ಉಜಿರೆ: ಎಸ್.ಡಿ.ಎಂ. ಪ.ಪೂ. ಕಾಲೇಜಿಗೆ ಎನ್.ಎಸ್.ಎಸ್ ವಿಭಾಗಾಧಿಕಾರಿಗಳ ಭೇಟಿ

Upayuktha
0


   ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗಾಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ಭೇಟಿ ನೀಡಿದರು. ಈ ಸಂದರ್ಭ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಶಾಲು ಹೊದಿಸಿ ಸನ್ಮಾನಿಸಿ  ಗೌರವಿಸಲಾಯಿತು. 


ಸನ್ಮಾನ ಸ್ವೀಕರಿಸಿ ಮಾತನಾಡಿದ ಸವಿತಾ ಎರ್ಮಾಳ್  ಎಸ್ ಡಿ ಎಂ  ಕಾಲೇಜಿನ ಎನ್ ಎಸ್  ಎಸ್ ಘಟಕ ಹಲವು ಅತ್ಯುತ್ತಮ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದೆ. ಸ್ವಯಂ ಸೇವಕರು ಎನ್ ಎಸ್ ಎಸ್ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡಾಗ ಇದರ  ಪ್ರಯೋಜನವನ್ನು ಪಡೆದು ಅತ್ಯುತ್ತಮ ಸ್ವಯಂ ಸೇವಕರಾಗಲು  ಸಾಧ್ಯ ಎಂದು ಹೇಳಿದರು. 

   

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ ಮಾತನಾಡಿ ನಮ್ಮ ಕಾಲೇಜಿನ ಎನ್ ಎಸ್ ಘಟಕ ಅತ್ಯುತ್ತಮ ಕಾರ್ಯಕ್ರಮ ಸಂಘಟಿಸುತಿದೆ. ಬಹುಮುಖ ವ್ಯಕ್ತಿತ್ವದ ಮತ್ತು ಕ್ರಿಯಾಶೀಲ ವಿಭಾಗಾಧಿಕಾರಿಗಳ ಪ್ರೋತ್ಸಾಹ ಯೋಜನಾಧಿಕಾರಿಗಳಿಗೆ ಸ್ಫೂರ್ತಿ ಎಂದು  ಹೇಳಿದರು.

     

ಕೆಳದಿ ಚೆನ್ನಮ್ಮ ರಾಜ್ಯ ಶೌರ್ಯ ಪ್ರಶಸ್ತಿ ಪಡೆದಿರುವ ನಮನ ಬಿ. ಕೆ. ರವರು ಸಿ ಪಿ ಆರ್ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

       

ವೇದಿಕೆಯಲ್ಲಿ ರಂಗೋಲಿ ತರಬೇತುದಾರ ಮಹೇಶ್ ರಾವ್, ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಉಪಸ್ಥಿತರಿದ್ದರು.

     

ಯೋಜನಾಧಿಕಾರಿ ವಿಶ್ವನಾಥ್ ಎಸ್ ಅತಿಥಿಗಳ ಪರಿಚಯಿಸಿದರು. ಸ್ವಯಂ  ಸೇವಕಿ ಪಾವನಿ ನಿರೂಪಿಸಿ ಎನ್ ಎಸ್ ಎಸ್ ನಿಕಟಪೂರ್ವ ಯೋಜನಾಧಿಕಾರಿ ಪ್ರಸನ್ನ ಕುಮಾರ್ ಐತಾಳ್ ಸ್ವಾಗತಿಸಿ, ಅನ್ವಿತಾ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top