ಸಮಾಜಮುಖಿ ಚಿಂತನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ: ಸುಬ್ರಮಣ್ಯ ಕೊರ್ಯಾರ್

Upayuktha
0

 


ಮಂಗಳೂರು: ಸಮಾಜಮುಖಿ ಚಿಂತನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಮಣ್ಯ ಕೊರ್ಯಾರ್  ಅಭಿಪ್ರಾಯ ಪಟ್ಟರು. ಅವರು ಕಾವೂರು ದಕ ಜಿಪ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ನೂರು ಮಕ್ಕಳಿಗೆ ಭರತಾಂಜಲಿ ನೃತ್ಯ ಸಂಸ್ಥೆಯು ಕೊಟ್ಟಿರುವ ಸ್ಟೀಲ್ ಊಟದ ತಟ್ಟೆಯನ್ನು ವಿತರಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಮಕ್ಕಳ ಮನಸ್ಸು ಕನ್ನಡಿಯಂತೆ ಸ್ವಚ್ಛವಾಗಿರುತ್ತದೆ ಅವರು ಯಾವುದೇ ಭೇದ ಭಾವ ಇಲ್ಲದೆ ಪ್ರತಿಯೊಬ್ಬರನ್ನು ಪ್ರೀತಿಸುತ್ತಾರೆ. ಇಂತಹ ಶುದ್ಧವಾದ ಪ್ರೀತಿಯಲ್ಲಿಯೇ ದೇವರ ಅಂಶವಿರುತ್ತದೆ. ಆದ್ದರಿಂದ ಭರತಾಂಜಲಿ ಸಂಸ್ಥೆಯು ನೀಡುತ್ತಿರುವ ಈ ಕೊಡುಗೆ ಒಂದು ದೊಡ್ಡ ದೇವತಾ ಕಾರ್ಯ ಕಲಾ ಜೀವನದಲ್ಲಿ ಇಂತಹ ಸತ್ ಚಿಂತನೆಗಳನ್ನು ಹೊಂದಿರುವ ಶ್ರೀಧರ ಹೊಳ್ಳ, ಪ್ರತಿಮಾ ದಂಪತಿಗಳು ಅಭಿನಂದನಾರ್ಹರು ಎಂದರು.


ಪ್ರಸ್ತಾವಿಕ ಮಾತುಗಳನ್ನಾಡಿದ ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳರ, ಶಾಲೆಗೂ, ಭರತಾಂಜಲಿಗೂ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ಈ ಶಾಲೆ ಸರಕಾರಿ ಶಾಲೆಗಳಲ್ಲೇ ಒಂದು ಮಾದರಿಯಾಗಿದ್ದು ಇಲ್ಲಿನ ಶಿಕ್ಷಕಿಯರು ಅರ್ಪಣಾ ಮನೋಭಾವದಿಂದ ಕರ್ತವ್ಯ ಮಾಡುತ್ತಿರುವುದರಿಂದಲೇ ಇಂದು ಈ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಳವಾಗಿ ಸುಮಾರು 250 ದಾಟಿರುವುದು ಸಂತೋಷವೇ ಸರಿ ಎಂದರು.


ಭರತಾಂಜಲಿಯ ನಿರ್ದೇಶಕಿ ಪ್ರತಿಮಾ ಶ್ರೀಧರ್ ಮಾತನಾಡುತ್ತಾ ಮಕ್ಕಳು ಸಮಾಜದ ಅತ್ಯಮೂಲ್ಯ ಸಂಪತ್ತು ಮತ್ತು ಭವಿಷ್ಯದ ಆಧಾರ ಸ್ಥಂಭ ಅವರ ಆರೋಗ್ಯಕರ ಬೆಳವಣಿಗೆ ಉತ್ತಮವಾಗಿರಬೇಕು. ಮಕ್ಕಳು ಮುಂದೆ ಕಲಿತು ದೊಡ್ಡವರಾಗಿ ಸ್ವಂತ ಕಾಲಿನಲ್ಲಿ ನಿಂತುಕೊಂಡು ಮನೆಗೂ ಸಮಾಜಕ್ಕೂ ಆಸ್ತಿಯಾಗಿ ಇಂತಹ ಸರಕಾರಿ ಶಾಲೆಗಳಿಗೆ ನೆರವು ನೀಡುವಂತಾಗಬೇಕು ಎಂದು ಕಿವಿಮಾತು ಹೇಳಿದರು. 


ಶಾಲಾ ಮುಖ್ಯೋಪಾಧ್ಯಾಯನಿ ಜಯಂತಿ ಸ್ವಾಗತಿಸಿ ಹಿರಿಯ ಶಿಕ್ಷಕಿ ಕೋಕಿಲ ನಿರೋಪಿಸಿ, ಸುನಿತಾ ವಂದಿಸಿದರು. ಭರತಾಂಜಲಿಯ ನೃತ್ಯ ಶಿಕ್ಷಕಿ ಪ್ರಕ್ಷಿಲ ಜೈನ್ ಶಿಕ್ಷಕಿಯರಾದ ಆಶಾ, ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top