ಸುರತ್ಕಲ್ ರೋಟರಿ ಕ್ಲಬ್‌ನ 2025-26 ನೇ ಸಾಲಿನ ಅಂತಿಮ ಸಾಪ್ತಾಹಿಕ ಸಭೆ

Upayuktha
0

ಸುರತ್ಕಲ್‌: ಸುರತ್ಕಲ್ ರೋಟರಿ ಕ್ಲಬ್‌ನ 2025-26 ನೇ ಸಾಲಿನ ಅಂತಿಮ ಸಾಪ್ತಾಹಿಕ ಸಭೆ ಮತ್ತು ವಂದನಾ ಸಭೆಯು ವಿರಾಟ್ ಸಭಾ ಭವನದಲ್ಲಿ ಕ್ಲಬ್‌ನ ಅಧ್ಯಕ್ಷ ರೊ. ರಾಮಚಂದ್ರ ಬಿ. ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಜಿಲ್ಲಾ ರೋಟರಿ 3181 ರಿಂದ ಗೋಲ್ಡ್ ನ್ ಪ್ಲಸ್ ಮತ್ತು Adaptability Excellence ಪ್ರಶಸ್ತಿ, ಉತ್ತಮ ಗೃಹ ಪತ್ರಿಕೆ ಪ್ರಶಸ್ತಿ ಪಡೆದ ಕ್ಲಬ್ ನ ಸಾಧನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾ ಯಿತು. ವಿಶಿಷ್ಟ ಕಾರ್ಯಗಳಿಗಾಗಿ ಸಾಧನಾ ಪ್ರಶಸ್ತಿ ಪಡೆದ ರೊ. ಡಾ. ಅರವಿಂದ ಭಟ್, ರೊ. ಸಂದೀಪ್ ರಾವ್ ಇಡ್ಯಾ,ರೊ.ಸತೀಶ್ ಸದಾನಂದ್ ಅವರನ್ನು ಅಭಿನಂದಿಸಲಾಯಿತು.


ಸ್ಥಾಪಕ ಸದಸ್ಯ ಸತೀಶ್ ರಾವ್ ಇಡ್ಯಾ, ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ. ಪಿ, ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್. ಪಿ, ನಿರ್ದೇಶಕರಾದ ಕೃಷ್ಣಮೂರ್ತಿ, ಯಶೋಮತಿ ರವೀಂದ್ರನಾಥ್, ಸತೀಶ್ ಸದಾನಂದ್ ಈ ವರ್ಷದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.

     

ಸಹಾಯಕ ಗವರ್ನರ್ ನಿಯೋಜಿತ ರೊ. ಸಂದೀಪ್ ರಾವ್ ಇಡ್ಯಾ ಪ್ರಸ್ತುತ ವರ್ಷದ ಕಾರ್ಯ ಯೋಜನೆಗಳನ್ನು ತಿಳಿಸಿದರು. ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ ವಿದ್ಯಾರ್ಥಿನಿಯೊಬ್ಬಳಿಗೆ ವಿದ್ಯಾರ್ಥಿ ವೇತನ ನೀಡಿದರು. ನಿಯೋಜಿತ ಅಧ್ಯಕ್ಷ ರೊ. ಶ್ರೀಧರ್ ಟಿ. ಎನ್. ಯೋಜನೆಗಳ ವಿವರಗಳನ್ನಿತ್ತರು.


ಅಧ್ಯಕ್ಷ ರೊ. ರಾಮಚಂದ್ರ ಬಿ. ಕುಂದರ್ ರೋಟರಿ ವರ್ಷದ ಚಟುವಟಿಕೆಗಳ ಅನುಭವಗಳನ್ನು ತಿಳಿಸಿದರು. ಕಾರ್ಯದರ್ಶಿ ರಾಮ ಮೋಹನ್ ವೈ. ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top