ಮಳೆಗಾಗಿ ಪ್ರಾರ್ಥನೆ: ಉಡುಪಿ ಅನಂತೇಶ್ವರ ದೇವರಿಗೆ ಸೀಯಾಳಾಭಿಷೇಕ

Upayuktha
0


ಉಡುಪಿ: ಅನಾವೃಷ್ಟಿಯ ಆತಂಕ ನಿವಾರಿಸಿ ಒಳ್ಳೆಯ ಮಳೆ ಬೆಳೆಗಾಗಿ ಪ್ರಾರ್ಥಿಸಿ ಉಡುಪಿಯ ಶ್ರೀಮದನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಮಂಗಳವಾರ ಸಂಜೆ ಎರಡು ಸಾವಿರಕ್ಕೂ ಅಧಿಕ ಸೀಯಾಳಾಭಿಷೇಕ ಸೇವೆ ನೆರವೇರಿತು.


ಪರ್ಯಾಯ ಶ್ರೀ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.‌ ದೇವಳದ ಆಡಳಿತ ವರ್ಗ, ಅರ್ಚಕರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಲಾಗಾಯ್ತಿನಿಂದಲೂ ಮಳೆ ಕಡಿಮೆಯಾದಾಗ ಅನಂತೇಶ್ವರ ಚಂದ್ರ ಮೌಳೀಶ್ವರ ದೇವರಿಗೆ ಸೀಯಾಳಾಭಿಷೇಕ ನಡೆಸಿ ಪ್ರಾರ್ಥಿಸುವ ಸಂಪ್ರದಾಯ ನಡೆಯುತ್ತ ಬಂದಿದೆ. ಅದರ ಫಲವಾಗಿ ಸುವೃಷ್ಟಿಯಾಗಿರುವುದನ್ನೂ ಉಡುಪಿಯ ಜನ ಕಂಡಿದ್ದಾರೆ. ಅದೇ ರೀತಿ ಅತಿವೃಷ್ಡಿಯಾದಾಗಲೂ ಅದೇ ಅನಂತೇಶ್ವರನಿಗೆ ಚಿತ್ರಾನ್ನ ಸೇವೆ ಅರ್ಪಿಸಿ ಹಾನಿ ತಪ್ಪಿಸುವಂತೆ ಪ್ರಾರ್ಥಿಸುವುದೂ ವಾಡಿಕೆಯಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top