ಸ್ವಚ್ಚ ಮತದಾರ ಪಟ್ಟಿಯ ಸಿದ್ಧತೆಗೆ ನಿಖರ ಮಾಹಿತಿಯ ಅಗತ್ಯವಿದೆ : ಮಂಜುನಾಥ್

Upayuktha
0



ಹಾಸನ : ಸ್ವಚ್ಛ ಮತದಾರ ಪಟ್ಟಿಯ ಸಿದ್ಧತೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ನಾಗರೀಕರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ಬಿ.ಎಲ್.ಓ. ನೀಡುವ ಅರ್ಜಿ ನಮೂನೆಯಲ್ಲಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ ಕೊಡಬಹುದಾಗಿದೆ ಎಂದು ಜಿಜಿಜೆಸಿ ಉಪಪ್ರಾಂಶುಪಾಲ ಮಂಜುನಾಥ್ ಹೇಳಿದರು.


ನಗರದ ಆರ್.ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಎಸ್.ಐ.ಆರ್. ಮಾಹಿತಿಯನ್ನು ನೀಡುತ್ತಾ ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳು ವೃತ್ತ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಎಸ್.ಐ.ಆರ್. ಮಾಹಿತಿಗಳನ್ನು ಕತ್ತರಿಸಿ ಡ್ರಾಯಿಂಗ್ ಶೀಟ್ ಗಳಿಗೆ ಹಚ್ಚಿ ಪ್ರದರ್ಶನ ಮಾಡುವ ಮೂಲಕ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿದ್ಯಾರ್ಥಿಗಳ ಆಸಕ್ತಿ ಬಹಷ್ಟಿದೆ ಎಂಬುದು ಗೊತ್ತಾಗುತ್ತದೆ. ಆ ಮೂಲಕ ತಮ್ಮ ತಂದೆ ತಾಯಿಗಳಿಗೆ ಮಾಹಿತಿಗಳನ್ನು ತಲುಪಿಸಲು ತಿಳಿಸಲಾಗಿದೆ ಎಂದು ಹೇಳಿದರು.


ಶಾಲೆಯ ಹಿರಿಯ ಶಿಕ್ಷಕಿ ಹೆಚ್. ಪಿ. ಮಂಜುಳಾ ಮಾತನಾಡಿ ಎಸ್. ಐ.ಆರ್. ಗೆ ಸಂಬಂಧಿಸಿದಂತೆ ಬಿ.ಎಲ್.ಓ. ರವರು ಮತದಾರರ ಮನೆ ಮನೆಗೆ ಬಂದು ಮತದಾರರ ಅರ್ಜಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಹಾಗೆ ಪಡೆದ ಅರ್ಜಿ ನಮೂನೆಗಳನ್ನು ನಿಖರ ಮಾಹಿತಿಗಳೊಂದಿಗೆ ಭರ್ತಿಮಾಡಿ ಪುನಃ ಬಿ. ಎಲ್. ಓರವರಿಗೆ ಹಿಂತಿರುಗಿಸುವುದೂ ಸಹ ಗುರುತರ ಜವಾಬ್ದಾರಿಯಾಗಿದೆ. ಭರ್ತಿ ಮಾಡಿದ ನಮೂನೆಗಳನ್ನು ಹಿಂತಿರುಗಿಸದೇ ಇದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಅವಕಾಶ ನೀಡದಂತೆ ಪೋಷಕರು ಗಮನ ಹರಿಸಲು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮತ್ತು ನೆರೆಹೊರೆಯ ಸಾರ್ವಜನಿಕರಿಗೆ ತಿಳಿಸುವ ಮೂಲಕ ಅರಿವು ಮೂಡಿಸಬೇಕು ಎಂದರು. 


ಈ ಸಂದರ್ಭದಲ್ಲಿ ಎ ವಿ ಗೀತಾರಾಣಿ, ರುದ್ರೇಶ್, ಎಂ.ಆರ್ ರಂಗಾಮಣಿ, ಮಧು .ಪಿ., ಸತ್ಯನಾರಾಯಣ ಮುರಳಿ, ತೈಬಾಕೌಸರ್, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top