ಕುಳಾಯಿ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಚಿತ ಹಣ್ಣಿನ ಸಸಿ ವಿತರಣೆ

Upayuktha
0


ಸುರತ್ಕಲ್: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ) ಕುಳಾಯಿ, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಇವರ ಸಹಯೋಗದಲ್ಲಿ ಉತ್ತಮ ತಳಿಯ ಹಣ್ಣಿನ ಸಸಿಗಳ ವಿತರಣಾ ಕಾರ್ಯಕ್ರಮ ಶುಕ್ರವಾರ ಕುಳಾಯಿಯಲ್ಲಿ ನಡೆಯಿತು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ )ಕುಳಾಯಿ ಅಧ್ಯಕ್ಷ ಕೆ. ವಿಠಲ್ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಪರಿಸರ ಸಂರಕ್ಷಣೆಗಾಗಿ ನಾವೆಲ್ಲ ಕಟಿಬದ್ಧರಾಗಬೇಕು. ಅಭಿವೃದ್ಧಿಯ ಜೊತೆ ಜೊತೆಗೆ ಪರಿಸರ ಸಹ್ಯ ವಾತಾವರಣಕ್ಕೂ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯ" ಎಂದರು.


ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಮಾತನಾಡಿ, "1980ರಿಂದ ಪರಿಸರಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇನೆ. ಸಸಿ ವಿತರಣೆ, ಗುಡ್ಡ ಬೆಟ್ಟಗಳಲ್ಲಿ ಬೀಜದ ಉಂಡೆಗಳನ್ನು ಹಾಕುವ ಮೂಲಕ ಮರಗಳ ಬೆಳೆಸುವಿಕೆ, ರೈತರನ್ನು ಗುರುತಿಸುವಿಕೆ ಮತ್ತಿತರ ಹಲವು ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಾಡುತ್ತಿದ್ದೇನೆ. ನಗರೀಕರಣದ ಭರಾಟೆಯಲ್ಲಿ ನಾವು ಪರಿಸರವನ್ನು ಕಡೆಗಣಿಸಬಾರದು. ಇದು ಮುಂದಿನ ಪೀಳಿಗೆಗೆ ಅಪಾಯಕಾರಿ ಆಗಬಹುದು. ಅಭಿವೃದ್ಧಿಗೆ ಪೂರಕವಾಗಿ ಎರಡು ಪಟ್ಟು ಸಸಿಗಳನ್ನು ನೆಟ್ಟು ಪೋಷಿಸಬೇಕು" ಎಂದು ಕರೆ ನೀಡಿದರು.


ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮ.ನ.ಪಾ. ಸದಸ್ಯ ವರುಣ್ ಚೌಟ, ನಿಕಟಪೂರ್ವ ಮ.ನ.ಪಾ. ಸದಸ್ಯೆ ವೇದಾವತಿ, ಜೀರ್ಣೋದ್ಧಾರ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಳಾಯಿ ಅಧ್ಯಕ್ಷ ಎಂ. ಜೆ. ಶೆಟ್ಟಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಅಶೋಕ ಶೆಟ್ಟಿ ತಡಂಬೈಲ್, ಉದ್ಯಮಿ ನವೀನ್ ಹೊಸಬೆಟ್ಟು, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ಪಿ. ಚಂದ್ರಶೇಖರ್, ಮಹಿಳಾ ಮಂಡಲ ಕುಳಾಯಿ ಅಧ್ಯಕ್ಷೆ ರೇವತಿ ನವೀನ್ ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿದರು. ಯೋಗೀಶ್ ಸನಿಲ್ ಕುಳಾಯಿ ನಿರೂಪಿಸಿದರು. ಶ್ರೀನಿವಾಸ್ ಕುಳಾಯಿ ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top