ವಿಶೇಷ ಓಣಂ ರೈಲು: ಶೇ. 33 ಸಬ್ಸಿಡಿ

Upayuktha
0

 


ಮಂಗಳೂರು: ಭಾರತೀಯ ರೈಲ್ವೆಯ ಭಾರತ ಗೌರವ್ ರೈಲು ಯೋಜನೆಯಡಿ ಸೌತ್ ಸ್ಟಾರ್ ರೈಲ್ ಹಾಗೂ ಟೂರ್ ಟೈಮ್ಸ್, ವಿಶೇಷ ಓಣಂ ರಜಾ ರೈಲನ್ನು ಘೋಷಿಸಿವೆ. ಈ 11 ದಿನಗಳ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಪ್ಯಾಕೇಜ್ ಪ್ರವಾಸವು ಆಗಸ್ಟ್ 20 ರಂದು ಪ್ರಾರಂಭವಾಗಲಿದ್ದು, ಬುಕ್ಕಿಂಗ್ ಆರಂಭವಾಗಿದೆ. ಮೊಬೈಲ್ 7305858585 ಸಂಪರ್ಕಿಸುವ ಮೂಲಕ ಅಥವಾ www.tourtimes.in ಗೆ ಭೇಟಿ ನೀಡುವ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.


11 ದಿನಗಳ ಅವಧಿಯಲ್ಲಿ, ಈ ಪ್ರವಾಸ ಯೋಜನೆ ದೆಹಲಿ, ಆಗ್ರಾ, ಜೈಪುರ, ಅಮೃತಸರ, ಸ್ಟ್ಯಾಚ್ಯೂ ಆಫ್ ಯುನಿಟಿ ಮತ್ತು ಗೋವಾದ ಅತ್ಯಂತ ಪ್ರಮುಖ ಆಕರ್ಷಣೆಗಳಿಗೆ ಭೇಟಿ ನೀಡುತ್ತದೆ. 


ಈ ವಿಶೇಷ ಪ್ರವಾಸಿ ರೈಲು ವಿವಿಧ ಸೌಲಭ್ಯಗಳಿಂದ ಕೂಡಿದ್ದು, ರೈಲಿನೊಳಗಿನ ಪ್ರಕಟಣೆಗಳಿಗಾಗಿ ಪಿಎ ಸಿಸ್ಟಂ, ಕೋಚ್ ಭದ್ರತೆಗೆ ವಿಶೇಷ ಸಿಬ್ಬಂದಿ ಮತ್ತು ಟೂರ್ ಮ್ಯಾನೇಜರ್‍ಗಳು, ಪ್ರಯಾಣ ವಿಮೆ, ಹೋಟೆಲ್‍ಗಳು, ಸ್ಥಳದರ್ಶನ ಮತ್ತು ವರ್ಗಾವಣೆ ಸೌಲಭ್ಯಗಳು, ಹಾಗು ರೈಲಿನೊಳಗೂ ಮತ್ತು ಹೊರಗೂ ಅನಿಯಮಿತ ಊಟ ಸೇರಿದೆ. ಪ್ರವಾಸಿಗರು ಎಲ್‍ಟಿಸಿ/ಎಲ್‍ಎಫ್‍ಸಿ ಸೌಲಭ್ಯವನ್ನೂ ಪಡೆಯಬಹುದು.


ಈ ಪ್ಯಾಕೇಜ್‍ಗೆ ಭಾರತೀಯ ರೈಲ್ವೆಯಿಂದ 33% ಸಹಾಯಧನ ಲಭ್ಯವಿದೆ. ಸೌತ್ ಸ್ಟಾರ್ ರೈಲ್- ಟೂರ್ ಟೈಮ್ಸ್ ಒಟ್ಟು 53 ಪ್ರಯಾಣಗಳನ್ನು ಯಶಸ್ವಿಯಾಗಿ ನಡೆಸಿದ್ದು, ಸುಮಾರು 3,02,850 ಕಿಲೋಮೀಟರ್‍ಗಳಷ್ಟು ದೂರವನ್ನು ಕ್ರಮಿಸಿ, ಒಟ್ಟು 25,070 ಯಾತ್ರಿಕರು ಮತ್ತು ಪ್ರವಾಸಿಗರು ಈ ಯೋಜನೆಯಡಿ ಸುಖಮಯ ಪ್ರವಾಸ ಪೂರೈಸಿದ್ದಾರೆ. ಸ್ಲೀಪರ್ ಕ್ಲಾಸ್ (ರೂ.28,750) ತೃತೀಯ ಎಸಿ (39,950) ದ್ವಿತೀಯ ಎಸಿ (49,950) ಹಾಗೂ ಪ್ರಥಮ ಎಸಿ (58,950) ಸೌಲಭ್ಯ ಇರುತ್ತದೆ ಎಂದು ಪ್ರಕಟಣೆ ಹೇಳಿದೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top