ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟ

Upayuktha
0

 


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2025-26ನೇ ಶೈಕ್ಷಣಿಕ ವರ್ಷದ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗಿದೆ. ಜೂನ್ 2ರಂದು ಆರಂಭಗೊಂಡ ಪರೀಕ್ಷೆಗಳು ಜೂನ್ 15ರಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದವು. ಮೌಲ್ಯಮಾಪನ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಎಲ್ಲಾ ಪದವಿ ಕೋರ್ಸ್‌ಗಳ ಫಲಿತಾಂಶವನ್ನು ನಿಗದಿತ ಸಮಯದಲ್ಲೇ ಪ್ರಕಟಿಸುವ ಮೂಲಕ ಕಾಲೇಜಿನ ಪರೀಕ್ಷಾ ವಿಭಾಗ ಮತ್ತೊಮ್ಮೆ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ.


ವಿಭಾಗವಾರು ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳು

ಬಿ.ಎ.

II ಸೆಮಿಸ್ಟರ್ – ಸೃಷ್ಟಿ ಶೆಣೈ – 519 ಅಂಕ (94.36%)

IV ಸೆಮಿಸ್ಟರ್ – ಫಾತಿಮತ್ ಮಿಜ್ನಾ – 571 ಅಂಕ (95.17%)

ಬಿ.ಕಾಂ.

II ಸೆಮಿಸ್ಟರ್ – ಆದಿತಿ ಡಿ – 624 ಅಂಕ (96%)

IV ಸೆಮಿಸ್ಟರ್ – ಅಫ್ರೀನಾ – 573 ಅಂಕ (95.50%)

ಬಿ.ಎಸ್‌ಸಿ.

II ಸೆಮಿಸ್ಟರ್ – ಶ್ರೀವಿದ್ಯಾ ಎನ್ – 679 ಅಂಕ (97%)

IV ಸೆಮಿಸ್ಟರ್ – ಅಶ್ವಿನಿ – 734 ಅಂಕ (97.87%)

ಬಿ.ಬಿ.ಎ.

II ಸೆಮಿಸ್ಟರ್ – ಮೋನಿಷಾ ಎಸ್ – 584 ಅಂಕ (89.85%)

IV ಸೆಮಿಸ್ಟರ್ – ವೈಷ್ಮಾ ಎಂ.ಪಿ – 563 ಅಂಕ (93.83%)

ಬಿ.ಬಿ.ಎ. (ಬಿಸಿನೆಸ್ ಅನಾಲಿಟಿಕ್ಸ್)

II ಸೆಮಿಸ್ಟರ್ – ತೇಜಸ್ವಿ – 595 ಅಂಕ (91.54%)

ಬಿ.ಸಿ.ಎ.

II ಸೆಮಿಸ್ಟರ್ – ಪ್ರತ್ಯಕ್ಷ ಪಿ.ಎ – 570 ಅಂಕ (87.69%)

IV ಸೆಮಿಸ್ಟರ್ – ಶ್ರವಣ್ ಕೆ – 619 ಅಂಕ (88.43%)

ಬಿ.ಸಿ.ಎ. (AI & ML)

II ಸೆಮಿಸ್ಟರ್ – ಅಪೇಕ್ಷಾ ಜಿ – 629 ಅಂಕ (96.77%)

IV ಸೆಮಿಸ್ಟರ್ – ಕೆ. ಸಹನಾಜ್ – 684 ಅಂಕ (97.71%)

ಬಿ.ಸಿ.ಎ. (ಡೇಟಾ ಅನಾಲಿಟಿಕ್ಸ್)

II ಸೆಮಿಸ್ಟರ್ – ಸಿಹಾ ಶಾಮ್ರಾ – 574 ಅಂಕ (88.31%)

ಬಿ.ಎಸ್‌ಸಿ. (ಡೇಟಾ ಸೈನ್ಸ್)

II ಸೆಮಿಸ್ಟರ್ – ಶರಣ್ಯಾ ಕೆ.ಎಸ್ – 674 ಅಂಕ (96.29%)


"ಸ್ವಾಯತ್ತ ಕಾಲೇಜಿನ ಪರೀಕ್ಷಾ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತ, ಪಾರದರ್ಶಕ ಹಾಗೂ ಸಮಯಬದ್ಧವಾಗಿ ನಡೆಸಿ, ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸಿರುವುದು ಪರೀಕ್ಷಾ ವಿಭಾಗದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಕುಲಸಚಿವರು (ಪರೀಕ್ಷಾಂಗ) ಡಾ ವಿನಯಚಂದ್ರ, ಅವರ ಸಮರ್ಥ ಮಾರ್ಗದರ್ಶನದಲ್ಲಿ  ಉಪ ಕುಲಸಚಿವರು (ಪರೀಕ್ಷಾಂಗ) ಶ್ರೀ ಜಾನ್ಸನ್ ಡೇವಿಡ್ ಸಿಕ್ವೇರಾ , ಶ್ರೀ ಅಭಿಷೇಕ್ ಸುವರ್ಣ ಪರೀಕ್ಷಾ ವಿಭಾಗದ ಸಿಬ್ಬಂದಿ, ಮೌಲ್ಯಮಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅತ್ಯುತ್ತಮ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರ ಪರಿಶ್ರಮ ಮತ್ತು ಬದ್ಧತೆಯ ಫಲವಾಗಿ ಪರೀಕ್ಷಾ ಪ್ರಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡು, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಮುಂದಿನ ಶೈಕ್ಷಣಿಕ ಪಯಣದಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವಂತೆ ಶುಭ ಹಾರೈಸುತ್ತೇನೆ."

— ಪ್ರಾಂಶುಪಾಲರು, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top