ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕ - “ಒನ್ ಮಿಲಿಯನ್ ತೂಫಾನ್ ಗೋಲ್” ಅಭಿಯಾನ

Upayuktha
0

 


ಧರ್ಮತ್ತಡ್ಕ: ಕೇರಳ ಸರಕಾರದ ಮಾದಕ ವಸ್ತು ವಿರೋಧಿ ಅಭಿಯಾನ “ತೂಫಾನ್” ಅಂಗವಾಗಿ, ಶಾಲಾ ಲಿಟ್ಲ್ ಕೈಟ್ಸ್ ಹಾಗೂ ಸ್ಪೋರ್ಟ್ ಕ್ಲಬ್‌ನ ನೇತೃತ್ವದಲ್ಲಿ “ಒನ್ ಮಿಲಿಯನ್ ತೂಫಾನ್ ಗೋಲ್” ಎಂಬ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಉದ್ಘಾಟಿಸಿ ಮಾತನಾಡಿ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮುದಾಯದ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.


ಮುಖ್ಯೋಪಾಧ್ಯರಾದ ಶಶಿಕುಮಾರ್ ಪಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಾಯಕವಾಗುತ್ತವೆ ಎಂದು ಹೇಳಿದರು.


ದೈಹಿಕ ಶಿಕ್ಷಕ ಸಂತೋಷ್ ಕುಮಾರ್, ಲಿಟ್ಲ್ ಕೈಟ್ಸ್ ಮಾಸ್ಟರ್ ಅಭಿಲಾಶ್ ಪೆರ್ಲ, ಶ್ರೀಮತಿ ವಿಚೇತ ಬಿ, ಶ್ರೀಮತಿ ತುಳಸಿ ಹಾಗೂ ಶ್ರೀ ಕೇಶವ ಪ್ರಸಾದ್  ಅಭಿಯಾನದಲ್ಲಿ ಭಾಗವಹಿಸಿದರು.


ಕಾರ್ಯಕ್ರಮವನ್ನು ಶ್ರೀ ಪ್ರಶಾಂತ್ ಹೊಳ್ಳ ನಿರೂಪಿಸಿದರು. ಶ್ರೀ ಅಭಿಲಾಶ್ ಪೆರ್ಲ ವಂದನೆ ಸಲ್ಲಿಸಿದರು.


ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು “ತೂಫಾನ್” ಅಭಿಯಾನದ ಸಂದೇಶವನ್ನು ಪ್ರತಿಬಿಂಬಿಸುವಂತೆ ಗೋಲ್ ಹೊಡೆದು ಭಾಗವಹಿಸಿದರು. ಈ ಮೂಲಕ ಮಾದಕ ವಸ್ತು ವಿರೋಧಿ ಜಾಗೃತಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top