ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ: ಸಂಗೀತ ರಸಮಂಜರಿ ಕಾರ್ಯಕ್ರಮ

Upayuktha
0


ಮಂಜೇಶ್ವರ:
 
ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆಯು 2009 ರಿಂದ ಮಾನಸಿಕ ಅಸ್ವಸ್ಥರ ರಕ್ಷಣೆ, ಶುಶ್ರೂಷೆ, ಔಷೋಧೋಪಚಾರ, ಆರೋಗ್ಯ, ಪುನರ್ವಸತಿ ಒದಗಿಸುವ ನಿರಂತರ ಸೇವೆ ನೀಡುತ್ತಾ 17 ವರುಷಗಳಲ್ಲಿ  1750ಕ್ಕೂ ಮಿಗಿಲಾಗಿ ರಕ್ಷಿಸಲ್ಪಟ್ಟ ನಿವಾಸಿಗಳನ್ನು ಗುಣಪಡಿಸಿ ಅವರಿಗೆ ತಮ್ಮ ಕುಟುಂಬಗಳಲ್ಲಿ ಪುನರ್ಮಿಲನಗೊಳಿಸಿ,  ಪುನರ್ವಸತಿ ಕಲ್ಪಿಸಿ, ಜನಮೆಚ್ಚುಗೆ ಪಡೆದ ಮಂಗಳೂರು- ಕಾಸರಗೋಡು ಜಿಲ್ಲೆಗಳ ಪರಿಸರದಲ್ಲಿ ಜನಪ್ರಿಯ ಸಂಸ್ಥೆಯಾಗಿದೆ.


ಈ ಸಂಸ್ಥೆಯು ಹತ್ತು ಹಲವು ಯೋಜನೆಗಳ ಅನುಷ್ಠಾನ, ಪ್ರಸ್ತುತ ದಾಖಲಿರುವ 375 ನಿವಾಸಿಗಳ ಅಗತ್ಯತೆಗಳು, ಮನೋರೋಗ ಚಿಕಿತ್ಸೆ ಡಿ ಅಡಿಕ್ಷನ್ ಹಾಗೂ ವಿಶೇಷ ಅಗತ್ಯವುಳ್ಳ ಕುಟುಂಬ ಸದಸ್ಯರ ಶಿಕ್ಷಣ ಹಾಗೂ ಇತರ ಯೋಜನೆಗಳ ಸಹಾಯಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮ ಒಂದನ್ನು ಇದೇ ಭಾನುವಾರ ಜೂ. 21ರಂದು ಮಂಗಳೂರಿನ ಟಾನ್ ಹಾಲ್ ನಲ್ಲಿ ಸಂಜೆ 6.00 ಘಂಟೆಗೆ ಆಯೋಜಿಸಲಾಗಿದೆ.


ಪ್ರಖ್ಯಾತ ಸಂಗೀತಗಾರರಾಗಿದ್ದು ಖ್ಯಾತ ಉದ್ಯಮಿಯೂ ಆಗಿರುವ ಕೆವಿನ್ ಮಿಸ್ಕಿತ್, ಈ ಕಾರ್ಯಕ್ರಮದ ರೂವಾರಿ. ಇವರು ಖ್ಯಾತ ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದು, ಆರು ಸಂಗೀತ ಆಲ್ಬಮ್‌ಗಳನ್ನು ನಿರ್ಮಿಸಿದ್ದಾರೆ ಮತ್ತು ವಿಶ್ವದಾದ್ಯಂತ 53ಕ್ಕೂ ಹೆಚ್ಚು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಒಮಾನ್, ಬಹ್ರೈನ್ ಸೇರಿದಂತೆ ಅನೇಕ ದೇಶಗಳ ಪ್ರೇಕ್ಷಕರ ಮನಗೆದ್ದಿದ್ದಾರೆ. ಏಳು ವರ್ಷಗಳ ದೀರ್ಘ ವಿರಾಮದ ಬಳಿಕ, ಅವರು ಅದ್ಧೂರಿ ಪುನರಾಗಮನ ಸಂಗೀತ ರಸಮಂಜರಿಯೊಂದಿಗೆ ಮತ್ತೆ ವೇದಿಕೆಗೆ ಮರಳುತ್ತಿದ್ದಾರೆ! ಈ ಮನೋರಂಜನ ಕಾರ್ಯಕ್ರಮದ ಎಲ್ಲಾ ಧನಸಹಾಯ ಒಟ್ಟುಗೊಡಿಸುವಿಕೆ ಸ್ನೇಹಾಲಯದ ಮಾನವೀಯ ಸೇವಾ ಕಾರ್ಯಗಳಿಗೆ ಒಪ್ಪಿಸಲಾಗುವುದು.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top