣವಾಗಿ ಶರಣಾಗುವವರೆಗೂ ಅವನಿಗೆ ನಿಜವಾದ ಜ್ಞಾನ ಅಥವಾ ಮುಕ್ತಿ ದೊರೆಯುವುದಿಲ್ಲ ಎಂಬುದಾಗಿದೆ. ಸರಿಯಾದ ಮಾರ್ಗವನ್ನು ತೋರಿಸುವ ಮಾರ್ಗದರ್ಶಕನೇ ನಿಜವಾದ ಗುರು. ನಾವು ಯಾವುದೇ ಹೊಸ ವಿಷಯವನ್ನು ಕಲಿಯುವಾಗ ಅದರಲ್ಲಿರುವ ತಪ್ಪುಗಳನ್ನು ತಿದ್ದಿ, ಅದನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡುವವನೇ ಗುರು.


ಒಬ್ಬ ವಿದ್ಯಾರ್ಥಿಯು ಕಲೆಯನ್ನು ಸಂಪೂರ್ಣವಾಗಿ, ಯಾವುದೇ ತಪ್ಪಿಲ್ಲದೆ ಕಲಿತು ಅದನ್ನು ಇತರರಿಗೆ ಪ್ರದರ್ಶಿಸಬೇಕಾದರೆ, ಅದಕ್ಕೆ ಗುರುಗಳೇ ಪ್ರಮುಖ ಕಾರಣರಾಗುತ್ತಾರೆ. ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯ ಸಂಬಂಧವು ಪವಿತ್ರವಾದ ಆಧ್ಯಾತ್ಮಿಕ ಹಾಗೂ ನೈತಿಕ ಬಂಧವಾಗಿದೆ. ಗುರು ಎಂದರೆ ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನವೆಂಬ ಬೆಳಕನ್ನು ನೀಡುವವನು. ಇದು ಕೇವಲ ಕಲಿಯುವ ಮತ್ತು ಕಲಿಸುವ ಸಂಬಂಧವಲ್ಲ; ಬದಲಾಗಿ ನಂಬಿಕೆ, ಭಕ್ತಿ ಹಾಗೂ ಮಾರ್ಗದರ್ಶನದ ಮೇಲೆ ನಿಂತಿರುವ ಅಮೂಲ್ಯ ಬಾಂಧವ್ಯವಾಗಿದೆ.


ವೇದಗಳು, ಉಪನಿಷತ್ತುಗಳು, ಸಂಗೀತ, ಕಲೆ ಹಾಗೂ ಆಧ್ಯಾತ್ಮಿಕ ಜ್ಞಾನಗಳು ಈ ಪರಂಪರೆಯ ಮೂಲಕವೇ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿವೆ. ಶಿಷ್ಯನು ತನ್ನ ಅಹಂಕಾರವನ್ನು ತೊರೆದು, ಸಂಪೂರ್ಣ ನಂಬಿಕೆಯೊಂದಿಗೆ ಗುರುವಿನಿಂದ ವಿದ್ಯೆಯನ್ನು ಕಲಿಯುತ್ತಾನೆ. ಗುರುವು ಕೇವಲ ಪುಸ್ತಕದ ಜ್ಞಾನವನ್ನು ನೀಡುವುದಲ್ಲದೆ, ಶಿಷ್ಯನ ಜೀವನಕ್ಕೆ ಸರಿಯಾದ ದಾರಿಯನ್ನು ತೋರಿಸಿ ಸದ್ಗುಣಗಳನ್ನು ಬೆಳೆಸುತ್ತಾನೆ.


ಗುರುವು ವಿದ್ಯಾರ್ಥಿಗೆ ಕೇವಲ ಅಕ್ಷರಜ್ಞಾನವನ್ನು ಕಲಿಸುವುದಲ್ಲದೆ, ಬದುಕಿನ ಮೌಲ್ಯಗಳು, ಶಿಸ್ತು ಹಾಗೂ ಸಂಪ್ರದಾಯಗಳನ್ನು ತಿಳಿಸುತ್ತಾನೆ. ಪ್ರಾಚೀನ ಕಾಲದಲ್ಲಿ ಆಶ್ರಮ ಪದ್ಧತಿ ಇತ್ತು. ಅಲ್ಲಿ ಶಿಷ್ಯರು ಗುರುವಿನ ಆಶ್ರಮದಲ್ಲಿ ವಾಸಿಸಿ, ಪ್ರಕೃತಿಯ ಮಡಿಲಲ್ಲಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಗುರುಗಳು ತಮ್ಮಲ್ಲಿರುವ ಜ್ಞಾನವನ್ನು ಯಾವುದೇ ಸ್ವಾರ್ಥವಿಲ್ಲದೆ ಶಿಷ್ಯರಿಗೆ ಧಾರೆ ಎರೆಯುತ್ತಿದ್ದರು.


ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅತ್ಯಗತ್ಯವಾಗಿದೆ. ಯಾವುದೇ ವಿಷಯವನ್ನು ನಾವು ಸ್ಪಷ್ಟವಾಗಿ ಮತ್ತು ಆಳವಾಗಿ ಕಲಿತಷ್ಟೂ ನಮ್ಮ ಜ್ಞಾನವು ವಿಸ್ತಾರಗೊಂಡು, ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾಗುತ್ತದೆ. ಹೀಗಾಗಿ ಗುರುಗಳು ನಮ್ಮ ಜೀವನದ ನಿಜವಾದ ದಾರಿದೀಪಗಳಾಗಿದ್ದಾರೆ.



– ಗ್ರೀಷ್ಮ ಪಾಣಾಜೆ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top