ಸಂತ ಫಿಲೋಮಿನಾ ಕಾಲೇಜು: ಆಡಳಿತ ಸಿಬ್ಬಂದಿಗೆ 'ಕಂಪ್ಯೂಟರೀಕೃತ ಅಕೌಂಟಿಂಗ್ ತರಬೇತಿ ಕಾರ್ಯಕ್ರಮ'

Upayuktha
0


ಪುತ್ತೂರು: ಸಂತ ಫಿಲೋಮಿನಾ  (ಸ್ವಾಯತ್ತ)ಕಾಲೇಜಿನಲ್ಲಿ ತನ್ನ ಆಡಳಿತ ಮಂಡಳಿ ಸಿಬ್ಬಂದಿಗಾಗಿ ಜೂನ್ 22 ರಿಂದ ಜೂನ್ 25 ರವರೆಗೆ ಕಾಲೇಜಿನ ಗಣಿತ ಪ್ರಯೋಗಾಲಯದಲ್ಲಿ  ನಾಲ್ಕು ದಿನಗಳ ಅಕೌಂಟಿಂಗ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಂ.ಡಾ.  ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಸಿಬ್ಬಂದಿಯ ಕೊಡುಗೆಯು ಬೋಧಕ ಸಿಬ್ಬಂದಿಗೆ ಸಮಾನವಾಗಿದೆ ಎಂದು ಅಭಿಪ್ರಾಯಪಟ್ಟರು. ಶ್ರಮದ ಗೌರವವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಹೇಳಿದ ಅವರು, ಕೆಲಸದಲ್ಲಿ ಸಮಯಪಾಲನೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ಪ್ರತಿಯೊಂದು ವಿಷಯದಲ್ಲೂ ಎಲ್ಲರೂ ಕೈಜೋಡಿಸಿ ಕೆಲಸ ಮಾಡಿದಾಗ ಖಂಡಿತವಾಗಿಯೂ ಕಾಲೇಜನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಉಪ-ಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಮಾಡುವ ಸಮರ್ಪಿತ ಸೇವೆಯು ದೇವರಿಗೆ ಸಲ್ಲಿಸುವ ಸೇವೆಗೆ ಸಮಾನವಾಗಿದೆ. ಸಿಬ್ಬಂದಿಗಳು ಆ ಹಾದಿಯಲ್ಲಿ ನಡೆದು  ಕೀರ್ತಿ ತರಬೇಕು ಎಂದು ಹೇಳಿದರು. 


ಈ ಸಂದರ್ಭದಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್ ಆಂಡ್ ಅಪ್ರೈಸಲ್ ಸೆಲ್‌ನ ಸಂಯೋಜಕರಾದ ಡಾ. ಎಡ್ವಿನ್ ಡಿಸೋಜ ಉಪಸ್ಥಿತರಿದ್ದರು. ಎಸ್‌ಡಿಎ ಶ್ರೀ ಸುದೀಪ್ ಕ್ಲಿಟಸ್ ವಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎ ಶ್ರೀಮತಿ ಮೇರಿಯಟ್ ಶೆರ್ಲಿ ಡಿಸೋಜ ವಂದಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top