ಗೀತಾ ಮಂದಿರದಲ್ಲಿ ಶ್ರೀ ಪುರುಷೋತ್ತಮ ಯೋಗ- 33 ಬಾರಿ ಸಾಮೂಹಿಕ ಪಾರಾಯಣ

Upayuktha
0


ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಅಧಿಕ ಮಾಸದ ಅಧಿಕ ಫಲ ಸಂಪಾದನೆ ಮತ್ತು ಲೋಕಕಲ್ಯಾಣಕ್ಕಾಗಿ ಶ್ರೀಮದ್ಭಗವದ್ಗೀತೆಯ 15ನೇ ಅಧ್ಯಾಯವನ್ನು 33 ಬಾರಿ ಸಾಮೂಹಿಕವಾಗಿ ಪಾರಾಯಣ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಗೃಹದಲ್ಲಿ ನೆರವೇರಿತು.


ಇದರ ಉದ್ಘಾಟನೆಯನ್ನು ವಿದ್ವಾನ್ ಶ್ರೀ ವೇದವ್ಯಾಸ ಐತಾಳ್  ನೆರವೇರಿಸಿದರು. ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ನಗರಸಭಾ ಪೂರ್ವ ಸದಸ್ಯ ನರಸಿಂಹ ನಾಯ್ಕ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮೂಡಬಿದಿರೆಯ ದೂರದರ್ಶನ ಕಲಾವಿದೆ ಆಯನ ವಿ. ರಮಣ್ ಅವರಿಂದ ಶಾಸ್ತ್ರೀಯ ನೃತ್ಯಾಭಿವ್ಯಕ್ತಿ ಮತ್ತು ಕಿರು ನಿರೂಪಣಾ ವ್ಯಾಖ್ಯಾನ ನೆರವೇರಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top