ಮಕ್ಕಳು ಕಲಿಕೆಯೊಂದಿಗೆ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು: ಎಸ್.ಎಸ್.ರಕರಡ್ಡಿ

Upayuktha
0

ಬೆನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ


ಬಾಗಲಕೋಟೆ/ಬೆನಕಟ್ಟಿ: ಕಂಪ್ಯೂಟರ್, ಮೊಬೈಲ್ ಯುಗದಲ್ಲಿರುವ ಇಂದಿನ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಪರಿಸರದ ಪರಿಕಲ್ಪನೆ ನೀಡಬೇಕು. ಹಸಿರೇ ಉಸಿರಾಗಿಸಿಕೊಂಡು ಪರಿಸರ ಕಾಪಾಡಬೇಕಾಗಿದೆ. ಮಕ್ಕಳು ಕಲಿಕೆಯೊಂದಿಗೆ ಪರಿಸರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ಮುಖ್ಯ ಗುರುಗಳಾದ ಎಸ್ ಎಸ್ ರಕರಡ್ಡಿ ಅವರು ಹೇಳಿದರು.


ಅವರು ಬಾಗಲಕೋಟೆ ಸಮೀಪದ ಬೆನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಆವರನದಲ್ಲಿ ಸಸಿ ನಡೆಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಮುಂದುವರಿದು ಮಾತನಾಡಿ ಮಾನವನ ಜೀವನಕ್ಕೆ ಆಮ್ಲಜನಕ ಬಹಳಷ್ಟು ಅತ್ಯವಶ್ಯಕತೆ ಇದೆ. ಅದಕ್ಕಾಗಿ ನಾವೆಲ್ಲರೂ ಗಿಡ ಮರಗಳನ್ನು ಹೆಚ್ಚು ಹೆಚ್ಚು ನೆಡಬೇಕು, ನೆಟ್ಟ ಮರಗಳನ್ನು ಬೆಳೆಸಿದರೆ ವಾತಾವರಣವನ್ನು ಸದಾ ಉತ್ತಮ ಆಮ್ಲಜನಕವನ್ನು ನೀಡುತ್ತದೆ. ಇದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

 

ಶಾಲೆಯ ಜಗದೀಶ ಚಂದ್ರ ಬೋಸ್ ಇಕೋ ಕ್ಲಬ್ ಮುಖ್ಯಸ್ಥ ರವಿ ಕೆಂಚನ್ನವರ ಮಾತನಾಡಿ ಮಕ್ಕಳಲ್ಲಿ ಪರಿಸರದ ಮಹತ್ವ ಕುರಿತು ಅರಿವು ಮೂಡಿಸುವುದು ಇಂದು ಅತೀ ಅವಶ್ಯವಾಗಿದೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ ಶುದ್ಧವಾದ ಪರಿಸರ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಮಕ್ಕಳು ಈ ನಿಟ್ಟಿನಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ಪೋಷಿಸಬೇಕೆಂದು ಹೇಳಿದರು. 


ಬಾಗಲಕೋಟೆ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಪಾಂಡುರAಗ ಸಣ್ಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ದಿನ ಕೇವಲ ಒಂದೆರಡು ದಿನಗಳ ಕಾರ್ಯವಾಗದೆ, ಅದು ನಿತ್ಯದ ಆಚರಣೆಯಾಗಬೇಕು. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿದೆ, ಇದರಿಂದ ಮನುಕುಲ ಮತ್ತು ಪ್ರಾಣಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಡುತ್ತಾ ಅವುಗಳನ್ನು ಸಂರಕ್ಷಿಸಬೇಕೆಂದು ತಿಳಿಸಿದರು.


ಶಾಲೆಯ ಗುರುಮಾತೆ ಅಂಜಲಿ ಅವರು ಪರಿಸರ ಕುರಿತು ಮಕ್ಕಳಿಗೆ ಪಾಠ ಮಾಡಿದರು. ತೋಟದ ಶಾಲೆಯ ಮುಖ್ಯ ಗುರುಗಳಾದ ಎಸ್.ಎನ್ ಅಮಾತಿಗೌಡರ ಶಾಲೆಯ ಗುರುಮಾತೆ ಎಲ್.ಎ. ಪಾಟೀಲ್, ಎ.ಎಸ್ ಮಂತ್ರಿ, ಆರ್.ಎಸ್ ಅಬ್ಬಿಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಯ ಆವರಣದಲ್ಲಿ ಸಸ್ಯಗಳನ್ನು ನೆಟ್ಟರು. ಜಗನ್ನಾಥ ಪತ್ತಾರ ಸ್ವಾಗತಿಸಿದರು, ಶಿಕ್ಷಕಿ ಆಶಾರಾಣಿ ಮೇಟಿ ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top