ಹಸಿರಿದ್ದರೆ ಮಾತ್ರ ಉಸಿರಿದ್ದೀತು: ಡಾ ಚೂಂತಾರು

Upayuktha
0


ಮಂಗಳೂರು: ನಗರೀಕರಣ, ಕೈಗಾರಿಕೀಕರಣ ಮತ್ತು ಅಭಿವೃದ್ಧಿಯ ಕುಂಟು ನೆಪ ಇಟ್ಟುಕೊಂಡು ನಮ್ಮ ಸುತ್ತಲಿನ  ಮರ ಗಿಡಗಳನ್ನು  ನಾಶ ಮಾಡಿ  ಪರಿಸರವನ್ನು ಹಾಳುಮಾಡುತ್ತಿದ್ದೇವೆ. ನೈಸರ್ಗಿಕ ಕಾಡನ್ನು ಬರಿದು ಮಾಡಿ,  ಕಾಂಕ್ರೀಟ್ ಕಾಡಿನಲ್ಲಿ ಆಮ್ಲಜನಕ  ಸಿಲಿಂಡರ್ ಮನೆಯಲ್ಲಿಟ್ಟುಕೊಂಡು ಉಸಿರಾಡಲು ಪಡಬಾರದ ಪಾಡು ಮನುಷ್ಯ ಇಂದು  ಅನುಭವಿಸುತ್ತಿದ್ದಾನೆ. ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ  ಮನುಷ್ಯ ಪ್ರತಿಯೊಂದು ಉಸಿರು ತೆಗೆಯಲೂ ಹರ ಸಾಹಸಟ್ಟಿದ್ದಾನೆ. ಇನ್ನಾದರೂ  ನಾವು ಎಚ್ಚೆತ್ತುಕೊಂಡು ನಮ್ಮ ಮನೆ ಸುತ್ತಮುತ್ತ ಹಸಿರು ಮರಗಿಡಗಳನ್ನು ಬೆಳೆಸಿ ಶುದ್ಧ ಆಮ್ಲಜನಕಯುಕ್ತ ಗಾಳಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಆಮ್ಲಜನಕ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದೀತು ಎಂದು ಖ್ಯಾತ ಪರಿಸರವಾದಿ ಮತ್ತು ಸುರಕ್ಷಾ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.


ವಿಶ್ವ ಪರಿಸರ ದಿನದ ಅಂಗವಾಗಿ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರದಂದು ವನಮಹೋತ್ಸವ ಜರುಗಿತು. ನೇರಳೆ, ಮಾವು, ಹಲಸು. ಬಾದಾಮಿ ಮುಂತಾದ ಹತ್ತು ಹಣ್ಣಿನ ಗಿಡಗಳನ್ನು ಈ ಸಂದರ್ಭದಲ್ಲಿ   ರೋಗಿಗಳಿಗೆ ಉಚಿತವಾಗಿ ಹಂಚಲಾಯಿತು. ಕಳೆದ ಹತ್ತು ವರುಷಗಳಿಂದ  ಡಾ|| ಮುರಲೀಮೋಹನ್ ರವರ ನೇತೃತ್ವದಲ್ಲಿ  ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣೆ ಕಾರ್ಯಕ್ರಮ ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ನಡೆಯುತ್ತಿದೆ.


ಈ ಸಂದರ್ಭದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ ದಂತ ಪರಿಚಾರಿಕೆಯರಾದ ರಮ್ಯಾ, ಚೈತ್ರ, ಸುಷ್ಮಿತಾ ಮತ್ತು ರಶ್ಮಿ ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top