ಸುಳ್ಯ: ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿನಾಟಿಕೇರಿ, ಸೇವಾ ಟ್ರಸ್ಟ್, ಶೇಣಿ ಇದರ ಆಶ್ರಯದಲ್ಲಿ ಕೆ ವಿ ಜಿ ಮೆಡಿಕಲ್ ಕಾಲೇಜು ಸುಳ್ಯ, ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಶ್ರೀ ರಾಮ ದೇವಾಲಯ ಚೊಕ್ಕಾಡಿ ಇವರ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಶ್ರೀ ರಾಮ ದೇವಾಲಯದ ದೇಸೀ ಭವನದಲ್ಲಿ ದಿನಾಂಕ 28/06/2026 ರಂದು ನಡೆಯಿತು.
ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ (ರಿ) ಶೇಣಿ ಮತ್ತು
ನಾಟಿಕೇರಿ ಸೇವಾ ಟ್ರಸ್ಟ್ (ರಿ) ಶೇಣಿ ಇದರ ಅಧ್ಯಕ್ಷರಾದ ಶ್ರೀ ಶಿವಸುಬ್ರಹ್ಮಣ್ಯ ಭಟ್ ನಾಟಿಕೇರಿ ವಹಿಸಿದ್ದರು. ಕಾರ್ಯಕ್ರಮವನ್ನು ಸರೋಜಿನಿ ಪ್ರತಿಷ್ಠಾನ ಚೂಂತಾರು ಇದರ ಸಂಪಸ್ಥಾಪಕರು ಮತ್ತು ಖ್ಯಾತ ದಂತ ವೈದ್ಯರಾದ ಶ್ರೀ ಮುರಲೀ ಮೋಹನ ಚೂಂತಾರು ಉದ್ಘಾಟಿಸಿದರು.
ಈಗಿನ ಕಾಲಘಟ್ಟದಲ್ಲಿ ನಮ್ಮ ಜೀವನ ಶೈಲಿ, ಕೆಲಸದ ಒತ್ತಡ, ಆಹಾರ ಪದ್ದತಿ ಮತ್ತು ಪರಿಸರಮಾಲಿನ್ಯದ ಕಾರಣದಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ರೋಗದ ಜೊತೆ ಹೋರಾಡುವ ಬದಲು ರೋಗದ ಜೊತೆಗೆ ಬದುಕಲು ಕಲಿಯಬೇಕು ಎಂದು ಡಾ ಚೂಂತಾರು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಆರೋಗ್ಯ ಶಿಬಿರ ನಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೆ ವಿ ಜಿ ಮೆಡಿಕಲ್ ಕಾಲೇಜಿನ ಇ ಎನ್ ಟಿ ತಜ್ಞರಾದ ಡಾ. ಹರ್ಷ, ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿಯ ಅಧ್ಯಕ್ಷರಾದ ಮಹೇಶ್ ಭಟ್ ಚೂಂತಾರು, ಸಮಿತಿಯ ಸ್ಥಾಪಕಾಧ್ಯಕ್ಷರು ಶ್ರೀ ಧರ್ಮಪಾಲ ಎಸ್, ಭಾರತೀಯ ಅಂಚೆ ಇಲಾಖೆಯ ಅಧಿಕಾರಿ ಶ್ರೀ ಬಾಬು ದಾಸನಕಜೆ ಭಾಗವಹಿಸಿದರು.
ಶ್ರೀ ಧರ್ಮಪಾಲ ಎಸ್ ಶೇಣಿ ಸ್ವಾಗತಿಸಿ, ಶ್ರೀ ದೀಕ್ಷಿತ್ ಪೋನಡ್ಕ ಧನ್ಯವಾದ ಸಲ್ಲಿಸಿದರು. ಶ್ರೀ ವಿವೇಕ್ ರೈ ಶೇಣಿ ಕಾರ್ಯಕ್ರಮ ನಿರ್ವಹಿಸಿದರು.
ಸುಮಾರು 200ಕ್ಕೂ ಹೆಚ್ಚಿನ ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಚೊಕ್ಕಾಡಿ ಶ್ರೀ ರಾಮ ದೇವಾಲಯದ ಶ್ರೀ ರಾಮ ಸೇವಾ ಸಮಿತಿ ಸಂಪೂರ್ಣ ಸಹಕಾರ ನೀಡಿದರು. ಉಪಾಹಾರದ ಮತ್ತು ಭೋಜನದ ವ್ಯವಸ್ಥೆಯನ್ನು ನಾಟಿಕೇರಿ ಸೇವಾ ಟ್ರಸ್ಟ್ ಮಾಡಿದರು.
ಅಡುಗೆಯಲ್ಲಿ ಶ್ರೀ ಕೃಷ್ಣ ಪ್ರಸಾದ್ ಕಾಂಚೋಡು ಸಹಕರಿಸಿದರು


