ಹಿಮಾಲಯ ಬೇಬಿಕೇರ್ ನಿಂದ ಶಿಶುಗಳ ಚರ್ಮದ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಭಿಯಾನ

Upayuktha
0

ಶಿಶುಗಳ ಅಗತ್ಯಕ್ಕೆ ತಕ್ಕ ಉತ್ಪನ್ನಗಳನ್ನು ಒದಗಿಸುವುದೇ ನಮ್ಮ ಗುರಿ: ಚಕ್ರವರ್ತಿ ಎನ್. ವಿ.


ಮಂಗಳೂರು: ಭಾರತದ ಅತ್ಯಂತ ಪ್ರತಿಷ್ಠಿತ ಮಗು ಆರೈಕೆ ಬ್ರ್ಯಾಂಡ್ ಆದ ಹಿಮಾಲಯ ಬೇಬಿಕೇರ್ ಸಂಸ್ಥೆಯು ನವಜಾತ ಶಿಶುಗಳ ಸೂಕ್ಷ್ಮ ಚರ್ಮ ನಿರ್ವಹಿಸಲು ಹಾಗೂ ಕಾಲಕ್ಕೆ ತಕ್ಕ ಹವಾಮಾನ ವೈಪರೀತ್ಯ ಎದುರಿಸುವ ನಿಟ್ಟಿನಲ್ಲಿ ಪೋಷಕರಲ್ಲಿ ಜಾಗೃತಿ ಮೂಡಿಸುವ ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. 


ಈ ಅಭಿಯಾನದ ಮೂಲಕ ತನ್ನ ಜನಪ್ರಿಯ ಉತ್ಪನ್ನಗಳಾದ ಹಿಮಾಲಯ ಜೆಂಟಲ್ ಬೇಬಿ ಸೋಪ್ ಹಾಗೂ ರಿಫ್ರೆಷಿಂಗ್ ಬೇಬಿ ಸೋಪ್ ನ ಪ್ರಾಮುಖ್ಯತೆಯನ್ನು ಸಾರುತ್ತಿದೆ. ಈ ಅಭಿಯಾನದ ಭಾಗವಾಗಿ ಟಿವಿ ಜಾಹೀರಾತು ಬಿಡುಗಡೆಯಾಗಿದೆ.


ಈ ಕುರಿತು ಹಿಮಾಲಯ ವೆಲ್‌ನೆಸ್ ಕಂಪನಿಯ ಬೇಬಿಕೇರ್ ವಿಭಾಗದ ನಿರ್ದೇಶಕರಾದ ಚಕ್ರವರ್ತಿ ಎನ್. ವಿ. ಅವರು, “ಹಿಮಾಲಯ ಬೇಬಿಕೇರ್‌ ಸಂಸ್ಥೆಯು ನವಜಾತ ಶಿಶುವಿನ ಚರ್ಮದ ವಿಶಿಷ್ಟ ಅಗತ್ಯಗಳ ಆಳವಾದ ತಿಳುವಳಿಕೆಯನ್ನು ಆಧರಿಸಿ ಪ್ರತಿ ಹೆಜ್ಜೆಯನ್ನು ಇಡುತ್ತದೆ. ಪೋಷಕರು ಇಂದು ಕೇವಲ ಸುರಕ್ಷಿತ ಉತ್ಪನ್ನಗಳಿಗಿಂತ ಹೆಚ್ಚಾಗಿ, ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶೇಷ ವಿನ್ಯಾಸದ ಉತ್ಪನ್ನಗಳನ್ನು ಹುಡುಕುತ್ತಿದ್ದಾರೆ. ನವಜಾತ ಶಿಶುವಿನ ಸೂಕ್ಷ್ಮ ಅಗತ್ಯಗಳು ಅಥವಾ ಭಾರತೀಯ ಬೇಸಿಗೆ ಎದುರಿಸುವ ಸವಾಲು ಎದುರಿಸಲು ಪೋಷಕರು ಸಂಪೂರ್ಣ ವಿಶ್ವಾಸದಿಂದ ಅವಲಂಬಿಸಬಹುದಾದ ನಂಬಿಕಸ್ಥ ಪರಿಹಾರಗಳನ್ನು ನೀಡುವುದೇ ನಮ್ಮ ಗುರಿಯಾಗಿದೆ” ಎಂದು ಹೇಳಿದರು.


ಹೊಸತಾಗಿ ಬಿಡುಗಡೆಯಾಗಿರುವ ಜಾಹೀರಾತು ಮಗುವಿನ ಸೂಕ್ಷ್ಮ ಚರ್ಮದ ಕುರಿತು ಹಿಮಾಲಯ ಸಂಸ್ಥೆ ಹೊಂದಿರುವ ಆಳವಾದ ಸಂಶೋಧನಾ ಜ್ಞಾನದ ಆಧಾರದ ಮೇಲೆ ಸಿದ್ಧಗೊಂಡಿದೆ. ಇಂದಿನ ಆಧುನಿಕ ಪೋಷಕರು ಕೇವಲ ಸುರಕ್ಷಿತ ಉತ್ಪನ್ನಗಳಿಗಷ್ಟೇ ತೃಪ್ತರಾಗುತ್ತಿಲ್ಲ. ಬದಲಿಗೆ, ಹವಾಮಾನ ಬದಲಾವಣೆಗಳಿಗೆ ತಕ್ಕಂತೆ ದಿನನಿತ್ಯ ಆರೈಕೆ ಮಾಡಬಲ್ಲ ವಿಶೇಷ ಸೂತ್ರೀಕರಣದ ಪರಿಹಾರಗಳನ್ನು ಬಯಸುತ್ತಿದ್ದಾರೆ ಎಂಬುದನ್ನು ಈ ಅಭಿಯಾನ ಬಿಂಬಿಸುತ್ತದೆ.


ಭಾರತದ ನಂ.1 ಬೇಬಿ ಸೋಪ್ ಆಗಿರುವ ಹಿಮಾಲಯ ಜೆಂಟಲ್ ಬೇಬಿ ಸೋಪ್ ಕುರಿತ ಜಾಹೀರಾತು ಚಿತ್ರದಲ್ಲಿ ಒಬ್ಬ ತಾಯಿ, “ಮಗುವಿನ ಚರ್ಮಕ್ಕೆ ಸೂಕ್ತ ಸೋಪ್ ಆಯ್ಕೆ ಹೇಗೆ?” ಎಂದು ಆಲೋಚಿಸುತ್ತಿರುತ್ತಾಳೆ. ಆಗ ತಂದೆ ಬಂದು ಹಿಮಾಲಯ ಜೆಂಟಲ್ ಬೇಬಿ ಸೋಪ್ ತಂದು ಕೊಡುವ ಮೂಲಕ ಆತಂಕವನ್ನು ಪರಿಹರಿಸುತ್ತಾರೆ. 


ಈ ಸೋಪ್ ಬಾದಾಮಿ ಮತ್ತು ಆಲಿವ್‌ನ 100% ನೈಸರ್ಗಿಕ ತೈಲಗಳಿಂದ ತಯಾರಿಸಿದ ವಿಶಿಷ್ಟ ಫೈಟೊ ಆಯಿಲ್-ಕಾಂಪ್ಲೆಕ್ಸ್ ಹೊಂದಿದ್ದು, ಶೇ. 97ರಷ್ಟು ನೈಸರ್ಗಿಕ ಮೂಲದ ಪದಾರ್ಥಗಳನ್ನು ಒಳಗೊಂಡಿದೆ. ಕಠಿಣ ರಾಸಾಯನಿಕ ಮುಕ್ತವಾಗಿರುವುದರಿಂದ ಇದು ಸ್ನಾನದ ನಂತರ ಚರ್ಮ ಒಣಗದಂತೆ ತಡೆದು, ದೀರ್ಘಕಾಲದ ಮೃದುತ್ವ ನೀಡುತ್ತದೆ.


ಇನ್ನೊಂದು ರಿಫ್ರೆಷಿಂಗ್ ಸೋಪ್ ಕುರಿತ ಜಾಹೀರಾತು ಚಿತ್ರವಾಗಿದ್ದು, ಈ ಸೋಪನ್ನು ಬೇಸಿಗೆಯ ಶಾಖ, ಬೆವರು ಮತ್ತು ತುರಿಕೆ ಸಮಸ್ಯೆಯಿಂದ ಮಗುವನ್ನು ದೂರವಿಡಲು ನೆರವಾಗಲು ಸಿದ್ಧಪಡಿಸಲಾಗಿದೆ. ಈ ಜಾಹೀರಾತು ಅತ್ಯಂತ ಹಾಸ್ಯಭರಿತ ಹಾಗೂ ಪ್ರೀತಿಯ ನಿರೂಪಣೆ ಹೊಂದಿದೆ. ಇದರಲ್ಲಿ ಬಳಸಿರುವ ಕಲ್ಲಂಗಡಿ, ಲಾವಂಚ ಹಾಗೂ ಬೇವನ್ನೊಳಗೊಂಡ ಆಕ್ವಾಫ್ರೆಶ್ ಕಾಂಪ್ಲೆಕ್ಸ್, ಬೆವರಿನಿಂದಾಗುವ ಚರ್ಮದ ಕಿರಿಕಿರಿಯನ್ನು ತಂಪಾಗಿಸುತ್ತದೆ. 


ಈ ಎರಡೂ ಹೊಸ ಜಾಹೀರಾತು ಚಿತ್ರಗಳನ್ನು ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಭಾರತದಾದ್ಯಂತ ಇರುವ ಯುವ ಪೋಷಕರನ್ನು ತಲುಪಲು ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top