ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ), ಮೂಡುಬಿದಿರೆಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಎಸಿಸಿಎ (Association of Chartered Certified Accountants – UK) ಜೂನ್–2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸ್ಕಿಲ್ಸ್ ಲೆವೆಲ್‌ನ ಫಿನಾನ್ಷಿಯಲ್ ರಿಪೋರ್ಟಿಂಗ್ ವಿಷಯದಲ್ಲಿ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಮಿಕ್ಷಾ ಡಿ. ನಾಯಕ್, ಮೂಲ್ಯ ಐಶ್ವರ್ಯ, ಮೊಹಮ್ಮದ್ ಅರ್ಫಾಜ್, ಖದೀಜಾ ತನಾಝಾ, ಹಫೀಝಾ, ಶಾಜಿನ್ ಅಬ್ದುಲ್ ರಹಿಮಾನ್, ತೇಜಸ್ ಸಿ. ಜಿ., ಶೇಖ್ ಅಬ್ದುಲ್ ತನ್ಝೀಮ್, ಮೊಹಮ್ಮದ್ ನಾಫಿ, ಮೊಹಮ್ಮದ್ ಬಶೀರ್ ಹಾಗೂ ಲಿಯೋನಾ ಅವ್ರಿಲ್ ರೋಡ್ರಿಗಸ್ ಉತ್ತೀರ್ಣರಾದ ವಿದ್ಯಾರ್ಥಿಗಳು. ಪ್ರೊಫೆಷನಲ್ ಲೆವೆಲ್‌ನ ಸ್ಟಾçಟಜಿಕ್ ಬಿಸಿನೆಸ್ ರಿಪೋರ್ಟಿಂಗ್ ವಿಷಯದಲ್ಲಿ ಮೊಹಮ್ಮದ್ ಇಫಾಝ್ ಹಾಗೂ ನಿಶಾಂತ್ ಬಿ. ಪೂಜಾರಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಅದೇ ರೀತಿ ಪ್ರೊಫೆಷನಲ್ ಲೆವೆಲ್‌ನ ಅಡ್ವನ್ಸ್ ಆಡಿಟ್ ಆ್ಯಂಡ್ ಅಶ್ಯುರೆನ್ಸ್ ವಿಷಯದಲ್ಲಿ ಅಲ್ಮಾಜ್ ಉತ್ತೀರ್ಣರಾಗುವ ಮೂಲಕ ಕಾಲೇಜಿನ ಸಾಧನೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ಎಸಿಸಿಎ ಅರ್ಹತೆ ಪಡೆದವರು ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು, ಆಡಿಟ್ ಸಂಸ್ಥೆಗಳು, ಹಣಕಾಸು ಸಲಹಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉತ್ತಮ ವೃತ್ತಿ ಅವಕಾಶಗಳನ್ನು ಪಡೆಯುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಪತ್ರ ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಎಸಿಸಿಎ ಅತ್ಯಂತ ಪ್ರತಿಷ್ಠಿತ ಮತ್ತು ಬೇಡಿಕೆಯ ವೃತ್ತಿಪರ ಅರ್ಹತೆಗಳಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ವೃತ್ತಿಪರ ಶಿಕ್ಷಣವನ್ನು ನೀಡುವ ಮೂಲಕ ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕಪರಿಶೋಧನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಸಮರ್ಥ ವೃತ್ತಿಪರರನ್ನಾಗಿ ರೂಪಿಸುವಲ್ಲಿ ಆಳ್ವಾಸ್ ಕಾಲೇಜು ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
- ಎಂ. ಮೋಹನ ಆಳ್ವ,
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್ ಹಾಗೂ ಎಸಿಸಿಎ (ಯುಕೆ) ಕೋರ್ಸ್ ಸಂಯೋಜಕ ವಿಘ್ನೇಶ್ ಪ್ರಭು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
