ಮಹಾನ್ ವ್ಯಕ್ತಿಯಾಗಬೇಕೆಂಬ ಹಪಹಪಿಕೆಯಿರಲಿ...
ಅಂಬೆಗಾಲಿಡುವ ಮೊದಲೇ ಓಡುವ ಹಂಬಲವಿಲ್ಲದಿರಲಿ..
ಪ್ರಸಿದ್ಧಿ,ಪಾರಿತೋಷಕಗಳು
ಅರ್ಹರಿಗಷ್ಟೇ ಸಿಗಲಿ..!!
ಸಾಧಕರ ಸಾಲಿಗೆ ಸೇರುವುದು ಎಂದರೆ ಅದೇನು ಸುಲಭದ ಮಾತೇ..
ಕನಸುಗಳಿಗೇನು ಹುಟ್ಟಿಕೊಳ್ಳುತ್ತವೆ ನನ್ನಲ್ಲೂ ಎಲ್ಲರಂತೆ..!!
ಹಾಗೆಂದು ಮನಬಂದಂತೆ
ಹಬ್ಬಿ ಹಾನಿಕಾರಕವೆನಿಸುವ
ಕಳೆಗಿಡದಂತಾಗಲಾರೆ..
ದ್ರುಮವನಾಶ್ರಯಿಸಿ ಮೂಲ ನಾಶಗೈಯುವ ಬಂದಣಿಕೆಯಂತೆ ಬದುಕಲಾರೆ..
ವೇದ್ಯವಲ್ಲದ ಅಗಣಿತದ ಪ್ರಲೋಭನೆ ಬಯಸಲಾರೆ..!!
ಮುಂದೋಡದೆ ನಿಂತಲ್ಲೇ ನಿಂತು ದುರ್ಗಂಧ ಬೀರುವ ಕೊಳಚೆಯಾಗದೆ,
ಉದರಂಭರಣಕ್ಕೆ ತರುವ
ಹಾನಿಗೈಯುವ
ಮರಕುಟಿಕನಂತಾಗದೆ;
ಮೊದಲಿಗೆ
ಸ್ವಚ್ಛತೆಯ ಕಾಪಿಡುವ ಕಾಗೆಯ ಏಕಾಗ್ರತೆಯರಿಯುವೆ..!
ತ್ಯಾಜ್ಯಗಳ ಹೊರಗೆಸೆದು ಒಳಿತನ್ನು ಒಡಲೊಳಗಿಳಿಸುವ ಅನರ್ಘ್ಯ ಸಾಗರದಂತಾಗುವೆ..!!
ತಾನೆಷ್ಟೇ ಬೆಂದರೂ
ತನ್ನನರಸಿ ಬಂದವರೀಗೆ
ನೆರಳೀಯುವ ವಟವೃಕ್ಷವಾಗುವೆ..!
ಬಿಸಿಲು,ಮಳೆ ಗಾಳಿಗಂಜದೆ ಸದೃಢವಾಗಿ ಶಿಲ್ಪಿಯ ಉಳಿಪೆಟ್ಟಿಗಷ್ಟೇ ಮೂರ್ತ ರೂಪ ಪಡೆಯುವ
ಹೆಬ್ಬಂಡೆಯ ಸ್ಥಿರತೆ ಕಲಿಯ ಬಯಸುವೆ..!!
- ಪ್ರಮೀಳಾ ಚುಳ್ಳಿಕ್ಕಾನ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


