ದಾವಣಗೆರೆ: ದಾವಣಗೆರೆಯ ಚನ್ನಗಿರಿ ಮನೆತನ ದಾನ, ಧರ್ಮ ಸಮಾಜ ಸೇವೆ ಯಾವುದೇ ಜಾತಿ, ಮತ, ಭೇದವಿಲ್ಲದೇ ಒಂದು ಶತಮಾನದಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ನಡೆಯುತ್ತಿರುವುದು ಒಂದು ಇತಿಹಾಸ ಪರಂಪರೆ. ದಾವಣಗೆರೆಯ ಸಾರ್ವಜನಿಕರಿಗೆ ಸಮಯ ಪ್ರಜ್ಞೆ ಮೂಡಿಸಲು ಟ್ರಸ್ಟ್ ಪ್ರಾರಂಭವಾಗಿ ಗಡಿಯಾರ ಗೋಪುರ ಸೃಷ್ಠಿ ಮಾಡಿದ್ದು ಶ್ಲಾಘನೀಯ. ನೂರಾಒಂದು ವರ್ಷಕ್ಕೆ ಕಾಲಿಟ್ಟ ಚನ್ನಗಿರಿ ವಿರೂಪಾಕ್ಷಪ್ಪನವರ ಶತಮಾನೋತ್ಸವ ಸಂಭ್ರಮ ಅದ್ಭುತ ಎಂದು ದಾವಣಗೆರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ತಮ್ಮ ಮನದಾಳದ ಮಾತು ಹಂಚಿಕೊಂಡರು.
ದಾವಣಗೆರೆಯ ಜಯದೇವ ವೃತ್ತದ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪನವರ ಹುಟ್ಟು ಹಬ್ಬದ ಶತಮಾನೋತ್ಸವದ ಸಂಭ್ರಮದ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾಡನಾಡಿದರು.
ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟಿಗಳಾದ ಸಿ.ಆರ್. ಸತ್ಯನಾರಾಯಣ, ಸಿ.ಆರ್.ಕೃಷ್ಣಮೂರ್ತಿ, ಆರ್.ಆರ್.ರಮೇಶ್‌ಬಾಬು, ನ್ಯಾಯಾಧೀಶರಾದ ವಸಂತಕುಮಾರ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಭರತ್ ಚನ್ನಗಿರಿ, ನೂತನ ಶಾಸಕರಾದ ಸಮರ್ಥ್ ಶಾಮನೂರು ಮುಂತಾದವರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ನೇಹಾ ಚನ್ನಗಿರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ವಿಜೃಂಭಣೆಯ ಸಮಾರಂಭಕ್ಕೆ ಲಲಿತ ಕಲ್ಲೇಶ್ ಸ್ವಾಗತಿಸಿದರು. ವಿವಿಧ ಸಂಘ, ಸಂಸ್ಥೆಗಳು ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಅಭಿಮಾನದಿಂದ ಸನ್ಮಾನಿಸಿ ಗೌರವಿಸಿದರು. ಸಾಲಿಗ್ರಾಮ ಗಣೇಶ್ ಶೆಣೈಯವರು ನಿರೂಪಿಸಿ, ವಂದಿಸಿದರು.


