ವಿದ್ಯಾದಾಯಿನೀ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ರೇವತಿ ಬಿ ನಿವೃತ್ತಿ, ಬೀಳ್ಕೊಡುಗೆ

Upayuktha
0


ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಸಹಶಿಕ್ಷಕರಾಗಿ, ಪ್ರಭಾರ ಮುಖ್ಯೋಪಾಧ್ಯಾಯರಾಗಿ ಒಟ್ಟು 30 ವರ್ಷ 1 ತಿಂಗಳುಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಶ್ರೀಮತಿ ರೇವತಿ ಬಿ ಅವರ ಬೀಳ್ಕೊಡುಗೆ ಸಮಾರಂಭವು ಮೇ 30 ರಂದು ನಡೆಯಿತು.


ಈ ಸಂದರ್ಭದಲ್ಲಿ ಇವರ ಸೇವೆಯನ್ನು ಗುಣಗಾನ ಮಾಡುತ್ತಾ ನಿವೃತ್ತ ಜೀವನವು ಸುಖಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್  ಅಧ್ಯಕ್ಷೀಯ ನುಡಿಯಲ್ಲಿ ಶುಭಾಶಂಸನೆಗೈದರು.


ವೇದಿಕೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಕೆ, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ, ಹಾಗೂ ಶಾಲಾ ಸಂಚಾಲಕರಾದ  ಸುಧಾಕರ ರಾವ್ ಪೇಜಾವರ ರವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪುಷ್ಪ ಕೆ ಹಾಗೂ ಸಹ ಶಿಕ್ಷಕ ದಿವಸ್ಪತಿಯವರು ನಿವೃತ್ತರ ಬಗ್ಗೆ ಅಭಿನಂದನಾ ನುಡಿಗಳನ್ನು ಆಡಿದರು.


ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲಾ ಅಧ್ಯಾಪಕ ಸಂಘದ ವತಿಯಿಂದ ಶ್ರೀಮತಿ ರೇವತಿ ಬಿ ಅವರನ್ನು ಸನ್ಮಾನಿಸಲಾಯಿತು. ನಂತರ ಶ್ರೀಮತಿ ರೇವತಿ ಬಿ  ಅವರು ತಮ್ಮ ಸೇವಾವಧಿಯ ನೆನಪುಗಳನ್ನು  ಹಂಚಿಕೊಂಡರು. ಕಾರ್ಯಕ್ರಮವನ್ನು ನಿಯೋಜಿತ ಪ್ರಭಾರ ಮುಖ್ಯೋಪಾಧ್ಯಾಯ  ದಿವಸ್ಪತಿ ಇವರು ಸ್ವಾಗತಿಸಿ,  ಶ್ರೀಮತಿ ಉಮಾವತಿ  ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಸುಜಾತ ಕೊಡಗು ಧನ್ಯವಾದಗೈದರು.


ಈ ಸಂದರ್ಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಹಿಂದು ವಿದ್ಯಾದಾಯಿನೀ ಸಂಘದ ಆಡಳಿತ ಅಧಿಕಾರಿ ಶ್ರೀಮತಿ ಮೃದುಲಾ ಬಿನು, ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದು ಶುಭ ಹಾರೈಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top