ಜೀವನದ ಪಯಣದಲ್ಲಿ ಅಪ್ಪನ ಸ್ಥಾನ

Upayuktha
0

ಲೋ, ಹೇಗಿದ್ದೀರಾ?

ಜೀವನದಲ್ಲಿ ಅಮ್ಮನ ಸ್ಥಾನ  ಹೇಗೆ ಮುಖ್ಯವೋ ಹಾಗೆ ಅಪ್ಪನ ಸ್ಥಾನವೋ ಅಷ್ಟೇ ಮುಖ್ಯ.


ನಮ್ಮ ಜೀವನದಲ್ಲಿ ಹೆತ್ತು ಹೊತ್ತ  ಅಮ್ಮ ಎಲ್ಲರ ಕಣ್ಣಿಗೆ ಕಾಣುತ್ತಾಳೆ, ಆದರೆ  ಹರಿದ ಅಂಗಿ ಹಾಕಿ ಕೊಂಡು  ದುಡ್ಡು ಕೂಡಿಸಲು ಓಡಾಡುವ ಅಪ್ಪ  ಯಾರಿಗೂ  ಕಾಣಿಸುವುದಿಲ್ಲ.


ಅಮ್ಮ ಮಕ್ಕಳಿಗೆ ತುಂಬ ಆಪ್ತಳು.

ಅಪ್ಪ ಎಂದರೆ ನೆನಪಾಗುವುದು ಸಿಟ್ಟಿನ ಪ್ರತಿ


ರೂಪ, ಆದರೆ  ಒಳಗಿಂದೊಳಗೆ ಮಕ್ಕಳ ಅಭಿವೃದ್ಧಿ ಕಂಡು ಸಂತೋಷ ಪಟ್ಟು ತನ್ನ ಸ್ನೇಹಿತರ ಮುಂದೆ ಹೇಳಿಕೊಂಡು ತಿರುಗುವ ಅಪ್ಪ ತುಂಬ ಸಾರಿ off the screen ಆಗಿ ಬಿಡುತ್ತಾನೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಅವನ ತಂದೆಯ ನೋವಿನ  ಯೌವನ ಇರುತ್ತದೆ.


ಹರಿದ ಅಂಗಿ ಹಾಕಿಕೊಂಡು ಮಕ್ಕಳಿಗೆ ಹಬ್ಬದ ಬಟ್ಟೆ ಕೊಡಿಸುವ ಅಪ್ಪ  ತನಗೂ ಬಟ್ಟೆಯ  ಅವಶ್ಯಕತೆ ಇದೆ  ಎಂಬುದನ್ನು ಮರೆತಿರುತ್ತಾನೆ.

ತನ್ನ ಮಕ್ಕಳು  ಏನು ಮಾಡುತ್ತಿದ್ದಾರೆ ಅನ್ನುವುದನ್ನು ಮಕ್ಕಳಿಗೆ ನೇರವಾಗಿ  ಕೇಳುವುದಕ್ಕೆ ಧೈರ್ಯ ಇಲ್ಲದೆ ಹೆಂಡತಿಯಿಂದ ಕೇಳಿ ಮಕ್ಕಳ ಬಗ್ಗೆ ಸಂತಸ ಪಡುವ ಅಪ್ಪ  ನಿಷ್ಕಲ್ಮಶ ಪ್ರೀತಿಯ ಪ್ರತಿ ರೂಪ.


ನನ್ನ ತಂದೆಯ  ಜೊತೆಗೆ ಉಳಿದ ಎಲ್ಲ ಅಪ್ಪಂದರಿಗೂ   Father's day  ಶುಭಾಶಯಗಳು.

ಪಿತೃ ದೇವೋ ಭವ.

 - ಗಾಯತ್ರಿ ಸುಂಕದ, ಬದಾಮಿ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top