ಮೈಸೂರು ವಾರಿಯರ್ಸ್ ಪ್ರತಿಭಾನ್ವೇಷಣೆ: 213 ಯುವ ಕ್ರಿಕೆಟಿಗರ ಸತ್ವಪರೀಕ್ಷೆ

Upayuktha
0


ಬೆಂಗಳೂರು: ಜೂನ್ 20ರಿಂದ ಆರಂಭವಾಗಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಗಾಗಿ ಮಾಜಿ ಚಾಂಪಿಯನ್ `ಮೈಸೂರು ವಾರಿಯರ್ಸ್' ಫ್ರಾಂಚೈಸಿಯು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ ಶಿಬಿರಕ್ಕೆ ರಾಜ್ಯದ ಯುವ ಆಟಗಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.


ಕರ್ನಾಟಕದ ವಿವಿಧ ಭಾಗಗಳಿಂದ ಒಟ್ಟು 213 ಉದಯೋನ್ಮುಖ ಕ್ರಿಕೆಟಿಗರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಇದರಲ್ಲಿ 68 ಆಲ್ ರೌಂಡರ್ಸ್, 63 ಮಧ್ಯಮ ವೇಗದ ಬೌಲರ್‌ಗಳು, 45 ಬ್ಯಾಟರ್‌ಗಳು, 20 ವಿಕೆಟ್ ಕೀಪರ್‌ಗಳು ಹಾಗೂ 17 ಸ್ಪಿನ್ನರ್‌ಗಳು ಕಾಣಿಸಿಕೊಂಡಿದ್ದರು. 


ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆರ್.ಎಕ್ಸ್. ಮುರಳಿಧರ್, ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್ ಮತ್ತು ಮಾಲೀಕರಾದ ಅರ್ಜುನ್ ರಂಗ ಅವರ ನೇತೃತ್ವದಲ್ಲಿ ಆಟಗಾರರ ಫಿಟ್‌ನೆಸ್ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಪ್ರಮುಖವಾಗಿ ಪರೀಕ್ಷಿಸಲಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ 15 ಪ್ರತಿಭಾವಂತ ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಲು ತೀರ್ಮಾನಿಸಲಾಗಿದೆ. ಇಲ್ಲಿ ಆಯ್ಕೆಯಾದವರು ಮುಂಬರುವ ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆಗೆ ಪರಿಗಣಿಸುವಂತೆ ಕೆಎಸ್‌ಸಿಎಗೆ ಶಿಫಾರಸು ಮಾಡಲಾಗುವುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top