‘ರಾಗಧನ’ ಸಂಸ್ಥೆಯಿಂದ ಜುಲೈ 11ರಂದು 51ನೇ ಸರಣಿ -‘ರಾಗರತ್ನ ಮಾಲಿಕೆ’

Upayuktha
0

 



ಉಡುಪಿ: ಇಲ್ಲಿನ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆ ‘ರಾಗಧನ ಉಡುಪಿ (ರಿ)’ ಇದರ ಆಶ್ರಯದಲ್ಲಿ, ಉಡುಪಿಯ ನಾದಸುಧಾ ಸಂಗೀತ ವಿದ್ಯಾಲಯದ ಸಹಯೋಗದೊಂದಿಗೆ 51ನೆಯ ಸರಣಿ ಸಂಗೀತ ಕಾರ್ಯಕ್ರಮ ‘ರಾಗರತ್ನ ಮಾಲಿಕೆ-51’ ಜುಲೈ 11ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ.


ಉಡುಪಿಯ ಕನ್ನರ್ಪಾಡಿ ಜಯದುರ್ಗಾದೇವಸ್ಥಾನದ ಬಳಿ, ಜೆನ್ನಿಬೆಟ್ಟು ರಸ್ತೆಯಲ್ಲಿರುವ ‘ಸ್ಥವಿಷ್ಠಾ’ ಸಭಾಂಗಣದಲ್ಲಿ ಅಪರಾಹ್ನ 3.00 ಗಂಟೆಯಿಂದ ಈ ಸಂಗೀತ ರಸದೌತಣ ಜರುಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮದ ಆರಂಭದಲ್ಲಿ ಅಪರಾಹ್ನ 3.00ಕ್ಕೆ ಪ್ರಖ್ಯಾತ ಯುವ ಕಲಾವಿದ ಶ್ರೀಕರ ನಾರಾಯಣ ಕಾರ್ಕಳ ಅವರಿಂದ ಕೊಳಲು ವಾದನ ಕಛೇರಿ ನಡೆಯಲಿದೆ. ಇವರಿಗೆ ಪಕ್ಕವಾದ್ಯಗಳಲ್ಲಿ ಧನಶ್ರೀ ಶಬರಾಯ (ವಯೋಲಿನ್) ಹಾಗೂ  ಶೈಲೇಶ್ ಕುಮಾರ್ ಕಟೀಲು (ಮೃದಂಗ) ಸಹಕರಿಸಲಿದ್ದಾರೆ.


ಸಂಜೆ 5.15ಕ್ಕೆ ನಡೆಯುವ ದ್ವಿತೀಯ ಕಛೇರಿಯಲ್ಲಿ ಪ್ರಸಿದ್ಧ ವಾದಕರಾದ ಇಡಪ್ಪಳ್ಳಿ ಅಜಿತ್ ಕುಮಾರ್ ಹಾಗೂ ಕೃಷ್ಣಾ ಅಜಿತ್ ಜೋಡಿಯಿಂದ ದ್ವಂದ್ವ ವಯೊಲಿನ್ ಜುಗಲ್‌ಬಂದಿ ನೆರವೇರಲಿದೆ. ಇವರಿಗೆ ಮೃದಂಗದಲ್ಲಿ ಕೊಚ್ಚಿನ್‌ನ ಬಾಲಕೃಷ್ಣ ಕಾಮತ್ ಸಾಥ್ ನೀಡಲಿದ್ದಾರೆ.


ಕರಾವಳಿಯ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ರಾಗಧನ ಸತತವಾಗಿ ನಡೆಸಿಕೊಂಡು ಬರುತ್ತಿರುವ ಈ ಸಂಗೀತ ಮಾಲಿಕೆಗೆ ಉಡುಪಿಯ ಹಾಗೂ ಸುತ್ತಮುತ್ತಲಿನ ಸಮಸ್ತ ಸಂಗೀತಾಸಕ್ತರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯು ವಿನಂತಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top